HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಗಣಿತ ವಿಜಯ ಕಾಯರ್ಾಗಾರ
   ಮಂಜೇಶ್ವರ: ಕಾಸರಗೋಡು ಜಿಲ್ಲಾ ಸರ್ವಶಿಕ್ಷಾ ಅಭಿಯಾನ ಹಾಗೂ ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಬಡಾಜೆ ಶಾಲೆಯಲ್ಲಿ ಮಂಜೇಶ್ವರ ಉಪಜಿಲ್ಲಾ ಮಟ್ಟದ "ಗಣಿತ ವಿಜಯ" ಎರಡು ದಿನಗಳ ವಿಶೇಷ ಕಾಯರ್ಾಗಾರ ನಡೆಯಿತು.
   ಕಾಯರ್ಾಗಾರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಗಣಿತ ಕಲಿಕೆಯ ಆಶಯವನ್ನು ಸುಲಭವಾಗಿ ಪ್ರಕಟಿಸಲು ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಗಣಿತ ವಿಜಯ ಕಾಯರ್ಾಗಾರ ಹಮ್ಮಿಕೊಳ್ಳಲಾಗಿದ್ದು, ಇದು ಮಕ್ಕಳ ಗಣಿತ ಕಲಿಕೆಗೆ ಇನ್ನಷ್ಟು ಪ್ರೇರಣೆ ನೀಡಿ ಪ್ರೋತ್ಸಾಹಿಸಲಿ ಎಂದು ಅವರು ತಿಳಿಸಿದರು.
   ಬಡಾಜೆ ಶಾಲಾ ಮುಖ್ಯೋಪಾದ್ಯಾಯ ಭಾಸ್ಕರ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರರಾದ ಇಸ್ಮಾಯಿಲ್, ಗುರುಪ್ರಸಾದ್ ರೈ, ಸುಜಾತಾ ಉಪಸ್ಥಿತರಿದ್ದು ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಯೂಸುಫ್ ಜಮಾಲ್, ಮೊಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿ ಶೈಲಶ್ರೀ ಸ್ವಾಗತಿಸಿ, ಮಮತಾ ವಂದಿಸಿದರು. ಅಶೋಕ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ಗಣಿತ ವಿಷಯಕ್ಕೆ ಸಂಬಂಧಿಸಿ ವಿವಿಧ ಕಲಿಕೋಪಕರಣಗಳ ತಯಾರಿ ನಡೆಯಿತು. ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರರಾದ ಇಸ್ಮಾಯಿಲ್ ಮತ್ತು ಸುಜಾತಾ ತರಬೇತಿಗೆ ನೇತೃತ್ವ ನೀಡಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries