HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಅಡೂರು; ಎಸ್ಪಿಸಿಯ ಶುಭಯಾತ್ರೆಯ ಟ್ರಾಫಿಕ್ ನಿಯಮ ತಿಳಿವಳಿಕೆ
     ಮುಳ್ಳೇರಿಯ: ಶುಭಯಾತ್ರೆ ಎಂಬ ಟ್ರಾಫಿಕ್ ಬೋಧನಾ ಕಾರ್ಯಕ್ರಮವನ್ನು ಅಡೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೇಟ್ಗಳು ಆದೂರು ಜನಮೈತ್ರಿ ಪೊಲೀಸರ ಸಹಕಾರದೊಂದಿಗೆ ಇತ್ತೀಚೆಗೆ ನಡೆಸಿದರು.
    ಅಡೂರು ಬಸ್ತಂಗುದಾಣ ಜಂಕ್ಷನ್ನಲ್ಲಿ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕಾದ ವಿಚಾರಗಳನ್ನು ಒಳಗೊಂಡ ಕರಪತ್ರವನ್ನು ಮತ್ತು ಜೊತೆಗೆ ಮಿಠಾಯಿಯನ್ನು ಹಂಚಿದರು. ಬಸ್, ಲಾರಿ, ಕಾರು, ಜೀಪು, ಶಾಲಾ ವಾಹನ, ಅಟೋ, ಬೈಕ್ ಮೊದಲಾದ ವಾಹನಗಳ ಚಾಲಕರಿಗೆ ಬೋಧನೆಯನ್ನು ನೀಡಿದರು. ಅಮಿತ ವೇಗ, ಅಜಾಗರೂಕತೆಯಿಂದ ವಾಹನ ಓಡಿಸಬಾರದು, ಇಕ್ಕಟ್ಟಾದ ಮತ್ತು ವಾಹನ ದಟ್ಟಣೆಯ ರಸ್ತೆಯಲ್ಲಿ ಗಮನಿಸಿ ವಾಹನ ಓಡಿಸಬೇಕು, ಮಧ್ಯಾಪಾನ ಮಾಡಿ ವಾಹನ ಓಡಿಸಬಾರದು, ಸೀಟ್ ಬೆಲ್ಟ್ ಹಾಕಿ ವಾಹನ ಓಡಿಸಬೇಕು, ಪರವಾನಗಿ ಇಲ್ಲದೆ ವಾಹನ ಓಡಿಸಬಾರದು, ಎಡಭಾಗದ ಮೂಲಕ ಓವರ್ ಟೇಕ್ ಮಾಡಬಾರದು, ವಾಹನ ಓಡಿಸುವಾಗ ಮೊಬೈಲ್ ಫೋನ್ ಉಪಯೋಗಿಸಬಾರದು, ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸಬೇಕು, ಎಲ್ಲಾ ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಮೊದಲಾದ ಸೂಚನೆಗಳನ್ನು ಒಳಗೊಂಡ ಕರ ಪತ್ರವನ್ನು ಎಲ್ಲರಿಗೂ ವಿತರಿಸಿ ಶುಭಕೋರಿದರು.
 ಆದೂರು ಪೊಲೀಸ್ ಠಾಣೆಯ ಆಧಿಕಾರಿಗಳಾದ ಭಾಸ್ಕರನ್, ಜಿಮಿನಿ, ಸಿಪಿಒ ಗಂಗಾಧರನ್, ಎಸಿಪಿಒ ಶಾರದಾ, ಶಿಕ್ಷಕರಾದ ಸಂತೋಷ್ ಕುಮಾರ್, ಸನಿಲ್ ದಾಸ್, ಎ.ಎಂ.ಅಬ್ದುಲ್ ಸಲಾಂ ಕೆಡೇಟ್ಗಳಿಗೆ ಸೂಚನೆ ನೀಡಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries