HEALTH TIPS

No title

                         ಅಧಿಕಾರಿಗಳು ಸಮರ್ಪಕ ಕರ್ತವ್ಯ ನೆರವೇರಿಸಬೇಕು : ಸಚಿವ ಇ.ಚಂದ್ರಶೇಖರನ್
    ಕಾಸರಗೋಡು: ಗ್ರಾಮ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜನಸಾಮಾನ್ಯರ ಸಮಸ್ಯೆಗಳನ್ನು  ಅತಿ ಹೆಚ್ಚಿನ ಪ್ರಮಾಣದಲ್ಲಿ  ನಿರ್ವಹಿಸುವ ಇಲಾಖೆ ಎಂಬ ನೆಲೆಯಲ್ಲಿ  ಸಮಸ್ಯೆ ಪರಿಹಾರದ ವೇಗವನ್ನು  ಹೆಚ್ಚಿಸುವ ಜವಾಬ್ದಾರಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಇದೆ. ಈ ನಿಟ್ಟಿನಲ್ಲಿ  ಅಧಿಕಾರಿಗಳು ಸಮರ್ಪಕ ಕರ್ತವ್ಯ ನೆರವೇರಿಸಬೇಕು ಎಂದು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
   ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ 1866ನೇ ಫೆ.24ರಂದು ತಿರುವಾಂಕೂರು ಮಹಾರಾಜ ಶ್ರೀಮೂಲ ಬಾಲರಾಮವರ್ಮ ಅವರು ಕಂದಾಯ ಸೆಟ್ಲ್ಮೆಂಟ್ ಘೋಷಣೆ ನಡೆಸಿದ್ದರು. ಇದರ ಸಂಸ್ಮರಣಾರ್ಥ ಆಯೋಜಿಸಲಾಗಿದ್ದ ಕೇರಳ ಕಂದಾಯ ದಿನ ಸಮಾರಂಭವನ್ನು ಸಮಾರಂಭವನ್ನು  ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
      ಕಂದಾಯ ಇಲಾಖೆಯು ಕೇವಲ ಭೂಮಿಗೆ ಸಂಬಂಧಿಸಿದ ವಿಷಯಗಳನ್ನು  ಮಾತ್ರ ನಿರ್ವಹಿಸುವ ಇಲಾಖೆಯಲ್ಲ. ಅದಕ್ಕಿಂತಲೂ ಮಿಗಿಲಾದ ಕೆಲಸ ಮಾಡುತ್ತಿದೆ. ಆದ್ದರಿಂದ ಕಂದಾಯ ಇಲಾಖೆಯು ಇತರೆಲ್ಲಾ  ಇಲಾಖೆಗಳ ಮಾತೃ ಸ್ಥಾನದಲ್ಲಿದೆ ಎಂದರು.
    ಮಾ.24ರ ತನಕ ಜಿಲ್ಲಾಧಿಕಾರಿ ಘೋಷಿಸಿದ `ತ್ವರಿತ - 2018' ಎಂಬ ವಿನೂತನ ಯೋಜನೆಯನ್ನು  ಎಲ್ಲರೂ ಕೈಗೆತ್ತಿಕೊಂಡು ಯಶಸ್ವಿಗೊಳಿಸಬೇಕು. ಕಡತಗಳ ತಪಾಸಣೆಯನ್ನು  ಹೆಚ್ಚು  ತ್ವರಿತಗೊಳಿಸಿ ಸಮಸ್ಯೆ ಪರಿಹಾರದ ಸಲುವಾಗಿ ಖಾತರಿಪಡಿಸುವ ಯೋಜನೆ ಇದಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ  ಕಂದಾಯ ಇಲಾಖೆಗೆ ಸಂಬಂಧಿಸಿದ ಯಾವುದೇ ಅಗತ್ಯಗಳಿಗೆ ಸಾರ್ವಜನಿಕರು ಮನವಿ ಅಥವಾ ದೂರು ಸಲ್ಲಿಸಿದರೂ ಆ ಬಗ್ಗೆ  ಕೂಡಲೇ ಪರಿಹಾರದ ಕ್ರಮಗಳನ್ನು  ಜಾರಿಗೊಳಿಸಬೇಕು ಎಂದು ಆದೇಶಿಸಿದರು.
   ರಾಜ್ಯದಲ್ಲಿ  ಕಂದಾಯ ಇಲಾಖೆಯು ಸಾಕಷ್ಟು  ಅಭಿವೃದ್ಧಿ ಕಾರ್ಯಗಳನ್ನು  ನಡೆಸುತ್ತಿದೆ. ಭೂಮಿ ಇಲ್ಲದವರಿಗೆ ಭೂಮಿ ಒದಗಿಸುವುದು ಇದರಲ್ಲಿ  ಅತೀ ದೊಡ್ಡ  ಯೋಜನೆಯಾಗಿದ್ದು, ಈ ಕಾರ್ಯವನ್ನು  ಸಮರ್ಥವಾಗಿ ನಿಭಾಯಿಸುತ್ತಿದೆ. ಜಿಲ್ಲೆಯಲ್ಲಿಯೂ ಈ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಅತಿ ಹೆಚ್ಚು  ಕೆಲಸದ ಹೊರೆ ಇರುವ ಇಲಾಖೆ ಕೂಡ ಕಂದಾಯ ವಿಭಾಗ ಆಗಿದೆ ಎಂದು ಅವರು ತಿಳಿಸಿದರು.
   ಎನ್ಐಸಿ ಇನ್ನೋವೇಶನ್ ಚಾಲೆಂಜ್- 2018 ಸ್ಪಧರ್ೆಯಲ್ಲಿ  ರಾಷ್ಟ್ರೀಯ ಪುರಸ್ಕಾರ ಲಭಿಸಿದ ಜಿಲ್ಲಾ  ಇನಮರ್ೆಟಿಕ್ ಅಧಿಕಾರಿ ಕೆ.ರಾಜನ್ ಅವರನ್ನು  ಕಾರ್ಯಕ್ರಮದಲ್ಲಿ  ಸಚಿವರು ಅಭಿನಂದಿಸಿದರು. ವಿವಿಧ  ಸಹಾಯಕ ಜಿಲ್ಲಾಧಿಕಾರಿಗಳು, ಇತರ ಅಧಿಕಾರಿಗಳು, ಸಿಬ್ಬಂದಿಗಳು ಅಲ್ಲದೆ ವಿವಿಧ ವಲಯದವರು ಉಪಸ್ಥಿತರಿದ್ದರು.
   ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಸ್ವಾಗತಿಸಿ, ಜಿಲ್ಲಾ ಸಹಾಯಕ ದಂಡಾಧಿಕಾರಿ ಎನ್.ದೇವಿದಾಸ್ ವಂದಿಸಿದರು.
  ವಿವಿಧ ಬಹುಮಾನಗಳ ವಿತರಣೆ : ಕಾರ್ಯಕ್ರಮದ ಅಂಗವಾಗಿ ವಿವಿಧ ಭೂ ಹಕ್ಕುಪತ್ರಗಳ ವಿತರಣೆ, ಪ್ರಕೃತಿ ವಿಕೋಪ ಧನ ಸಹಾಯ ವಿತರಣೆ, ಮುಖ್ಯಮಂತ್ರಿಯವರ ದುರಂತ ಪರಿಹಾರ ನಿಧಿಯಿಂದ ಧನ ಸಹಾಯ ವಿತರಣೆ, ಓಖಿ ದುರಂತದಲ್ಲಿ  ರಕ್ಷಣಾ ಚಟುವಟಿಕೆಗಳನ್ನು  ನಡೆಸಿದವರಿಗಿರುವ ಅಭಿನಂದನೆ, ಅತ್ಯುತ್ತಮ ಗ್ರಾಮಾಧಿಕಾರಿಗಿರುವ ಅಭಿನಂದನೆ, ರಸಪ್ರಶ್ನೆ  ಸ್ಪಧರ್ೆ ವಿಜೇತರಿಗೆ ಮತ್ತು  ಕ್ಲೀನ್ ಆಫೀಸ್ ವಿಜೇತರಿಗೆ ಬಹುಮಾನಗಳನ್ನು  ಕಂದಾಯ ಸಚಿವರು ವಿತರಿಸಿದರು. ಜೊತೆಗೆ ಇಲಾಖೆಯ ಅಧಿಕಾರಿಗಳನ್ನು  ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು  ಸ್ಥಳದಲ್ಲೇ ನಿದರ್ೇಶಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries