ಬಾಯಿಕಟ್ಟೆಯಲ್ಲಿ ಸಾರ್ಥಕಗೊಂಡ ಶಾಲಾ ಕನ್ನಡ ಪ್ರತಿಭೆಗಳ ಸಮ್ಮಿಲನ
ಉಪ್ಪಳ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಪೈವಳಿಕೆ ಸಮೀಪದ ಬಾಯಿಕಟ್ಟೆಯ ಮಣಿಕಂಠ ಬಾಲವೃಂದ ಜಂಟಿಯಾಗಿ ಭಾನುವಾರ ದಿನಪೂತರ್ಿ ಬಾಯಿಕಟ್ಟೆ ಶ್ರಿಅಯ್ಯಪ್ಪ ಭಜನಾ ಮಮದಿರ ಪರಿಸರದಲ್ಲಿ ವಿನೂತನ ಕನ್ನಡ ಪ್ರತಿಭೆಗಳ ಸಮ್ಮಿಲನ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆಯಿತು.
ಜಿಲ್ಲೆಯ ಹಿರಿಯ ಪ್ರಾಥಮಿಕ, ಹೈಸ್ಕೂಲು ಮತ್ತು ಪ್ಲಸ್ ಟು ವಿದ್ಯಾಥರ್ಿಗಳು, ಜಿಲ್ಲಾ ಮತ್ತು ರಾಜ್ಯಮಟ್ಟದ ಕಲೆ ಮತ್ತು ಸಾಹಿತ್ಯ ಸ್ಪಧರ್ೆಗಳಲ್ಲಿ ಭಾಗವಹಿಸಿದವರು ಪಾಲ್ಗೊಂಡು ಹೊಸತನದ ಮೆರುಗು ನಿಡುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು.
ಸಾಂಪ್ರದಾಯಿಕವಾದ ಉದ್ಘಾಟನೆ, ಸ್ವಾಗತಗಳಂತಹ ಯಾವ ಗೊಂದಲಗಳೂ ಇಲ್ಲದೆ 150ಕ್ಕಿಂತಲೂ ಮಿಕ್ಕಿದ ವಿದ್ಯಾಥರ್ಿಗಳು ಭಾಗವಹಿಸಿದ ಕಾರ್ಯಕ್ರಮಕ್ಕೆ ನಿವೃತ್ತ ಪ್ರಾಂಶುಪಾಲ, ಕವಿ ಪ್ರೊ.ಪಿ.ಎನ್.ಮೂಡಿತ್ತಾಯ ಬೆನ್ನೆಲುಬಿನ ಮಾರ್ಗದರ್ಶಕರಾಗಿ ಸಹಕರಿಸಿದರು. ನಿಟ್ಟೆ ವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಸಾಹಿತಿ, ಶಿಕ್ಷಣ ತಜ್ಞ ಪಿ.ಬಿ.ಕುಳಮರ್ವ, ಶಿಕ್ಷಕ ವೀರೇಶ್ವರ ಮಾಸ್ತರ್, ಶಿಕ್ಷಕ ಹಾಗೂ ನಾಟಕ ನಿದರ್ೇಶಕ ಉದಯ ಸಾರಂಗ್, ಜಯಪ್ರಕಾಶ್ ಶೆಟ್ಟಿ, ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು, ತಾರಾನಾಥ ಪೆರ್ಲ ಮೊದಲಾದವರು ವಿದ್ಯಾಥರ್ಿಗಳಿಗೆ ಮಾರ್ಗದಶರ್ಿಕರಾಗಿ ಸಹಕರಿಸಿದರು.
ವಿದ್ಯಾಥರ್ಿಗಳಲ್ಲಿ ಅಪೂರ್ವ ಪ್ರತಿಭೆ ಅಡಗಿದೆ.ಆದರೆ ಅವರು ಜೊತೆ ಸೇರಿ ತಮ್ಮ ಅನುಭವ,ಸಮಸ್ಯೆ ಮತ್ತು ಕನಸುಗಳನ್ನು
ಹಂಚಿಕೊಳ್ಳುವುದಕ್ಕೆ ಸಂದರ್ಭಗಳಿಲ್ಲ. ಅದಕ್ಕಾಗಿಯೇ ಇಂಥ ಅವಕಾಶವೊಂದನ್ನು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಮಣಿಕಂಠ ವೃಂದ ಒದಗಿಸಿದೆ ಎಂದು ಸಂಯೋಜಕರಾದ ಪ್ರೊ.ಪಿ.ಎನ್ ಮೂಡಿತ್ತಾಯ ವಿಜಯವಾಣಿಯೊಂದಿಗೆ ಆಶಯ ವ್ಯಕ್ತಪಡಿಸಿದರು.
ಏನಲ್ಲ ಇತ್ತು:
ಕಾರ್ಯಕ್ರಮದ ಭಾಗವಾಗಿ ನಡೆದ ಸಂವಾದದಲ್ಲಿ ಸನ್ನಿಧಿ ಟಿ ರೈ ,ತೇಜಸ್ವಿನಿ ಕಡೆಂಕೋಡಿ, ಡ್ರಾಮಾ ಜೂನಿಯಸರ್್ ಕಲಾವಿದ ಅನೂಪ್ ರಮಣ ಶಮರ್ಾ ಮುಳ್ಳೇರಿಯ, ಅನಘ ಶ್ಯಾಂ ,ಆದಿಶ್ರೀ ಮುಂತಾದ ರಾಜ್ಯ ,ರಾಷ್ಟ್ರ ಮಟ್ಟದ ಅನೇಕ ಕಲಾವಿದರು ಭಾಗವಹಿಸಿ ಅನುಭವ ಹಂಚಿಕೊಂಡರು. ಸವಾಲುಗಳಿಗೆ ಉತ್ರ ಪಡೆದರು.
ಮಂಜೇಶ್ವರದ ಶ್ರೀಮದ್ ಅನಂತೇಶ್ವರ ಶಾಲಾ ವಿದ್ಯಾಥರ್ಿಗಳು ಅಭಿನಯಿಸಿದ ಕಿರು ನಾಟಕ ಮೊಬೈಲ್ ಪೋನ್ ಅತಿ ಬಳಕೆಯ ದುರಂತವನ್ನ ಮನೋಜ್ಞವಾಗಿ ತೋರಿಸಿಕೊಟ್ಟಿತು. ಕಿರಿಯ ಜಾದೂಗಾತರ್ಿ ತೇಜಸ್ವಿನೀ ಕಡೆಂಕೋಡಿ ತನ್ನ 310ನೇ ಇಂದ್ರಜಾಲ ಪ್ರದರ್ಶನವನ್ನು ಶಿಬಿರಾಥರ್ಿಗಳಿಗೆ ಮಾಡಿತೊರಿಸುವುದರೊಂದಿಗೆ ಜಾದೂ ಮನಸ್ಸು, ಬುದ್ದಿಗೆ ಹುಮ್ಮಸ್ಸು ನೀಡುತ್ತದೆ ಎಂದು ತಿಳಿಸಿದಳು.
ಹಾಡು, ಕಥೆ,ಕವನ, ಅಭಿನಯ, ಚಚರ್ೆ, ಪ್ರದರ್ಶನ ಸಹಿತ ವಿವಿಧ ಆಯಾಮಗಳಲ್ಲಿ ದಿನಪೂತರ್ಿ ನಡೆದ ಸಮಾರಂಭ ಕನ್ನಡ ಯುವ ಮನಸ್ಸುಗಳಿಗೆ ಹೊಸ ಚೇತನ ಒದಗಿಸುವಲ್ಲಿ ಯಶಸ್ವಿಯಾಯಿತು.