HEALTH TIPS

No title

             ಕನ್ನಡದ ಅವಗಣನೆ : ಕನ್ನಡಿಗ ಗ್ರಾಹಕರಿಗೆ ಸಂಕಷ್ಟ
         ಎಲ್.ಐ.ಸಿ. ಕಾಸರಗೋಡು ಶಾಖೆಯ ವಿರುದ್ಧ ಕೇಂದ್ರ ಸಚಿವರಿಗೆ ದೂರು
   ಬದಿಯಡ್ಕ: ಮಲಯಾಳ ಭಾಷೆಯಲ್ಲಿ ಮಾತ್ರ ಮಾಹಿತಿಗಳನ್ನು ಒದಗಿಸುತ್ತಿರುವ ಭಾರತೀಯ ಜೀವವಿಮಾ ನಿಗಮ  ಕಾಸರಗೋಡು ಶಾಖೆಯ ವಿರುದ್ಧ ಕೇಂದ್ರ ಅಲ್ಪಸಂಖ್ಯಾಕ ಖಾತೆಯ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ದೂರನ್ನು ಸಲ್ಲಿಸಲಾಗಿದೆ.
  ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಮಲಯಾಳದೊಂದಿಗೆ ಕನ್ನಡದಲ್ಲೂ ಮಾಹಿತಿ ಪತ್ರಗಳನ್ನು ವಿತರಿಸಬೇಕೆಂದು ಸರಕಾರಿ ಆದೇಶವಿದೆ. ಆದರೆ ಹೆಚ್ಚಿನ ಸರಕಾರಿ ಕಚೇರಿಗಳಲ್ಲಿ ಹಾಗೂ ನಿಗಮ, ಮಂಡಳಿ, ಸಹಕಾರಿ ಸಂಸ್ಥೆಗಳಂತಹ ಅನುದಾನಿತ ಮತ್ತು ಅರೆ ಸರಕಾರಿ ಕಚೇರಿಗಳಲ್ಲಿ ಈ ನಿಯಮವನ್ನು ಪಾಲಿಸಲಾಗುತ್ತಿಲ್ಲ. ಎಲ್.ಐ.ಸಿ. ತನ್ನ ಗ್ರಾಹಕರಿಗೆ ಮಾಹಿತಿ ಪತ್ರ, ವಿಮಾ ಕಂತು ಜ್ಞಾಪನಾ ಪತ್ರ ಮೊದಲಾದವುಗಳನ್ನು ಮಲಯಾಳದಲ್ಲಿ ಮಾತ್ರ ಕಳುಹಿಸುತ್ತಿದೆ. ಇತ್ತೀಚೆಗೆ ಪಿಂಚಣಿ ಯೋಜನೆಯಂತಹ ಹೊಸ ಯೋಜನೆಗಳ ಕುರಿತಾದ ಮಾಹಿತಿ ಪತ್ರವನ್ನು ಕೂಡ ಮಲಯಾಳದಲ್ಲಿ ಮಾತ್ರ ಕಳುಹಿಸಿದೆ. ಪತ್ರದ ಇನ್ನೊಂದು ಮಗ್ಗಲು ಖಾಲಿ ಇದ್ದು ಕನಿಷ್ಠಪಕ್ಷ ಇಂಗ್ಲೀಷ್ನಲ್ಲಾದರೂ ವಿವರಗಳನ್ನು ಪ್ರಕಟಿಸಬಹುದಿತ್ತು. ಮಲಯಾಳದಲ್ಲಿರುವ ಸೂಚನೆಗಳು ಯಾವುದಕ್ಕೆ ಸಂಬಂಧಿಸಿದ್ದಿರಬಹುದು ಎಂಬುದು ಅರಿಯದೆ ಗ್ರಾಮ ಪ್ರದೇಶದಲ್ಲಿರುವ ಕನ್ನಡಿಗ ಗ್ರಾಹಕರು ಗೊಂದಲ ಮತ್ತು ಗಾಬರಿಗೀಡಾಗಿದ್ದಾರೆ. ವಿದ್ಯಾವಂತರಾದರೂ ವಿಷಯವನ್ನು ಅರಿಯಲು ಅನ್ಯರನ್ನು ಆಶ್ರಯಿಸಬೇಕಾಗಿ ಬಂದು ಮುಜುಗರಕ್ಕೀಡಾಗಿದ್ದಾರೆ.
   ಎಲ್.ಐ.ಸಿ. ಕಾಸರಗೋಡು ಶಾಖೆಗೆ ಹಲವಾರು ಮಂದಿ ಕನ್ನಡ ಗ್ರಾಹಕರಿದ್ದಾರೆ. ಇಲ್ಲಿ ಕನ್ನಡಿಗ ವಿಮಾ ಸಲಹೆಗಾರರಿದ್ದಾರೆ. ಸಾಮಾನ್ಯ ಕನ್ನಡಿಗರು ವಿಮ ಯೋಜನೆಗಳ ಬಗ್ಗೆ ನಿರಾಸಕ್ತರಾಗಿದ್ದರೂ ಕನ್ನಡಿಗ ವಿಮಾ ಸಲಹೆಗಾರರ ಒತ್ತಾಯಕ್ಕೆ ಮಣಿದು ಜೀವ ವಿಮೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಕನ್ನಡಿಗ ವಿಮಾ ಏಜೆಂಟರು ಗ್ರಾಹಕರಿಗೆ ಕನ್ನಡದಲ್ಲೂ ಮಾಹಿತಿಗಳನ್ನು ಒದಗಿಸಬೇಕೆಂದು ತಮ್ಮ ಇಲಾಖೆಯನ್ನು ಒತ್ತಾಯಿಸುತ್ತಿಲ್ಲ. ತ್ರಿಭಾಷಾ ಸೂತ್ರವನ್ನು ಪಾಲಿಸಬೇಕಾಗಿರುವುದರಿಂದ ಹಿಂದಿ, ಇಂಗ್ಲೀಷ್, ಮಲಯಾಳದ ಬಳಿಕ ಹೆಚ್ಚುವರಿಯಾಗಿ ಕನ್ನಡದಲ್ಲಿ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕೇಂದ್ರ ಸರಕಾರಿ ಸಂಸ್ಥೆಗಳು ಕೇವಲ ಮಲಯಾಳದಲ್ಲಿ ಮಾತ್ರ ಮಾಹಿತಿಯನ್ನೊದಗಿಸುತ್ತಿರುವುದು ತ್ರಿಭಾಷಾ ಸೂತ್ರದ ಪಾಲನೆಯಾಗುತ್ತದೆಯೇ ? ಎಂದು ದೂರನ್ನು ಸಲ್ಲಿಸಿದ ಗ್ರಾಹಕ ಡಾ|ನರೇಶ್ ಮುಳ್ಳೇರಿಯಾ ಪ್ರಶ್ನಿಸಿದ್ದಾರೆ. ದೂರಿನ ಪ್ರತಿಯನ್ನು ಕಾಸರಗೋಡು ಜಿಲ್ಲಾಧಿಕಾರಿಯವರಿಗೂ, ಎಲ್.ಐ.ಸಿ. ಕಾಸರಗೋಡು ಶಾಖೆಗೂ ಕಳುಹಿಸಲಾಗಿದೆ.
   ಒಬ್ಬರ ದೂರಿನಿಂದ ಏನೂ ಆಗದು : ಹಣವನ್ನು ಹೂಡಿಕೆ ಮಾಡುವ ತಮ್ಮ ಗ್ರಾಹಕರಿಗೆ ಅವರ ಭಾಷೆಯಲ್ಲಿ ಮಾಹಿತಿ ನೀಡದೆ ಅವಮಾನಿಸುವ ಎಲ್.ಐ.ಸಿ. ಯಂತಹ ಸಂಸ್ಥೆಗಳ ನಡವಳಿಕೆ ಖಂಡನೀಯ. ಆದರೆ ಇದರ ವಿರುದ್ಧ ಒಬ್ಬರು ದೂರು ನೀಡಿದರೆ ಯಾವುದೇ ಪ್ರಯೋಜನವಾಗದು. ಕನ್ನಡಿಗರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಿದರೆ ಮಾತ್ರ ಪರಿಣಾಮವನ್ನು ನಿರೀಕ್ಷಿಸಬಹುದು. ಆದುದರಿಂದ ಕನ್ನಡಿಗ ಗ್ರಾಹಕರೆಲ್ಲರೂ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಕೇಂದ್ರ ಸಚಿವರಿಗೆ ದೂರನ್ನು ಸಲ್ಲಿಸಬೇಕು. ಖಡಿ.ಒಣಡಣಚಿಡಿ ಂಛಛಚಿ ಓಚಿಡತ, ಊಠಟಿಠಣಡಿಚಿಛಟಜ ಒಟಿಣಜಡಿ ಠಜಿ ಒಟಿಠಡಿಣಥಿ ಂಜಿಜಿಚಿಡಿ, 11ಣ ಈಟಠಠಡಿ, ಕಣ.ಆಜಜಟಿಜಚಿಥಿಚಿಟ ಂಟಿಣಥಿಠಜಚಿಥಿಚಿ ಃಚಿತಚಿಟಿ, ಅಉಔ ಅಠಟಠಿಟಜಥ, ಐಠಜ ಖಠಚಿಜ, ಓಜತಿ ಆಜಟ ,ಎಂಬ ವಿಳಾಸಕ್ಕೂ, ಕಾಸರಗೋಡು ಜಿಲ್ಲಾಧಿಕಾರಿಯವರಿಗೂ ದೂರು ಸಲ್ಲಿಸಬೇಕೆಂದು ವಿನಂತಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries