HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಗ್ರಾಮೀಣ ಸೇವೆಯೇ ಉಸಿರಾಗಿಸಿದವರು-  ಸುದರ್ಶನ ಬಳಗದಿಂದ ಪೆರ್ಲ ಸ್ವರ್ಗ ರಸ್ತೆ ತಿರುವುಗಳಲ್ಲಿನ ಅಪಾಯಕಾರಿ ಕಾಡು ಪೊದೆ ಮತ್ತೆ ತೆರವು
  ಪೆರ್ಲ: ನಿರಂತರ ಕ್ರಿಯಾತ್ಮಕತೆ ವ್ಯಕ್ತಿತ್ವವನ್ನು ಬೆಳೆಸುವುದರೊಂದಿಗೆ ಸಮಗ್ರ ಪರಿಸರಾಭ್ಯುದಯದಲ್ಲೂ ಮಹತ್ವದ ಪಾತ್ರವಹಿಸುವುದೂ ಹೌದು. ಆಧುನಿಕ ವ್ಯವಸ್ಥೆಯಲ್ಲಿ ನವೀನತೆಯ ಬಳಕೆಯ ಮಧ್ಯೆ ನಮ್ಮ ಕರ್ತವ್ಯ, ಶ್ರದ್ದೆಗಳನ್ನು ಮರೆಮಾಚುವ ವಿದ್ಯಮಾನಗಳು ಹೆಚ್ಚುತ್ತಿರುವುದು ಗಂಭೀರ ಪರಿಣಾಮಕ್ಕೆಡೆಯಾಗಲಿದೆ. ಗಾಂಧಿಯವರ ರಾಮ ರಾಜ್ಯದ ಕನವರಿಕೆಯನ್ನಷ್ಟೇ ಮಾಡುವುದಲ್ಲದೆ "ನನ್ನ" ಕೊಡುಗೆಯನ್ನು ಈ ನಿಟ್ಟಿನಲ್ಲಿ ನೀಡಲು ಮರೆಯುತ್ತೇವೆ...ಅಥವಾ ಅಂತೆ ನಟಿಸುತ್ತೇವೆ. ಆದರೆ ಯುವ ಸಮೂಹಕ್ಕೆ ಸ್ಪೂತರ್ಿಯ ಸೆಲೆಯಾಗಿ ಇಂತಹದೊಂದು ಕಾಯಕದಲ್ಲಿ ನಿರಂತರತೆಯನ್ನು ಕಾಪಿಟ್ಟಿರುವ ಗಡಿ ಗ್ರಾಮ ಪ್ರದೇಶ ಸ್ವರ್ಗದ ಸುದರ್ಶನ ಗ್ರಾಮೀಣಾಭಿವೃದ್ದಿ ಸಂಘ ತನ್ನ ಕಾರ್ಯಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ಭರವಸೆಯನನು ಹಸಿರಾಗಿಸಿ ಮೆಚ್ಚುಗೆಗೆ ಪಾತ್ರವಾಗಿದೆ. 
    ಗ್ರಾಮೀಣ ಅಭಿವೃದ್ಧಿಯ ಕನಸಿನೊಂದಿಗೆ ರೂಪೀಕರಣಗೊಂಡ  ಟೀಮ್ ಸುದರ್ಶನವು ದಿನಾ ಒಂದಿಲ್ಲೊಂದು ಸಾರ್ವಜನಿಕ ಹಿತಾಸಕ್ತಿಯ ಕಾರ್ಯವನ್ನು ಕೈಗೊಂಡು ಎಲ್ಲರ ಗಮನ ಸೆಳೆಯುತ್ತಾ ಮನೆ ಮಾತಾಗಿ ಬೆಳೆಯುತ್ತಿದೆ.
   ಸತತ ಅಪಘಾತಗಳಿಗೆ ಕಾರಣವಾದ ಸ್ವರ್ಗ ಪಳ್ಳಂದ್ರೋಡಿಯಲ್ಲಿನ ಗಿಡ ಗಂಟಿ ಮುಳ್ಳು ಕಾಡುಗಳನ್ನು  ತೆರವು ಗೊಳಿಸಿ ವಾಹನಗಳಿಗೆ ಎದಿರು ದಿಶೆಯಿಂದ ವಾಹನವನ್ನು ಗುರುತಿಸುವಂತೆ ಹಾಗೂ ಅಪಘಾತ ನಿವಾರಣೆಯಲ್ಲಿ ಬಲುದೊಡ್ಡ ಕೊಡುಗೆಯನ್ನು ನೀಡಿದ್ದು ಇಂದು ಬನತ್ತಡಿ,  ಸ್ವರ್ಗ ಸೇತುವೆ ಬಳಿ , ಸ್ವರ್ಗ ಜಂಕ್ಷನ್ ಬಳಿಯಲ್ಲಿನ ಕಾಡು ಪೊದೆ ಗಿಡ ಗಂಟಿಗಳ ತೆರವು ಕಾಯರ್ಾಚರಣೆ ನಡೆಯಿತು*
*ಇಂದಿನ ಕಾಯರ್ಾಚರಣೆಯಾದ  ಸುರಕ್ಷಾ ಯೋಜನೆ ಕಾರ್ಯ ರೂಪಕ್ಕೆ ತರುವಲ್ಲಿ ಅಜಿತ್ ಸ್ವರ್ಗ,ರಾಧಾಕೃಷ್ಣ ಇಳಂತೋಡಿ, ಸಜಿತ್ ಸ್ವರ್ಗ ,ಪುರುಷೋತ್ತಮ  ಎಸ್, ಹರಿಕೃಷ್ಣ, ಅನಂತಕೃಷ್ಣ ಭಟ್, ಅಟೋ ಟ್ಯಾಕ್ಸಿ ಚಾಲಕರಾದ  ರತೀಶ್ ವಾಣೀನಗರ , ಪ್ರಕಾಶ್ ಪಡ್ಪು ಪಾಲ್ಗೊಂಡರು.
   ಈ ಮೊದಲು ಸುದರ್ಶನವು ಅಶ್ವಮೇಧ ಯೋಜನೆಯೊಂದಿಗೆ:
    ಎಂಡೋ ಪೀಡಿತ ಕುಟುಂಬಗಳನ್ನೊಳಗೊಂಡ ಮಲೆತ್ತಡ್ಕ ಹಾಗೂ ಪಿಲಿಂಗಲ್ಲು  ಎಂಬೆಡೆಗಳಿಗೆ ನೂತನ ರಸ್ತೆ ಸಂಪರ್ಕಗಳಿಗೆ ಕಾರಣೀ ಭೂತವಾದ ಸುದರ್ಶನವು ಲೋಕೋಪಯೋಗಿ ರಸ್ತೆಯ ಡಾಮರೀಕರಣ ನಡೆಯುವ ವೇಳೆ ಕಾವಲುಗಾರನ ಪಾತ್ರ ವಹಿಸಿ ಸುವ್ಯವಸ್ಥಿತ ರಸ್ತೆ ನಿಮರ್ಾಣವಾಗುವಲ್ಲಿ ಮಹತ್ತರ ಪಾತ್ರ ವಹಿಸಿತ್ತಲ್ಲದೆ ಮೂರು ಧರೆಗೆ ಉರುಳಿದ್ದ ಮೂರು ಡ್ರನೇಜ್ ಪೈಪ್ ತಡೆಗೋಡೆ ಗಳನ್ನು ಪುನಸ್ಥರ್ಾಪಿಸಿದುದಲ್ಲದೆ ಸುತ್ತು ಸಾರ್ವಜನಿಕರ ಆಥರ್ಿಕ ಸಹಾಯದೊಂದಿಗೆ ಮುತ್ತಲಿನ ರಸ್ತೆಗಳ ದುರಸ್ತಿ ಕಾರ್ಯಗಳನ್ನು ನೆರವೇರಿಸಿತ್ತು
ಬಸ್ ಸಾಂಚಾರ ವಿರಳವಾಗಿದ್ದ ವಾಣೀನಗರ ಕ್ಕೆ ದಿನವಹಿ ಎರಡು ಟ್ರಿಪ್ ಬಸ್ ಸಂಚಾರ ನಡೆಸುವಲ್ಲಿಯೂ ಸುದರ್ಶನವು ಪ್ರಧಾನ ಪಾತ್ರ ವಹಿಸಿತ್ತು.
   ಬೇಸಗೆಯಲ್ಲಿ ನೀರಿಲ್ಲದೆ ಸಂಕಷ್ಟ ಪಡುತ್ತಿದ್ದ ಹಲವು ಮನೆಗಳಿಗೆ ಜಲಧಾರಾ ಯೋಜನೆಯಡಿಯಲ್ಲಿ ನೀರಿನ ವಿತರಣೆ  ವ್ಯವಸ್ಥೆ ಮಾಡಿತ್ತು.
ವಾಚಕ ಮಿತ್ರ ಯೋಜನೆಯಲ್ಲಿ ಸ್ವರ್ಗ ಬಸ್ ತಂಗು ನಿಲ್ದಾಣ ಬಳಿಯಲ್ಲಿ ಓದುಗರಿಗಾಗಿ ದಿನಾ ನಾಲ್ಕು ದಿನ ಪತ್ರಿಕೆಗಳನ್ನು  ನಾಗರಿಕರ ಸ್ಪೋನ್ಸರ್ ಶಿಪ್ ನೊಂದಿಗೆ ಇರಿಸಲಾಗುತ್ತಿದೆ ಹಾಗೂ ಓಪರೇಶನ್ ಕುಬೇರ ಯೋಜನೆಯೊಂದಿಗೆ ವಿವಿಧ ಇಲಾಖೆಗಳಿಗೆ ಕಾಗದ ಪತ್ರ ಮನವಿ ಸಲ್ಲಿಸುವ ಯೋಜನೆಯನ್ನೂ ಅಳವಡಿಸಿಕೊಂಡಿದೆ. ಒಟ್ಟಿನಲ್ಲಿ ಸಾರ್ವಜನಿಕರ  ಆಹುವಾಲುಗಳನ್ನು  ಸ್ವೀಕರಿಸಿ ನಾಡಿನ ಉನ್ನತ ಅಭಿವೃಧ್ಧಿ ಗಾಗಿ ಮಾದರಿ ಗುಂಪಾಗಿ ಬೆಳೆಯುತ್ತಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries