HEALTH TIPS

No title

                 ಮರಾಟಿ ಸ್ತ್ರೀ ಶಕ್ತಿ ಸಬಲೀಕರಣಕ್ಕೆ ತುತರ್ು ಆಗಬೇಕು- ಪುಷ್ಪ ಅಮೆಕ್ಕಳ
    ಪೆರ್ಲ: ಸ್ತ್ರೀ ಶಕ್ತಿಯ ಸಬಲೀಕರಣಕ್ಕೆ ಸಮಾಜದ ಎಲ್ಲಾ ಮಹಿಳೆಯರು ಜಾಗೃತರಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತು ಸದಸ್ಯೆ ಪುಷ್ಪ ಅಮೆಕ್ಕಳ ತಿಳಿಸಿದರು.
    ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಪೆರ್ಲದಲ್ಲಿ ಭಾನುವಾರ ನಡೆದ ಮಹಿಳಾ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಮರಾಟಿ ಜನಾಂಗವು ಮಾತೃ ಪ್ರಧಾನ ವ್ಯವಸ್ಥೆಯದ್ದಾಗಿದ್ದು, ಪ್ರತಿಯೊಂದು ಧಾಮರ್ಿಕ ಸಹಿತ ವಿವಿಧ ವಿವಿಧಿವಿಧಾನಗಳಲ್ಲಿ  ಮಹಿಳೆಯೇ ಮಹತ್ತರ ಪಾತ್ರ ವಹಿಸುತ್ತಾಳೆ. ಮರಾಟಿಗರ ಆರಾಧ್ಯ ಸಂಕಲ್ಪವಾದ ಮಹಮ್ಮಾಯಿಯ ಪೂಜಾ ವಿಧಾನಗಳಲ್ಲಿ ನಂದಾದೀಪ ಬೆಳಗಿಸಿ ಶಕ್ತಿ ದೇವತೆಯ ಆಹ್ವಾನಿಸುವ ಹಕ್ಕು ಮಹಿಳೆಯರದ್ದು. ಇಡೀ ಕುಟುಂಬ ಸಂರಕ್ಷಣೆಯ ಭಾರವನ್ನು ತನ್ನೆಲ್ಲಾ ಭವಣೆಗಳನ್ನು ಬದಿಗೊತ್ತಿ ಮಹಿಳೆ ನಿರ್ವಹಿಸುತ್ತಿರುವುದು ಆಕೆಯ ಮಾತೃತ್ವದ ಶಕ್ತಿಯಿಂದ ಎಂದು ಡಾ.ಬಿ.ಜಿ.ನಾಯ್ಕ ಬಾಳೆಗುರಿ ಉಪಸ್ಥಿತರಿದ್ದು ತಿಳಿಸಿದರು.
   ಪುಟ್ಟ ನಾಯ್ಕ ಪೆರಿಯಾಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ನಾರಾಯಣ ನಾಯ್ಕ ಬಾಳೆಗುಳಿ, ಕೃಷ್ಣ ನಾಯ್ಕ ಕೂಡ್ಲು, ರಾಮ ಮಾಸ್ತರ್ ಪೆರ್ಲ, ಆನಂದ ಬಿಡಾರ, ದಯಾನಂದ ಪಟೇಲ್ ಉಪಸ್ಥಿತರಿದ್ದು ಮಾತನಾಡಿದರು.
  ಮರಾಟಿ ಸಮಾಜ ಸೇವಾ ಸಂಘದ ಪೆರ್ಲ ಘಟಕದ ಮುಂದಿನ ಎಲ್ಲಾ ಚಟುವಟಿಕೆಗಳಿಗೆ ದಾರಿದೀಪವಾಗುವಂತೆ ನೂತನ ಮಹಿಳಾ ವೇದಿಕೆ ರಚಿಸಲಾಗಿದ್ದು, ಶಾರದಾ ಕಜೆಕ್ಕರ್(ಅಧ್ಯಕ್ಷೆ), ಪೂಣರ್ಿಮಾ ಪುರಂದರ ನಾಯ್ಕ ಪೆರ್ಲ(ಕಾರ್ಯದಶರ್ಿ), ರಾಧಿಕಾ(ಕೋಶಾಧಿಕಾರಿ)ರನ್ನು ನೂತನ ಮಹಿಳಾ ಸಮಿತಿಯನ್ನು ರೂಪೀಕರಿಸಲಾಯಿತು.
  ಗೋವಿಂದ ನಾಯ್ಕ ಖಂಡೇರಿ ಸ್ವಾಗತಿಸಿ, ಪೂಣರ್ಿಮಾ ಪುರಂದರ ನಾಯ್ಕ ಪೆರ್ಲ ವಂದಿಸಿದರು. ಶಮರ್ಿಳಾ ಬಜಕ್ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries