ಧ.ಗ್ರಾಮಾಭಿವೃದ್ದಿ ಯೋಜನೆ ಪ್ರೇರಣದಾಯಿ-ಕಿದೂರುಗುತ್ತು ರಘುರಾಮ ರೈ
ಕುಂಬಳೆ: ಆರಾಧನಾಲಯಗಳನ್ನು ಕೇಂದ್ರೀಕರಿಸಿ ಸತ್ಪ್ರೇರಣೆ ನೀಡುವ ಕಾರ್ಯಚಟುವಟಿಕೆ ಹಮ್ಮಿಕೊಳ್ಳುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ನಾಡಿನ ಹೆಮ್ಮೆ. ಸಾಮಾಜಿಕ ಪರಿವರ್ತನೆಯಲ್ಲಿ ಯೋಜನೆಯು ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳಿಂದ ಎಲ್ಲರೂ ಪ್ರೇರಣೆಪಡೆದು ಅನುಸರಿಸುವ ಮನಸ್ಸು ತಳೆಯಬೇಕು ಎಂದು ಕಿದೂರು ಮಹಾದೇವ ದೇವಸ್ಥಾನದ ಆಡಳಿತ ಮೊಕ್ತೇಸರ ಕಿದೂರುಗುತ್ತು ರಘುರಾಮ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂಬಳೆ ವಲಯ ವ್ಯಾಪ್ತಿಯ ಕಳತ್ತೂರು ಮತ್ತು ಕಿದೂರು ಒಕ್ಕೂಟಗಳ ಪ್ರಗತಿಬಂಧು-ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಭಾನುವಾರ ಕಿದೂರು ಶ್ರೀಮಹಾದೇವ ಕ್ಷೇತ್ರ ಪರಿಸರದಲ್ಲಿ ಆಯೋಜಿಸಲಾದ ಸ್ವಚ್ಚತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದ ಇನ್ನೋರ್ವ ಮೊಕ್ತೇಸರರಾದ ಮಹಾಲಿಂಗ ಭಟ್, ಕುಂಬಳೆ ವಲಯ ಮೇಲ್ವಿಚಾರಕಿ ಶೋಭಾ ಐ, ಜ್ಞಾನ ವಿಕಾಸ ಯೋಜನೆಯ ಸಮನ್ವಯಾಧಿಕಾರಿ ಆಶಾಚಂದ್ರ ದೇವಾಡಿಗ, ಸೇವಾ ಪ್ರತಿನಿಧಿ ಮೌನೇಶ್ವರಿ, ಕಿದೂರು ಒಕ್ಕೂಟದ ಅಧ್ಯಕ್ಷ ಮಹೇಶ್ ಪುಣಿಯೂರು ಹಾಗೂ ವಿವಿಧ ಪ್ರಗತಿಬಂಧು-ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭ ಕ್ಷೇತ್ರ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.