ಸಾಂಸ್ಕೃತಿಕ ಅಭ್ಯುದಯದ ಜೊತೆಯಲ್ಲಿ ಪ್ರಗತಿಗೆ ಯಕ್ಷಗಾನ ಕಾರಣವಾಗಿದೆ-ದೇವಕಾನ ಕೃಷ್ಣ ಭಟ್
ಉಪ್ಪಳ: ಬ್ರಾಹ್ಮಣ ಸಮುದಾಯಗಳು ಪ್ರಸ್ತುತ ಕಲೆ, ವಿದ್ಯಾಭ್ಯಾಸ, ವಿಜ್ಞಾನ,ತಂತ್ರಜ್ಞಾನ, ವ್ಯಾಪಾರ ಸಹಿತ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರದೇಶದ ಸಾಂಸ್ಕೃತಿಕ ಅಭ್ಯುದಯದ ಜೊತೆಯಲ್ಲಿ ನಾಡಿನ ಪ್ರಗತಿಗೆ ಕಾರಣವಾಗಿವೆ ಎಂದು ಹಿರಿಯ ಯಕ್ಷಗಾನ ಕಲಾವಿದ ದೇವಕಾನ ಕೃಷ್ಣ ಭಟ್ ಹೇಳಿದರು.
ಇತ್ತೀಚೆಗೆ ಆವಳಮಠ ದುಗರ್ಾಸದನದಲ್ಲಿ ನಡೆದ ಕರ್ಹಾಡ ಬ್ರಾಹ್ಮಣ ಸಮುದಾಯದ ವಾಷರ್ಿಕ ಸಮ್ಮಿಲನದಲ್ಲಿಅಭ್ಯಾಗತರಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲೆಯು ಕರ್ಹಾಡ ಹಾಗೂ ಹವ್ಯಕ ಬ್ರಾಹ್ಮಣ ಸಮುದಾಯಗಳನ್ನು ಒಂದುಗೂಡಿಸಿದೆ.ಮಾತೃಭಾಷೆ ಬೇರೆಯಾಗಿದ್ದರೂ ಕನ್ನಡ ಭಾಷಾ ಪ್ರೌಢಿಮೆಯ ಮೂಲಕ ತೆಂಕು ಯಕ್ಷಗಾನ ಕ್ಷೇತ್ರವನ್ನು ಬೆಳಗಿದ ಕೀತರ್ಿಯು ಕರ್ಹಾಡ ಸಮುದಾಯಕ್ಕೆ ಸಲ್ಲಬೇಕು ಎಂದರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಬಲಿಪರನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ಹಾಡ ಬ್ರಾಹ್ಮಣ ಅಭ್ಯುದಯ ಸಂಘದ ಅಧ್ಯಕ್ಷ ಕಾಯರ್ಗದ್ದೆ ಶಂಕರನಾರಾಯಣ ಭಟ್ ಮಾತನಾಡಿ ರಾಜಕೀಯ ವಿಘಟನೆಯ ಕಾಲಘಟ್ಟದಲ್ಲಿ ಸಮುದಾಯ ಸಂಘಟನೆಗಳ ಅಗತ್ಯವಿದೆ ಎಂದರು.ಸಮುದಾಯದ ಅಭಿವೃದ್ಧಿಯು ಸಂಘಟನೆಯಿಂದ ಸಾಧ್ಯವಿದೆ.ಇದಕ್ಕೆ ಪೂರಕವೆಂಬಂತೆ ಎಲ್ಲರೂ ತಂತಮ್ಮ ಸಮುದಾಯದ ಬಗ್ಗೆ ಹೆಮ್ಮೆ ಹಾಗೂ ಗೌರವದಿಂದ ಕಾರ್ಯತತ್ಪರಾಗಬೇಕಿದೆ ಎಂದರು.ಸದಸ್ಯತ್ವ ಅಭಿಯಾನದಲ್ಲಿಎಲ್ಲರೂ ಭಾಗಿಗಳಾಗುವಂತೆ ಕರೆ ನೀಡಿದರು. ಈ ಸಂದರ್ಭ ಪದ್ಮಶ್ರೀ ಪುರಸ್ಕೃತ ತೂಗು ಸೇತುವೆ ಸರದಾರ ಗಿರೀಶ್ ಭಾರಧ್ವಾಜ್ ಅವರನ್ನು ಅಭ್ಯುದಯ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು .ಕಾರ್ಯಕ್ರಮದಲ್ಲಿ ಕೆನಾಡದಲ್ಲಿ ನೆಲೆಸಿರುವ ಅಣು ವಿಜ್ಞಾನಿ ಅನಂತೇಶ್ವರ ಕೊಮ್ಮುಂಜೆ, ಅಂತಾರಾಷ್ಟ್ರೀಯ ಸ್ಕೇಟಿಂಗ್ ಸ್ಪಧರ್ಾಳು ಜಿತಿನ್, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಉಪಾಸನಾ ಪಂಜರಿಕೆ ಅವರನ್ನು ಅಭಿನಂದಿಸಲಾಯಿತು. ಎಸ್ಎಸ್ಎಲ್ಸಿ,ಪಿಯುಸಿ, ಪದವಿ ವಿಭಾಗಗಳಲ್ಲಿ ವಿಭಾಗಳಲ್ಲಿ ಉನ್ನತ ಶ್ರೇಣಿ ಗಳಿಸಿದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆನೆಮಜಲು ಲಕ್ಷ್ಮೀನಾರಾಯಣ ಭಟ್, ಶಿಕ್ಷಕಿ ಶಾಲಿನಿ.ಎಸ್, ಕರ್ಹಾಡ ಬ್ರಾಹ್ಮಣ ಮಹಾಸಂಘ ಪುಣೆ ಉಪಾಧ್ಯಕ್ಷ ನಾಗರಾಜ ಉಪ್ಪಂಗಳ, ಪಿಲಿಂಗಲ್ಲು ವಿಷ್ಣು ಭಟ್, ಕೂವೆಕಲ್ಲು ನಾರಾಯಣಕೆ.ಆರ್, ಕೂವೆಂಸುರಾ ಮೊದಲಾದವರು ಉಪಸ್ಥಿತರಿದ್ದರು.ಸಮ್ಮಿಲನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.