ಜಗತ್ತಿನ ಅತಿ ಪ್ರಾಚೀನ ಸಂಸ್ಕೃತಿಯಾದ ಭರತ ಖಂಡದ ವಿಶಿಷ್ಟತೆ ಜಗತ್ತಿಗೇ ಯಾವತ್ತೂ ಬೆರಗು. ಇಂತಹ ಸಮೃದ್ದ ಸಂಸ್ಕ್ರತಿ ಬೆಳೆದು ಬರುವಲ್ಲಿ ಇಲ್ಲಿಯ ಮಹತ್ವಪೂರ್ಣ ಆಧ್ಯಾತ್ಮಿಕತೆಯೇ ಪ್ರಧಾನ ಕಾರಣವಾಗಿದ್ದು, ಕಾಲಾಕಾಲಕ್ಕೆ ಅದನ್ನು ಉದ್ದರಿಸಲು ಮಹನೀಯರು ಅವತರಿಸಿ ಬಮದಿದ್ದಾರೆ. ಈ ಹಿನ್ನೆಲೆಯಲ್ಲಿ ನಮಗೆ ಇತ್ತೀಚೆಗಿನ ಇಂತಹ ವ್ಯಾಪಕತೆ ನೀಡಿದವರು ಸ್ವಾಮಿ ವಿವೇಕಾನಂದರು. ಇಂದು ಆ ಮಹಾನ್ ಯುಗಶಕ್ತಿಯ ಜನ್ಮ ದಿನ. ಈ ನಿಮಿತ್ತ ನಮ್ಮೊಳಗಿನ ವಿವೇಕ ಜಾಗೃತವಾಗಲು ಗಡಿನಾಡಿನ ಯುವ ವಾಗ್ಮಿ, ಸಂಘಟಕ ಎಸ್.ಎಂ.ಉಡುಪ ಸಮರಸಕ್ಕೆ ಬರೆಯುತ್ತಾರೆ.ನಿಮಗಿಷ್ಟವಾಗಿ ಅಂತರಂಗದಲ್ಲಿ ಅಚ್ಚಳಿಯದೆ ಉಳಿಯಲೆಂಬುದು ನಮ್ಮ ಆಶಯ.
ಸಂಪಾದಕ


