HEALTH TIPS

No title

               ಕತ್ತಲಲ್ಲಿ  ಕೇಂದ್ರ ವಿವಿ ನೂತನ ಅಕಾಡೆಮಿಕ್ ಬ್ಲಾಕ್ ಕಟ್ಟಡ
    ಕಾಸರಗೋಡು: ಪೆರಿಯದಲ್ಲಿರುವ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಕಳೆದ ಎಪ್ರಿಲ್ 29ರಂದು ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು  ಉದ್ಘಾಟಿಸಿದ ಅತ್ಯಾಧುನಿಕ ಮಾದರಿಯ ನೂತನ ಎಂಟು ಅಕಾಡೆಮಿಕ್ ಬ್ಲಾಕ್ ಕಟ್ಟಡಕ್ಕೆ ಇನ್ನೂ  ವಿದ್ಯುತ್ ಸಂಪರ್ಕ ಲಭಿಸದೆ ಸಮಸ್ಯೆ ಜೀವಂತವಾಗಿಯೇ ಮುಂದುವರಿದಿದೆ.
    ಅಗತ್ಯದ ತಪಾಸಣೆಗಳನ್ನು  ಪೂರ್ಣಗೊಳಿಸಿ ಪಾವತಿಸಬೇಕಾದ ಹಣವನ್ನು  ಪಾವತಿಸಿದ್ದರೂ ವಿದ್ಯುತ್ ಕನೆಕ್ಷನ್ ನೀಡುವ ವಿಷಯದಲ್ಲಿ  ಕೆಎಸ್ಇಬಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ.
   ಕೇಂದ್ರ ಸರಕಾರದ ಸಂಸ್ಥೆಯಾಗಿರುವುದರಿಂದ ಚೆನ್ನೈಯಿಂದ ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧಿಕಾರಿಗಳು, ಕೆಎಸ್ಇಬಿ ಕಾಸರಗೋಡು ಸರ್ಕಲ್ ಸಹಾಯಕ ಮುಖ್ಯ ಅಭಿಯಂತರರು  ತಪಾಸಣೆ ನಡೆಸಿ ತೃಪ್ತಿಕರ ಎಂದು ದೃಢಪಡಿಸಿದ್ದರೂ, ವಿದ್ಯುತ್ ಸಂಪರ್ಕ ಒದಗಿಸಲು ವಿಳಂಬ ಮಾಡಲಾಗುತ್ತಿದೆ.
   ಹದಿನೈದು ದಿನಗಳ ಹಿಂದೆ ಕೇಂದ್ರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಜಿ.ಗೋಪಕುಮಾರ್ ಅವರು ತಿರುವನಂತಪುರದಲ್ಲಿ  ಕೆಎಸ್ಇಬಿ ಅಧ್ಯಕ್ಷ  ಎನ್.ಶಿವಶಂಕರ ಪಿಳ್ಳೆ ಅವರನ್ನು  ನೇರವಾಗಿ ಭೇಟಿಯಾಗಿ ವಿಷಯ ತಿಳಿಸಿದ್ದರು. ಒಂದು ವಾರದೊಳಗೆ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. 
   ಈ ಮಧ್ಯೆ ವಿದ್ಯುತ್ ಮಂಡಳಿ ಅಧ್ಯಕ್ಷರು ಕಾಸರಗೋಡಿಗೆ ಬಂದಾಗ ಉಪಕುಲಪತಿಯವರು ಅಧ್ಯಕ್ಷರನ್ನು  ದೂರವಾಣಿ ಮೂಲಕ ಸಂಪಕರ್ಿಸಿ ವಿದ್ಯುತ್ ಸಂಪರ್ಕ ಲಭಿಸದ ವಿಚಾರ ತಿಳಿಸಿದಾಗ ಎರಡು ದಿನಗಳೊಳಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
   ಮರು ದಿನವೇ ಕೇಂದ್ರ ವಿಶ್ವವಿದ್ಯಾನಿಲಯ ಅಧಿಕಾರಿಗಳು ವಿದ್ಯುತ್ ಸಂಪರ್ಕಕ್ಕಾಗಿ ಪಾವತಿಸಬೇಕಾದ 9.28 ಲಕ್ಷ  ರೂಪಾಯಿಯನ್ನು  ಡಿಡಿ ಮೂಲಕ ಕೆಎಸ್ಇಬಿಗೆ ಕಳುಹಿಸಿದ್ದರು. ಆದರೆ ಮೊತ್ತ  ಪಾವತಿಸಿ ಒಂದು ವಾರ ಕಳೆದರೂ ಕೆಎಸ್ಇಬಿ ಕಡೆಯಿಂದ ವಿದ್ಯುತ್ ಸಂಪರ್ಕ ನೀಡುವ ಕ್ರಮಗಳು ನಡೆಯುತ್ತಿಲ್ಲ  ಎಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ.
    ಇದೇ ವೇಳೆ ವಿದ್ಯುತ್ ಇಲಾಖೆಯ ಸಚಿವ ಎ.ಕೆ.ಬಾಲನ್ ಅವರ ಕಚೇರಿಯನ್ನು  ವಿಶ್ವವಿದ್ಯಾನಿಲಯ ಅಧಿಕಾರಿಗಳು ಸಂಪಕರ್ಿಸಿದ್ದರು. ಸಚಿವರ ಅಡಿಶನಲ್ ಖಾಸಗಿ ಕಾರ್ಯದಶರ್ಿಯವರು ನೇರವಾಗಿ ಕರೆ ಮಾಡಿ ಕೂಡಲೇ ವಿದ್ಯುತ್ ಸಂಪರ್ಕ ನೀಡುವುದಾಗಿ ಹೇಳಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪಯರ್ಾಸವಾಗಿದೆ.
   ಕಾಸರಗೋಡು ಸರ್ಕಲ್ ಸಹಾಯಕ ಮುಖ್ಯ ಅಭಿಯಂತರ ರನ್ನು ವಿವಿ ಅಧಿಕಾರಿಗಳು ಸಂಪಕರ್ಿಸಿದಾಗ ಹೊಸದಾಗಿ ಏಳು ಸೆಟ್ ಅಜರ್ಿಗಳನ್ನು  ಮತ್ತು  ಅಗ್ರಿಮೆಂಟ್ ಪ್ರತಿಗಳನ್ನು  ಸಲ್ಲಿಸಬೇಕೆಂದು ಅಲ್ಲದೆ ಪಾವತಿಸಿದ ಮೊತ್ತ  ಇಲ್ಲಿ  ಇಲಾಖೆಯ ಖಾತೆಗೆ ಜಮೆಯಾಗಿದೆಯೇ  ಎಂಬುದನ್ನು  ಪರಿಶೀಲಿಸಬೇಕಾಗಿದೆ ಎಂದೂ ಪ್ರತಿಕ್ರಿಯೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯಕ ಸಿಇಯವರ ಕಚೇರಿಗೆ ನೇರವಾಗಿ ತೆರಳಿ ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬ ನೂತನ ನಿದರ್ೇಶನವೂ ಬಂದಿದೆ. ಅಜರ್ಿಗಳು, ಅಗ್ರಿಮೆಂಟ್ ಪ್ರತಿಗಳನ್ನು  ಈಗಾಗಲೇ ನೀಡಿರುವುದಾಗಿ ವಿಶ್ವವಿದ್ಯಾನಿಲಯ ಅಧಿಕಾರಿಗಳು ಹೇಳಿದ್ದಾರೆ. ಸಂಪರ್ಕ ಶೀಘ್ರ ನೀಡಲು ವಿದ್ಯುತ್ ಅಧಿಕಾರಿಗಳು ತಯಾರಾದರೂ ಮೀಟರ್ ತಪಾಸಣೆ ಇತ್ಯಾದಿಗಳಿಗೆ ಸಮಯಾವಕಾಶ ಬೇಕಾಗಿ ಬರಲಿದೆ.
   ಜೂನ್ 18ರಂದು ದ್ವಿತೀಯ ವರ್ಷ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳಿಗೆ ನೂತನ ಅಕಾಡೆಮಿಕ್ ಬ್ಲಾಕ್ಗಳಲ್ಲಿ  ತರಗತಿಗಳು ಆರಂಭಗೊಳ್ಳುವ ಮುಂಚಿತವಾಗಿ ತರಗತಿ ಕೊಠಡಿಗಳನ್ನು  ಸಿದ್ಧಗೊಳಿಸಲು ವಿದ್ಯುತ್ ಲಭಿಸದಿರುವುದು ಅಡಚಣೆಯಾಗಿ ಪರಿಣಮಿಸಿದೆ ಎಂದು ವಿಶ್ವ ವಿದ್ಯಾನಿಲಯದ ಅಧಿಕಾರಿಗಳು ಹೇಳಿದ್ದಾರೆ.
    ಅತಿ ಶೀಘ್ರದಲ್ಲಿ  ವಿದ್ಯುತ್ ಸಂಪರ್ಕ : ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದ ನೂತನ ಅಕಾಡೆಮಿಕ್ ಬ್ಲಾಕ್ಗಳಿಗೆ ಮುಂದಿನ ಕೆಲವು ದಿನಗಳೊಳಗೆ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗುವುದು. ಇಲ್ಲಿಗೆ ಹೈಟೆನ್ಶನ್ ಲೈನ್ ವಿದ್ಯುತ್ ಸಂಪರ್ಕವಾಗಿರುವುದರಿಂದ ಕಾಲವಿಳಂಬವಾಗದು. ವಿದ್ಯುತ್ ಸಂಪರ್ಕ ಒದಗಿಸಲಿರುವ ಎಲ್ಲಾ  ಕ್ರಮಗಳನ್ನು  ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ  ವಿವಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಕೆಎಸ್ಇಬಿ ಅಧಿಕಾರಿಗಳು ಪ್ರತಿಕ್ರೀಯಿಸಿದ್ದಾರೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries