HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಕೊಂಡೆವೂರಿನಲ್ಲಿ  ಕಾರ್ಯಕರ್ತರ ಸಭೆ
   ಉಪ್ಪಳ: ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿನ ಫೆ. 1 ರಿಂದ 04 ರವರೆಗೆ ನಡೆಯಲಿರುವ "ಪ್ರತಿಷ್ಠಾ ವರ್ಧಂತ್ಯುತ್ಸವ" ಮತ್ತು ಮುಂದಿನ ವರುಷ (2019) ನಡೆಯಲಿರುವ "ಅತಿರಾತ್ರ ಸೋಮಯಾಗ" ದ ಪೂರ್ವಭಾವಿ "ನಕ್ಷತ್ರೇಷ್ಠಿ"ಯ ಕಾರ್ಯಚಟುವಟಿಕೆಗಳ ವ್ಯವಸ್ಥಿತ ಆಯೋಜನೆ ಸಲುವಾಗಿ ಕಾರ್ಯಕರ್ತರ ಸಭೆ ಭಾನುವಾರ ಆಶ್ರಮದಲ್ಲಿ  ನಡೆಯಿತು. ಈ ಸಂದರ್ಭದಲ್ಲಿ ಆಶೀರ್ವಚನಗೈದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಕಾರ್ಯಕರ್ತರು ದೇಹದಂತೆ. ಒಂದೇ ಮನಸ್ಸಿನಿಂದ ಒಗ್ಗೂಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ ನಮ್ಮ ಸೇವೆಯನ್ನು ಭಗವಂತನಿಗೆ ಸಮಪರ್ಿಸೋಣ ಎಂದರು.
  ವೇದಿಕೆಯಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ಹರಿನಾರಾಯಣ ಮಯ್ಯರು ಲೋಕೋತ್ತರ ವಿಶಿಷ್ಟವಾದ ನಕ್ಷತ್ರೇಷ್ಠಿಯಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿ ಪುಣ್ಯಭಾಜನರಾಗೋಣ ಎಂದರು.  ಮೋನಪ್ಪ ಭಂಡಾರಿ, ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು ಉಪಸ್ಥಿತರಿದ್ದು ಸಲಹೆ ನೀಡಿದರು. ಗೋಪಾಲ ಬಂದ್ಯೋಡು, ಶ್ರೀಧರ ಶೆಟ್ಟಿ ಮುಟ್ಟ, ಸದಾನಂದ ನಾವರ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ "ನಕ್ಷತ್ರéೇಷ್ಠಿ" ಸಮಿತಿಯ ಅಧ್ಯಕ್ಷ ಡಾ.ಶ್ರೀಧರ ಭಟ್ ಉಪ್ಪಳ ರವರು ಮಾತನಾಡಿ ಯೋಗಾಶ್ರಮದ ಮೂಲಕ ನಮಗೆ ದೊರಕಿದ ಈ ಯೋಗವನ್ನು ಸಾರ್ಥಕ ಪಡಿಸಿಕೊಳ್ಳೋಣ'ಎಂದರು. ನಂದಕಿಶೋರ್ ಪ್ರಾರ್ಥನೆ ಹಾಡಿದರು. ಸಮಿತಿ ಕಾಯರ್ಾಧ್ಯಕ್ಷ ನ್ಯಾಯವಾದಿ ಗಂಗಾಧರ ಕೊಂಡೆವೂರು ಸ್ವಾಗತಿಸಿ, ಪ್ರಧಾನ ಕಾರ್ಯದಶರ್ಿ ಪುಷ್ಪರಾಜ್ ಐಲ ವಂದಿಸಿದರು. ಕಾರ್ಯದಶರ್ಿ ದಿನಕರ್ ಬಿ.ಎಂ. ಕಾರ್ಯಕ್ರಮ ನಿರೂಪಿಸಿದರು.
   ಕಾರ್ಯಕ್ರಮದ ತಯಾರಿ ಭರದಿಂದ ಸಾಗುತ್ತಿದ್ದು ಪ್ರತಿನಿತ್ಯ ಭಕ್ತಾದಿಗಳು ಶ್ರಮಸೇವೆಯ ಮೂಲಕ ವ್ಯವಸ್ಥೆ ರೂಪೀಕರಿಸುವಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚಿಕ್ಕ ಮಕ್ಕಳೂ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ.

   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries