HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಭಾರತೀಯ ಕಿಸಾನ್ ಸಂಘ ಪೈವಳಿಕೆ ಸಭೆ
  ಉಪ್ಪಳ: ಭಾರತೀಯ ಕಿಸಾನ್ ಸಂಘದ ಪೈವಳಿಕೆ ಪಂಚಾಯತು ಕಾರ್ಯಕರ್ತರ ಸಭೆಯು ಇತ್ತೀಚೆಗೆ ಜೋಡುಕಲ್ಲು ಶಿಶು ಮಂದಿರದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಉಳುವಾನ ಸುಬ್ಬಣ್ಣ ಭಟ್ ವಹಿಸಿದ್ದರು.
   ಭಾರತೀಯ ಕಿಸಾನ್ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀರಾಮ ಮಾಸ್ತರರವರು ರಾಷ್ಟ್ರೀಯತೆಯನ್ನೂ ಕೃಷಿಕರ ಸರ್ವತೋಮುಖ ಅಭಿವೃದಿಯನ್ನೂ ಮುಂದಿರಿಸಿಕೊಂಡು ರೈತರನ್ನು ಸಂಘಟಿಸಿ ಅಥರ್ಿಕ ಹಾಗೂ ಸಾಮಾಜಿಕ ಮತ್ತು ವಿದ್ಯಾಭ್ಯಾಸ ಪರವಾಗಿ ಸಬಲರನ್ನಾಗಿ ಮಾಡುವುದು ಭಾರತೀಯ ಕಿಸಾನ್ ಸಂಘದ ಗುರಿ. ರೈತರು ಸಂಘಟಿತರಾಗಿಲ್ಲ ಎಂಬ ಕಾರಣದಿಂದ ಸ್ವಾತಂತ್ಯ ನಂತರ ನಮ್ಮನ್ನಾಳಿದ ಸರಕಾರಗಳಾಗಲಿ, ರಾಜಕೀಯ ನಾಯಕರಾಗಲಿ ರೈತರ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರೈತ ಬೆಳೆದ ಉತ್ವನ್ನಗಳಿಗೆ ಸರಿಯಾದ ಮಾರುಕಟ್ಟೆಗಳಿಲ್ಲದೆ ನಿಗದಿತ ಬೆಲೆ ,ದಾಸ್ತಾನು ಮಾಡುವ ವ್ಯವಸ್ದೆಗಳಲ್ಲದೆ ಸಮಸ್ಯೆಗೊಳಗಾಗಿದ್ದಾರೆ ಎಂದು ಅವರು ತಿಳಿಸಿದರು. ವರ್ಷದಿಂದ ವರ್ಷಕ್ಕೆ ಸಾಲಗಾರನಾಗಿ ಆತ್ಮಹತ್ಯೆಯತ್ತ ಮುಖ ಮಾಡುವ ಪರಿಸ್ಧಿತಿ ಒಂದೊದಗಿದೆ. ಕಳೆದ 5 ವರ್ಷದಲ್ಲಿ 5 ಲಕ್ಷ ಕೃಷಿಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.ರೈತ ಬೆಳೆದ ಕೃಷಿ ಉತ್ವನ್ನಗಳಿಗೆ. ಉತ್ಪಾದನಾ ವೆಚ್ಚ ಮತ್ತು ಲಾಭಾಂಶ ಸೇರಿಸಿ ನೈಜ ಬೆಲೆ ಸಿಗುವಲ್ಲಿ ಸರಕಾರಗಳು ಮುಂದಾಗುವ ಯೋಚನೆ ಮತ್ತು ಯೋಜನೆ ಮಾಡಬೇಕು ಎಂದು ಅವರು ತಿಳಿಸಿದರು.
    ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದಶರ್ಿ ಕೊಮ್ಮಂಡ ಸದಾನಂದರವರು ಮಾತನಾಡಿ, ರಾಜಕೀಯ ರಹಿತವಾದ ಭಾರತೀಯ ಕಿಸಾನ್ ಸಂಘದಲ್ಲಿ ರೈತರು ಸದಸ್ಯರಾಗಿ ಸಂಘವನ್ನು ಬಲಪಡಿಸಬೇಕೆಂದು ಕರೆನೀಡಿದರು. ನಮ್ಮ ಹಿರಿಯರು ಪರಂಪರಾಗತವಾಗಿ ಹಿಂದಿನಿಂದ ನಡೆಸಿಕೊಂಡು ಬಂದ ಸಾವಯವ ಕೃಷಿಯತ್ತ ನಾವು ಗಮನಹರಿಸಬೇಕಾದ ಅವಶ್ಯಕತೆ ಇದ್ದು, ಭೂಮಿಯ ಫಲವತ್ತತೆಯನ್ನು ಪರಿಸರವನ್ನು ನೀರನ್ನು  ಯಾವೂದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕಲುಷಿತಗೊಳಿಸದೇ ಮುಂದಿನ ಪೀಳಿಗೆ ಅರೋಗ್ಯಕರವಾಗಿ ಉಳಿದು ಅವರ ಅರೋಗ್ಯ ಪೂರ್ಣ ಬದುಕಿಕಾಗಿ ನಾವೆಲ್ಲ ಶ್ರಮಿಸೋಣ ಎಂದು ತಿಳಿಸಿದರು. ಜನವರಿ 26 ರಂದು ಪಂಚಾಯತು ಮಟ್ಟದ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಜರಗಲಿದ್ದು  ಸಾವಯವ ಕೃಷಿ ಮತ್ತು ರೈತರಿಗೆ ಸರಕಾರದಿಂದ ಸಿಗುವ ಸವಲತ್ತಿನ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
  ಬಾ.ಕಿ.ಸಂ ಜಿಲ್ಲಾ ಕೋಶಾಧ್ಯಕ್ಷ  ಜಗದೀಶ್ ಶೆಟ್ಟಿ ಕಲ್ಲಗದ್ದೆ  ಈ ಸಂದರ್ಭ ನೂತನ ಪೈವಳಿಕೆ ಪಂಚಾಯತು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳನ್ನು ಘೋಷಿಸಿದರು.
    ಅಧ್ಯಕ್ಷರಾಗಿ ಸುರೇಶ್ ಹೊಳ್ಳ ಕಯ್ಯಾರು, ಉಪಾಧ್ಯಕ್ಷರಾಗಿ ಬಾಬು ಮೂಲ್ಯ ಕೋರಿಕ್ಕಾರ್, ರಾಮಣ್ಣ ಅತ್ತಾರ್ ಕಯ್ಯಾರ್, ಅಮ್ಮು ಶೆಟ್ಟಿ ಪೊನ್ನೆತ್ತೋಡು, ಪ್ರಧಾನಕಾರ್ಯದಶರ್ಿಯಾಗಿ  ವಿಶ್ವನಾಥ ಮಾಣಿಪ್ಪಾಡಿ,  ಕೋಶಾಧಿಕಾರಿಯಾಗಿ ನವೀನ್ ಶೆಟ್ಟಿ ಪಿಲಿಯಂದೂರು, ಜೊತೆ ಕಾರ್ಯದಶರ್ಿಗಳಾಗಿ ಜಗದೀಶ್ ಕುರುಡಪದವು, ಸನತ್ ಕುಮಾರ ರೈ ಕಳ್ಳಿಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವೀಶ್ ಭಟ್ ಕಳಾಯಿ,ದಾಮೋಧರ ಮಡಂದೂರು,ಪ್ರಕಾಶ್ ಶೆಟ್ಟಿ ಮಂಜಲ್ತೋಡಿ. ಚಂದ್ರಕಾಂತ್ ಅರಿಯಾಳ,ಅಣ್ಣು ಅಮ್ಮೇರಿ ಮಹಾಬಲಿಕ್ಕೆ ಮಂಜಲ್ತೋಡಿ ಹರೀಶ ಶೆಟ್ಟಿ ಸೇನೆರೆಪಾಲು ಕುಮಾರ ಶಂಕರ ಭಟ್ ತಲೆಂಗಳ,ಮಹಾಲಿಂಗ ನ್ಯಾಕ್ ತಲೆಂಗಳ, ದೀಕ್ಷಿತ್ ಸುಣ್ಣಾಡ, ಗೋಪಾಲ ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
   ಸಭೆಯಲ್ಲಿ ಪ್ರಮುಖರಾದ ಕುಂಞಣ್ಣ ರೈ ಕಯ್ಯಾರ್, ಬಾಲಕೃಷ್ಣ ರೈ ಬಾನೋಟ್ಟು, ಕುರುವೇರಿ ಕೃಷ್ಣ ಭಟ್, ಸುಬ್ರಹ್ಮಣ್ಯ ಭಟ್ ಆಟಿಕುಕ್ಕೆ. ಸುಧಾಕರ್ ಹೊಳ್ಳ ಕಯ್ಯಾರು. ಪೈವಳಿಕೆ    ,ರಾಮಚಂದ್ರ ಭಟ್ ಉಳುವಾನ ಮೊದಲಾದವರು ಉಪಸಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries