HEALTH TIPS

No title

               ಅಕ್ಷತಾಳ ಮನೆಗೆ ಸಂಸದ ಕಟೀಲು ಭೇಟಿ: ಸಾಂತ್ವನ
  ಮುಳ್ಳೇರಿಯ : ಕು| ಅಕ್ಷತಾಳ ಹತ್ಯೆಯು ಮಾನವ ಸಮಾಜ ತಲೆತಗ್ಗಿಸುವ ಕೃತ್ಯ. ಸಜ್ಜನ ಸಮಾಜ ತಲೆತಗ್ಗಿಸುವಂತಾಗಿದೆ. ಬಡಕುಟುಂಬದ ಅಕ್ಷತಾ ಬುದ್ದಿವಂತ ವಿದ್ಯಾಥರ್ಿನಿಯಾಗಿದ್ದು ಕಾರಣಗಳಿಲ್ಲದೇ ಬಲಿಯಾಗಿದ್ದಾಳೆ.  ತನಿಖೆಯನ್ನು ವಿಳಂಬವಾಗದೇ ತೀವ್ರಗತಿಯಲ್ಲಿ ಮುಂದುವರಿಸಿ ಆರೋಪಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಯವರನ್ನು ಒತ್ತಾಯಿಸುವುದಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದರು. 
ಅವರು ಮಂಗಳವಾರ ಮುಳ್ಳೇರಿಯ ಸಮೀಪದ ಶಾಂತಿನಗರ-ಕರಣಿ ರಾಧಾಕೃಷ್ಣ ಭಟ್ ಅವರ ಮನೆಗೆ ಭೇಟಿ ನೀಡಿದರು. ಫೆ. 20ರಂದು ಕಾಲೇಜು ಮುಗಿಸಿ ಮರಳುವಾಗ ಸುಳ್ಯ ಪೇಟೆಯ ನಡುರಸ್ತೆಯಲ್ಲಿ ಹಾಡುಹಗಲೇ ನೂರಾರು ಜನರ ಮಧ್ಯೆ ವಿಕೃತ ಮನಸ್ಸಿನ ಸಹಪಾಠಿಯ ಕೈಯಲ್ಲಿ ಬರ್ಬರವಾಗಿ ಹತ್ಯೆಯಾದದ್ದು, ಮನೆಯವರಿಗೆ ಸಾಂತ್ವನ ನೀಡಿ ಮಾತನಾಡಿದರು.
ಬಡ ಕುಟುಂಬವು ಮಗಳ ಅಕಾಲ ನಿಧನದಿಂದಾಗಿ ದಿಕ್ಕೇತೋಚದಂತಾಗಿ ಅನಾಥವಾಗಿದೆ. ಉಭಯ ಸರಕಾರಗಳೂ ಆಥರ್ಿಕವಾದ ಸಹಕಾರವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ ಶ್ರೀಕಾಂತ್, ರಾಜ್ಯ ಸಮಿತಿಯ ಸದಸ್ಯ ರವೀಶ ತಂತ್ರಿ ಕುಂಟಾರು, ಬಿಜೆಪಿ ರಾಜ್ಯ ಕೌನ್ಸಿಲ್ ಸಮಿತಿಯ ಸದಸ್ಯ ಶಿವಕೃಷ್ಣ ಭಟ್ ಬಳಕ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಜನನಿ, ಕಾಸರಗೋಡು ಮಂಡಲದ ಅಧ್ಯಕ್ಷ ಸುಧಾಮ ಗೋಸಾಡ, ಕಾಸರಗೋಡು ಮಂಡಲದ ಪ್ರಧಾನ ಕಾರ್ಯದಶರ್ಿ ಹರೀಶ್ ನಾರಂಪಾಡಿ, ಸುಕುಮಾರ ಕುದ್ರ್ರೆಪ್ಪಾಡಿ, ಬಿಜೆಪಿ ಕಾರಡ್ಕ ಪಂಚಾಯತು ಸಮಿತಿ ಅಧ್ಯಕ್ಷ ವಸಂತ, ರತ್ನಾಕರ, ಸತೀಶ್, ನಾರಾಯಣ, ಗೋಕರ್ಣ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲದ ಅಧ್ಯಕ್ಷ ಪ್ರೊ. ಶ್ರೀ ಕೃಷ್ಣ ಭಟ್, ಡಾ. ವೈ.ವಿ ಕೃಷ್ಣಮೂತರ್ಿ, ಬಳ್ಳಮೂಲೆ ಗೋವಿಂದ ಭಟ್, ಹರಿಪ್ರಸಾದ ಪೆರಿಯಪು, ಮುಳ್ಳೇರಿಯ ಮಂಡಲದ ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಸರ್ಪಮೂಲೆ, ರಾಜಗೋಪಾಲ ಕೈಪಂಗಳ ಮೊದಲಾದವರು ಈ ಸಂದರ್ಭದಲ್ಲಿ ಜೊತೆಗಿದ್ದರು.
   ಸುಳ್ಯ ಶಾಸಕರ ಭೇಟಿ:
   : ಸುಳ್ಯದ ಎನ್. ಎಮ್. ಸಿ. ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾಥರ್ಿನಿ ಕು. ಅಕ್ಷತಾ, ಕಾಲೇಜು ಮುಗಿಸಿ ಮರಳುವಾಗ ಸುಳ್ಯ ಪೇಟೆಯ ನಡುರಸ್ತೆಯಲ್ಲಿ ಹಾಡುಹಗಲೇ ನೂರಾರು ಜನರ ಮಧ್ಯೆ, ವಿಕೃತ ಮನಸ್ಸಿನ ಸಹಪಾಠಿಯ ಕೈಯಲ್ಲಿ ಫೆ. 20ರಂದು ಬರ್ಬರವಾಗಿ ಹತ್ಯೆಯಾದದ್ದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಹತ್ಯೆಯಾದ ಕು. ಅಕ್ಷತಾಳ ಹುಟ್ಟೂರಾದ ಮುಳ್ಳೇರಿಯಾ ಶಾಂತಿನಗರ ಸಮೀಪದ ಕರಣಿ ರಾಧಾಕೃಷ್ಣ ಭಟ್ ರವರ ಮನೆಗೆ ಇತ್ತೀಚೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಎಸ್. ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಕ್ಷೇತ್ರದ ಬಿ. ಜೆ. ಪಿ. ಅಧ್ಯಕ್ಷ ವೆಂಕಟ್ ಒಳಲಂಬೆ, ಕಾರ್ಯದಶರ್ಿ ಸುಬೋದ ಶೆಟ್ಟಿ, ಮುಳಿಯ ಕೇಶವ ಭಟ್, ಹರೀಶ್ ರೈ ಉಬರಡ್ಕ, ಕಾರಡ್ಕ ಪಂಚಾಯತು ಉಪಾಧ್ಯಕ್ಷ ಗೋಪಾಲಕೃಷ್ಣ, ಕ್ಯಾಂಪ್ಕೋ ನಿದರ್ೇಶಕರಾದ ಶಿವಕೃಷ್ಣ ಭಟ್, ಮಹಾಮಂಡಲ ಕಾರ್ಯದಶರ್ಿ ಹರಿಪ್ರಸಾದ್ ಪೆರಿಯಾಪು, ಉಪ್ಪಿನಂಗಡಿ ಮಂಡಲಾಧ್ಯಕ್ಷ ಅಶೋಕ ಕೆದ್ಲ, ಮುಳ್ಳೇರಿಯ ಮಂಡಲ ಅಧ್ಯಕ್ಷ ಪ್ರೊ. ಶ್ರೀಕೃಷ್ಣ ಭಟ್ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries