HEALTH TIPS

No title

                 ಸೋಲಾರ್ ಯೋಜನೆ ಜಾರಿಗೆ ಜಿಲ್ಲಾಭಿವೃದ್ಧಿ ಸಮಿತಿ ಆಗ್ರಹ
     ಕಾಸರಗೋಡು7: ಜಿಲ್ಲೆಯಲ್ಲಿ  ಸೋಲಾರ್ ಯೋಜನೆಯನ್ನು  ನಿರ್ಲಕ್ಷಿಸುವ ನಿಧರ್ಾರವನ್ನು  ಕೈಬಿಡಬೇಕು ಎಂದು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕೇರಳ ಸರಕಾರವನ್ನು ಆಗ್ರಹಿಸಿದೆ.
    ಈ ಮೊದಲು ಅನುಷ್ಠಾನಕ್ಕೆ ತರಲು ತೀಮರ್ಾನಿಸಿದ ಸೋಲಾರ್ ಯೋಜನೆಗಳನ್ನು  ಸಾಕಾರಗೊಳಿಸಬೇಕು. ಈ ವಿಷಯದಲ್ಲಿ  ಪ್ರಸ್ತುತ ತಲೆದೋರಿರುವ ಸಮಸ್ಯೆ ಪರಿಹರಿಸಲು ಚಚರ್ೆ ನಡೆಸಬೇಕೆಂದು ಸಭೆಯಲ್ಲಿ  ಒತ್ತಾಯಿಸಲಾಯಿತು.
   ಕಾಸರಗೋಡಿನಲ್ಲಿ  ಜರಗಿದ ಈ ಸಭೆಯಲ್ಲಿ  ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು  ವಿಷಯ ಮಂಡಿಸಿದರು. ಜಿಲ್ಲೆಯಲ್ಲಿ  200 ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ವಿದ್ಯುತ್ ಉತ್ಪಾದನೆಗೆ 1086 ಎಕರೆ ಭೂಮಿಯನ್ನು  ಮಂಜೂರುಗೊಳಿಸಲಾಗಿತ್ತು. ಇದರಂತೆ 50 ಮೆಗಾವ್ಯಾಟ್ ಸಾಮಥ್ರ್ಯದ ಸೋಲಾರ್ ಯೋಜನೆ ಅಂಬಲತ್ತರ ಗ್ರಾಮದಲ್ಲಿ  ಪೂರ್ಣಗೊಳಿಸಲಾಗಿದೆ. 
   ಉಳಿದ 150 ಮೆಗಾವ್ಯಾಟ್ ಸೋಲಾರ್ ಪ್ಲಾಂಟ್ ಆರಂಭಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಕೆಎಸ್ಇಬಿಯಿಂದ ಜಾಗ ಮರಳಿ ಪಡೆಯಲು ರಾಜ್ಯ ಸರಕಾರವು ನಿರ್ಧರಿಸಿದೆ. 200 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿಯನ್ನು  ಕಂಡುಕೊಂಡು ಟ್ರಾನ್ಸ್ಗ್ರೇಡ್-2 ಪ್ರಸರಣ ಸಾಮಥ್ರ್ಯ ಹೆಚ್ಚಿಸುವ 9000 ಕೋಟಿ ರೂ. ಗಳ ಯೋಜನೆಯ ಜಾಗವನ್ನು  ಮರಳಿ ಪಡೆಯುವ ಮೂಲಕ ಯೋಜನೆಯೇ ರದ್ದಾಗುವುದು.
   ಚೀಮೇನಿಯಲ್ಲಿ  ಸ್ಥಾಪಿಸಲು ಹಾಕಿಕೊಂಡ 400 ಕೆ.ವಿ. ಸಬ್ಸ್ಟೇಶನ್, ಉಡುಪಿಯಿಂದ ಚೀಮೇನಿಗಿರುವ 400 ಕೆ.ವಿ. ಲೈನ್ ಮೊದಲಾದ ಯೋಜನೆಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ  ಯೋಜನೆಗಳನ್ನೆಲ್ಲಾ  ನಿರ್ಲಕ್ಷಿಸದೆ ಪೂರ್ಣಗೊಳಿಸುವ ಇಚ್ಛಾಶಕ್ತಿ  ಅಗತ್ಯ ಎಂದು ಸಭೆಯು ಆಗ್ರಹಿಸಿದೆ. ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ವಿಷಯ ಮಂಡನೆಗೆ ಬೆಂಬಲ ಸೂಚಿಸಿದರು.
   ಕಾಸರಗೋಡು - ಕಾಂಞಂಗಾಡು ರಸ್ತೆಯಲ್ಲಿ  ನಾನ್ ಸ್ಟಾಫ್ ಬಸ್ಗಳು ಚಂದ್ರಗಿರಿ ಮಾರ್ಗವಾಗಿ ಸೇವೆ ಆರಂಭಿಸಲು ಅಗತ್ಯದ ಬಸ್ಗಳು ಲಭ್ಯವಾದ ಕೂಡಲೇ ಸೇವೆ ಆರಂಭಿಸಲಾಗುವುದು ಎಂದು ಸಾರಿಗೆ ಅಧಿಕಾರಿ ತಿಳಿಸಿದರು. ಕೋಡೋಂ - ಬೇಳೂರು ಗ್ರಾಮ ಪಂಚಾಯತ್ನಲ್ಲಿ  ಕುಡಿಯುವ ನೀರು ಯೋಜನೆಯನ್ನು  ಪೂರ್ಣಗಳಿಸಲು ಕ್ರಮ ಕೈಗೊಳ್ಳಲಾಗಿದೆ.
   ಜಿಲ್ಲೆಯ ವಿವಿಧ ಇಲಾಖೆಗಳ ಜನವರಿ ತಿಂಗಳ ಯೋಜನೆಯ ಪ್ರಗತಿಯನ್ನು  ಅವಲೋಕನ ನಡೆಸಲಾಯಿತು. ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಪಿ.ಬಿ.ಅಬ್ದುಲ್ ರಝಾಕ್ಯುಪಸ್ಥಿತರಿದ್ದರು. ಸಹಾಯಕ ದಂಡಾಧಿಕಾರಿ ಎನ್.ದೇವಿದಾಸ್, ಜಿಲ್ಲಾ  ಪಂಚಾಯತ್ ಉಪಾಧ್ಯಕ್ಷೆ  ಶಾಂತಮ್ಮ  ಪಿಲಿಪ್ ಪಾಲ್ಗೊಂಡಿದ್ದರು.
   ಫೆ.28ರಂದು ಕಲೆಕ್ಟರೇಟ್ನಲ್ಲಿ  ಸಭೆ : ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಭೂಸ್ವಾಧೀನ ವಿಚಾರದಲ್ಲಿ  ಜನರು ಭಯಗೊಂಡಿದ್ದಾರೆ. ಆದ್ದರಿಂದ ಅವರ ಆತಂಕವನ್ನು  ಪರಿಹರಿಸಲು ಫೆ.28ರಂದು ಸಂಬಂಧಪಟ್ಟ  ನಗರಸಭೆಗಳ ಅಧ್ಯಕ್ಷರ, ಗ್ರಾಮ ಪಂಚಾಯತ್ ಅಧ್ಯಕ್ಷರ ಸಭೆಯನ್ನು  ಕಲೆಕ್ಟರೇಟ್ನಲ್ಲಿ  ನಡೆಸಲು ತೀಮರ್ಾನಿಸಲಾಯಿತು. ಸಂಬಂಧಪಟ್ಟವರು ಸಭೆಯಲ್ಲಿ  ಪಾಲ್ಗೊಳ್ಳುವಂತೆ ತಿಳಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries