HEALTH TIPS

No title

            ಕಬಡ್ಡಿ ಬಗ್ಗೆ ಪ್ರೋತ್ಸಾಹದ ಕೊರತೆ:
   ಮುಳ್ಳೇರಿಯ : ಶಾರೀರಿಕ ಕ್ಷಮತೆಯನ್ನು, ಮನಸಿನ ಏಕಾಗ್ರತೆ ಹಾಗೂ ಚಮತ್ಕಾರವನ್ನು ಹೊಂದಿರುವ ಕ್ರೀಡೆ ಕಬಡ್ಡಿ. ತಮಿಳುನಾಡಿನಲ್ಲಿ ಹುಟ್ಟಿ ಭಾರತದೆಲ್ಲೆಡೆ ವಿಜೃಂಭಿಸುತ್ತಿರುವ ಕಬಡ್ಡಿಯು ಶಕ್ತಿ, ಯುಕ್ತಿ ಹಾಗೂ ಸಾಹಸವನ್ನು ಹೊಂದಿರುವ ಕ್ರೀಡೆಯಾಗಿದೆ. ಆದರೆ ಹಿಂದೆ ಸರಿಯಾದ ಪ್ರೋತ್ಸಾಹ, ಸಹಕಾರದ ಕೊರತೆ ಈ ಕ್ರೀಡೆ ಹೆಚ್ಚು ಪ್ರಚಲಿತವಾಗದಿರಲು ಕಾರಣವಾಯಿತು. ಇತ್ತೀಚೆಗೆ ಯುವಜನತೆ ಕಬಡ್ಡಿಯ ಬಗ್ಗೆ ಒಲವು ತೋರಿ ಅಲ್ಲಲ್ಲಿ ಸಧೆರ್ೆಗಳನ್ನು ಏರ್ಪಡಿಸುತ್ತಿರುವುದು ಒಂದು ಕ್ರೀಡೆಯ ಸಂರಕ್ಷಣೆ ಸಿಕ್ಕಿದಂತಾಗಿದೆ. ಮಾತ್ರವಲ್ಲದೆ ರಾಷ್ಟ್ರದ ಗಡಿದಾಟಿ ಅಂತರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯಲು ಪ್ರೇರಣೆಯಾಗಿದೆ. ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಅತ್ಯಕ ಮನರಂಜನೆ ಹಾಗೂ ಉತ್ಸಾಹವನ್ನು ಕ್ರೀಡಾಭಿಮಾನಿಗಳಲ್ಲಿ ತುಂಬುವುದರಲ್ಲಿ ಎರಡು ಮಾತಿಲ್ಲ ಎಂದು ಪ್ರಭಾಕರ ಕಲ್ಲೂರಾಯ ಬೆಳ್ಳೂರು ಅಭಿಪ್ರಾಯಪಟ್ಟರು.
 ಅವರು ಫ್ರೆಂಡ್ಸ್ ಚೆರುಮೂಲ ಆಟ್ಸರ್್ ಆಂಡ್ ಸ್ಪೋಟ್ಸರ್್ ಕ್ಲಬ್ ನೆಟ್ಟಣಿಗೆ ಆಯೋಜಿಸಿದ 58ಕೆಜಿ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
  ಕ್ಲಬ್ ಅಧ್ಯಕ್ಷರಾದ ಅಶ್ರಫ್.ಕೆ.ಎ. ಅಧ್ಯಕ್ಷತೆ ವಹಿಸಿದ್ದು ಕನರ್ಾಟಕ ಬ್ಯಾರಿ ಅಕಾಡೆಮಿ ಸದಸ್ಯರಾದ ಝಡ್ ಎ ಕಯ್ಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಜಾನಪದ ಕಲಾವಿದ ಮನು ಪಣಿಕ್ಕರ್  ಅಭಿನಂದನಾ ಭಾಷಣ ಮಾಡಿದರು. ಬೆಳ್ಳೂರು ಗ್ರಾಮ ಪಂಚಾಯತು ಸದಸ್ಯ ರಾಧಾಕೃಷ್ಣ ಬೇಳೇರಿ, ಸೂಫಿ ಕಿನ್ನಿಂಗಾರ್, ಗೋಪಾಲನ್ ನೆಟ್ಟಣಿಗೆ, ಮೊಹಮ್ಮದ್, ಕೋಮನ್, ಸತ್ತಾರ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕೇರಳ ರಾಜ್ಯ ಕಬಡ್ಡಿ ಆಟಗಾರ ಸೋಮಶೇಖರ ನೆಟ್ಟಣಿಗೆ, ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಹಾಗೂ ಯಕ್ಷಪ್ರತಿಭೆ ಉಪಾಸನಾ ಪಂಜರಿಕೆ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಶಿಧರ ಗೋಳಿಕಟ್ಟೆ ಸ್ವಾಗತಿಸಿ, ಜುನೈದ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ತಂಡಗಳ ಕಬಡ್ಡಿ ಪಂದ್ಯಾಟ ಜರುಗಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries