HEALTH TIPS

No title

        ಗ್ರಾಮ ಸಭೆಗೆ ಆಗಮಿಸದೆ ಅಧಿಕಾರಿಗಳ ದರ್ಪ-ಜನರ ಆಕ್ರೋಶ
    ಮುಳ್ಳೇರಿಯ: ಗ್ರಾಮ ಪಂಚಾಯತುಗಳ ಆಡಳಿತ ಶಕ್ತಿಯನ್ನು ಬಲಪಡಿಸಿ ಎಲ್ಲಾ ಆಡಳಿತಾತ್ಮಕ ನೆರವು ಮತ್ತು ಜನರ ನೇರ ಪಾಲ್ಗೊಳ್ಳುವಿಕೆಯೊಂದಿಗೆ ಆಡಳಿತ ನಡೆಸುವ ಆದರ್ಶವನ್ನಿರಿಸಿ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಂಡ ಬಳಿಕ ಗ್ರಾ.ಪಂ. ಅಧಿಕಾರ ಪರಮಾಧಿಕಾರವಾಗಿ ಗುರಿತಿಸಲ್ಪಡುತ್ತಿದೆ. ಆದರೆ ಸ್ಥಳೀಯಾಡಳಿತ ವ್ಯಾಪ್ತಿಯ ಗ್ರಾ.ಪಂ. ಗಳೇ ಜನಪರ ಕಾಳಜಿಯನ್ನು ವಹಿಸುವುದರಲ್ಲಿ ಜವಾಬ್ದಾರಿಯುತರಾಗಿ ಕಾರ್ಯನಿರ್ವಹಿಸದಿದ್ದರೆ ಅದು ಭಾರೀ ಅವಾಂತರ, ಅಸಮತೋಲನ, ಅಸಂತುಷ್ಠಿಗೆ ಕಾರಣವಾಗಿ ಒಟ್ಟು ಗ್ರಾಮಾಭಿವೃದ್ದಿಯ ಕನಸನ್ನು ನುಚ್ಚುನೂರುಗೊಳಿಸುವುದರಲ್ಲಿ ಸಂಶಯವೇ ಇಲ್ಲ.
  ಜಿಲ್ಲೆಯ ಗಡಿ ಗ್ರಾಮ ಪಂಚಾಯತು ಆಗಿರುವ ಬೆಳ್ಳೂರು ಗ್ರಾಮ ಪಂಚಾಯತಿಯ ಒಂದನೇ ವಾಡರ್್ ಗ್ರಾಮ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸದೆ ಬಳಿಕ ಜನಾಕ್ರೋಶಕ್ಕೆ ಮಣಿದು ತಡವಾಗಿ ಆಗಮಿಸಿ ಛೀಮಾರಿಗೊಳಗಾದ ಘಟನೆ ನಡೆದಿದೆ.
  ಫೆ.22 ರಂದು ಬೆಳ್ಳೂರು ಗ್ರಾ.ಪಂ.ನ ಒಂದನೇ ವಾಡರ್್ ಗ್ರಾಮ ಸಭೆಯು ಈಂದುಮೂಲೆ ಅಂಗನವಾಡಿ ಕೇಂದ್ರದಲ್ಲಿ ನಿಗದಿಯಾಗಿತ್ತು. ಬೆಳಿಗ್ಗೆ 10.30ಕ್ಕೆ ನಿಗದಿಯಾಗಿದ್ದ ಗ್ರಾಮ ಸಭೆಗೆ ಗ್ರಾ.ಪಂ. ನ ಒಂದನೇ ವಾಡರ್್ ಸದಸ್ಯೆ ವಿಶಾಲಾಕ್ಷಿ, ಬ್ಲಾ.ಪಂ. ಸದಸ್ಯೆ ಸತ್ಯವತಿ ಸಹಿತ ನೂರಾರು ಗ್ರಾಮ ನಿವಾಸಿಗಳು ಆಗಮಿಸಿದ್ದರು. ಆದರೆ 11.30 ಕಳೆದರೂ ಗ್ರಾ.ಪಂ. ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಲಪಿರಲಿಲ್ಲ. ಈ ಬಗ್ಗೆ ದೂರವಾಣಿ ಮೂಲಕ ಸಂಪಕರ್ಿಸಿದಾಗ ಮೊದಲು ಉಡಾಫೆಯಿಂದ ಉತ್ತರಿಸಿದ್ದು, ಬಳಿಕ ಸ್ವರ ಎತ್ತರಿಸಿ ವಿಚಾರಿಸಿದಾಗ ಇದೀಗ ಬರುತ್ತೇವೆಯೆಂಬ ಉತ್ತರವನ್ನು ನೀಡಿದರು. ಆದರೆ ಮಧ್ಯಾಹ್ನ 12. ಗಂಟೆ  ಕಳೆದರೂ ಯಾವೊಬ್ಬನೂ ಆಗಮಿಸದಿದ್ದರಿಂದ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮೊಬೈಲ್ ಮೂಲಕ ಸಂದೇಶ ಸಹಿತ ದೂರು ನೀಡಿದರು. ಆ ಬಳಿಕ ಗ್ರಾ.ಪಂ. ಕಾರ್ಯದಶರ್ಿ ಹಾಗೂ ಓರ್ವ ಆರೋಗ್ಯಾಧಿಕಾರಿ ತಲುಪಿದರು. ಗ್ರಾ.ಪಂ. ಕಾರ್ಯದಶರ್ಿ ಬಳಿಕ ತಮ್ಮ ಭಾಷಣದಲ್ಲಿ ಕ್ಷಮೆ ಕೇಳಿದರು. ಈ ಮಧ್ಯೆ ಆಗಮಿಸಿದ್ದ ಆರೋಗ್ಯಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದವರಿಂದ ಸಹಿ ಸಂಘ್ರಹಿಸುತ್ತಿರುವುದು ಮತ್ತೆ ವಿವಾದಕ್ಕೆ ಕಾರಣವಾಯಿತು. ಆರೋಗ್ಯಾಧಿಕಾರಿಗಳು ಮನೆಮನೆ ಸಂದರ್ಶನ ನಡೆಸಿರುವೆವು ಎಂಬ ನಕಲಿ ದಾಖಲೆ ಸೃಷ್ಟಿಸಲು ಗ್ರಾಮ ಸಭೆಯಲ್ಲಿ ಸಹಿ ಸಂಗ್ರಹಿಸಲಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಹಿ ಸಂಗ್ರಹ ಕೈಬಿಡಲಾಯಿತು. ಬಳಿಕ ತಡವಾಗಿಯಾದರೂ ಗ್ರಾಮ ಸಭೆ ನಡೆಯಿತು.
   ಪ್ರಜ್ಞಾವಂತ ನಾಗರಿಕರಿದ್ದಲ್ಲಿ ಆಡಳಿತ ವೈಫಲ್ಯಗಳನ್ನು ನಿಯಂತ್ರಿಸಿ, ಅಧಿಕಾರಿ ವರ್ಗದ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಬಹುದೆಂಬುದನ್ನು ಈಂದುಮೂಲೆ ನಾಗರಿಕರು ಮಾಡಿ ತೊರಿಸಿ ಶ್ಲಾಘನೆಗೆ ಪಾತ್ರರಾದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries