HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಮನೆಗೆ ಪೆಟ್ರೋಲ್ ಬಾಂಬ್ ಎಸೆತ: ಉಪ್ಪಳದಲ್ಲಿ ಪ್ರತಿಭಟನೆ
    ಉಪ್ಪಳ:  ಹಿಂದೂಗಳ ಭಾವನೆಗಳನ್ನು ಪರೀಕ್ಷಿಸುವಂತೆ ಇತ್ತೀಚೆಗೆ ಅಲ್ಲಲ್ಲಿ ಧಾಳಿಗಳಾಗುತ್ತಿದೆ. ಮಾನಸಿಕವಾಗಿ, ದೈಹಿಕವಾಗಿ ದುರ್ಬಲಗೊಳಿಸಿ ಹೊಸಕಿಹಾಕುವ ಯತ್ನಗಳು ಹಿಂದಿನಿಂದಲೂ ನಡೆಯುತ್ತಿದ್ದು, ತಾಳ್ಮೆ,ಸಮಾಧಾನಗಳ ಕಾರಣ ಸಾಮಾಜಿಕ ಏಕತೆಗೆ ಕುಂದುಬಂದಿಲ್ಲ. ಆದರೆ ಮಿತಿಮೀರಿದ ಅನ್ಯಾಯವನ್ನು ಪ್ರಶ್ನಿಸುವ ಕಾಲವೂ ಸನ್ನಿಹಿತವಾಗಿದೆಯೋ ಎಂಬಲ್ಲಿಯ ವರೆಗೆ ಇಂದಿನ ಸ್ಥಿತಿ ನಿಮರ್ಾಣವಾದಂತಿದೆ ಎಂದು ಹಿಂದೂ ಐಕ್ಯವೇದಿಯ ರಾಜ್ಯ ಉಪಾಧ್ಯಕ್ಷ, ಬ್ರಹ್ಮಶ್ರೀ ಕುಮಟಾರು ರವೀಶ ತಂತ್ರಿ ಕರೆನೀಡಿದರು.
    ಐಲ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ರವರ ಮನೆಗೆ ಗುರುವಾರ ರಾತ್ರಿ ದುಷ್ಕಮರ್ಿಗಳು ಪೆಟ್ರೋಲ್ ಬಾಂಬ್ ಎಸೆದ ಕೃತ್ಯವನ್ನು ಪ್ರತಿಭಟಿಸಿ ಐಲ ಕ್ಷೇತ್ರದ ಭಕ್ತವೃಂದದ ವತಿಯಿಂದ ಶನಿವಾರ ಸಂಜೆ ಉಪ್ಪಳದಲ್ಲಿ ಆಯೋಜಿಸಲಾದ ಪ್ರತಿಭಟನೆ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು.
   ಐಲ ಮೈದಾನವನ್ನು ಸ್ವಾಧೀನ ಪಡಿಸುವ ಹುನ್ನಾರದ ವಿರುದ್ದ ಸಮಸ್ತ ಸನಾತನಿಗಳು ಒಗ್ಗಟ್ಟಾಗಿರುವುದು ವಿದ್ರೋಹಿ ಶಕ್ತಿಗಳಿಗೆ ನುಂಗಲಾದ ತುತ್ತಾಗಿದ್ದು, ಯಾವ ಕಾರಣಕ್ಕೂ ಶರಣಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಅಮಾಯಕ ಹಿಂದೂಗಳ ಮೇಲಿನ ಹಲ್ಲೆ ಹೆಡಿತನ ಮತ್ತು ಅವರಲ್ಲಿರುವ ಧಾಮರ್ಿಕ ಪ್ರಜ್ಞೆಯ ಕೊರತೆಯ ಕಾರಣದಿಂದ ಎಂದು ತಿಳಿಸಿದರು.
   ಐಲ ಕ್ಷೇತ್ರದ ಪರಿಸರದಿಂದ ಹೊರಟ ಬೃಹತ್ ಮೆರವಣಿಗೆ ಉಪ್ಪಳದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಭೆಯಲ್ಲಿ ಐಲ ಕ್ಷೇತ್ರದ ಸೇವಾ ಸಮಿತಿ ಗೌರವಾಧ್ಯಕ್ಷ ನಾರಾಯಣ ಶೆಟ್ಟಿ ಬೊಳ್ಳಾರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಡಳಿತ ಮೋಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಸೇವಾಸಮಿತಿ ಅಧ್ಯಕ್ಷ ದಿನೇಶ್ ಬುಡಾಲೆ, ಮೋಕ್ತೇಸರ ಸುಕುಮಾರ ಯು, ಸಿ.ಎಸ್.ಕೃಷ್ಣಪ್ಪ ಐಲ್, ದೇವಸ್ವಂ ಬೋಡರ್್ ಏರಿಯಾ ಸದಸ್ಯ ಅಜರ್ುನ್ ತಾಯಲಂಗಾಡಿ, ಸಂಘ ಪರಿವಾರದ ಪ್ರಮುಖರಾದ ಗೋಪಾಲ ಶೆಟ್ಟಿ ಅರಿಬೈಲು, ಜಗನ್ನಾಥ ಶೆಟ್ಟಿ ಕುಂಬಳೆ, ಶ್ರೀಧರ ಶೆಟ್ಟಿ ಮುಟ್ಟಂ, ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ, ಗೋವಿಂದ ಪ್ರಸಾದ್, ವೀರಪ್ಪ ಅಂಬಾರು, ಸುರೇಶ್ ಶೆಟ್ಟಿ ಪರಂಕಿಲ, ಬಾಲಕೃಷ್ಣ ಅಂಬಾರು, ಸುರೇಶ್ ಶೆಟ್ಟಿ ಹೇರೂರು, ಹರಿಶ್ಚಂದ್ರ ಮಂಜೇಶ್ವರ, ಮಹೇಶ್ ಕೆ.ವಿನ್ ರಾಜ್ ಪ್ರತಾಪನಗರ, "ಜಯ ರೈ, ಸೀತಾರಾಮ ಭಂಡಾರಿ, ಸರೋಜ ಆರ್.ಬಲ್ಲಾಳ್, ಜಯಶ"ರ್ುಳ, ಚಂದ್ರಕಲ ಶೆಟ್ಟಿ ಹಾಗೂ ಐಲ ಕ್ಷೇತ್ರದ ಸೇವಾಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ವಾನಂದ ಸ್ವಾಗತಿಸಿ,ಬಾಲಕೃಷ್ಣ ಶೆಟ್ಟಿ ಕುಬಣೂರು ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries