HEALTH TIPS

No title

                    ಪಾಡಿ ಕ್ಷೇತ್ರಗಳ ಬ್ರಹ್ಮಕಲಶೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ
     ಬದಿಯಡ್ಕ: ಧಾಮರ್ಿಕ ಶ್ರದ್ದಾ ಕೇಂದ್ರಗಳು ಸಾಮಾಜಿಕ ವ್ಯವಸ್ಥೆಯ ಸುಲಲಿತತೆಗೆ ಮಾರ್ಗದಶರ್ಿಯಾಗಿದ್ದು, ದೇವಾಲಯಗಳು ಸಮಾಜದ ಪ್ರತಿಬಿಂಬ ಎಂದು ಹಿರಿಯ ಧಾಮರ್ಿಕ ಮುಖಂಡ ವಸಂತ ಪೈ ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
  ಎಡನೀರು ಸಮೀಪದ ಪಾಡಿ ಬೆಳ್ಳೂರು ಶ್ರೀಮಹಾವಿಷ್ಣು ಕ್ಷೇತ್ರ ಮತ್ತು ಶ್ರೀಕೈಲಾರ್ ಶಿವ ಕ್ಷೇತ್ರಗಳ ಬ್ರಹ್ಮಕಲಶೋತ್ಸವವು ಏ.23 ರಿಂದ ಮೇ.4ರ ವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಭಾನುವಾರ ಸಂಜೆ ಶ್ರೀಕ್ಷೇತ್ರದಲ್ಲಿ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಾರಿಕ್ಕಾಡ್ ಶ್ರೀಮಹಾವಿಷ್ಣು ಕ್ಷೇತ್ರದ ಪ್ರಧಾನ ಕಾರ್ಯದಶರ್ಿ ಕೃಷ್ಣ ಪ್ರಸಾದ್ ರವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
   ಪ್ರತಿಯೊಬ್ಬರ ಆತ್ಮವು ಪರಮಾತ್ಮನ ಅಂಶದಿಂದೊಡಗೂಡಿದ್ದು, ಆತ್ಮವನ್ನು ವಂಚಿಸುವುದು ಭಗವಂತನನ್ನು ವಂಚಿಸಿದ್ದಕ್ಕೆ ಸಮವಾದುದು. ಆದುದರಿಂದ ಋಜು ಮಾರ್ಗದಲ್ಲಿ ಬದುಕನ್ನು ವ್ಯವಸ್ಥಿತವಾಗಿ ಮುನ್ನಡೆಸುತ್ತ ಭಗವಂತನನ್ನು ಸಂಪ್ರೀತಗೊಳಿಸುವ ತವಕ ಎಲ್ಲರಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಆತ್ಮಕ್ಕೆ ಬಲ ತುಂಬಲು ಅಲ್ಲಲ್ಲಿ ಪುಣ್ಯ ಕ್ಷೇತ್ರಗಳನ್ನು ಹಿರಿಯರು ಸತ್ಯದ ಮೂಲಕ ಕಂಡುಕೊಂಡು ನಿಮರ್ಿಸಿದ್ದು, ಅದನ್ನು ಕಾಪಿಟ್ಟು ಮುಂದಿನ ತಲೆಮಾರಿಗೆ ದಾಟಿಸುವ ಹೊಣೆ ಪ್ರತಿಯೊಬ್ಬನಿಗೂ ಇದೆ ಎಂದು ಅವರು ತಿಳಿಸಿದರು.
  ಪಾಡಿ ಅರಮನೆಯ ಜಯಸಿಂಹವರ್ಮ ರಾಜ ಅರಸರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಎ.ವಿ.ನಾರಾಯಣ, ಉಳಿಯತ್ತಾಯ ನಾರಾಯಣ ಆಸ್ರ, ಕೃಷ್ಣ ಪ್ರಸಾದ್, ಗ್ರಾ.ಪಂ. ಸದಸ್ಯೆಯರಾದ ಜಯಶ್ರೀ ಹಾಗೂ ಶಶಿಕಲಾ, ಕಾಯಾಧ್ಯಕ್ಷ ಕೆ.ಕುಂಞಿಕೃಷ್ಣ ನಾಯರ್ ಉಪಸ್ಥಿತರಿದ್ದು ಮಾತನಾಡಿದರು. ಪೈವಳಿಕೆ ಗ್ರಾ.ಪಂ. ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ಜಯಶ್ರೀ, ನ್ಯಾಯವಾದಿ ಕೆ.ಪಿ ನಾರಾಯಣ ನಾಯರ್, ಪಿ.ಎನ್.ಕೆ.ನಾಯರ್, ಎ.ಶ್ರೀಧರ ಆಚಾರ್, ನಾರಾಯಣ ಶೆಟ್ಟಿ ಹಳೆಹಿತ್ಲು ಮೊದಲಾದವರು ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries