HEALTH TIPS

No title

               ಇಂದು ಶಾಲಾ(ಜೂ.1) ಪ್ರವೇಶೋತ್ಸವ
              ಕನ್ನಡ ಮಾಧ್ಯಮ ಶಾಲೆಗಳ ಮೇಲೆ ಮಲಯಾಳಂ ಭಾಷಾಗುಮ್ಮ!
    ಕುಂಬಳೆ: ಇದೇ ಮೊದಲ ಬಾರಿಗೆ ವಿದ್ಯಾಥರ್ಿಗಳು ಹೊಸ ಪಠ್ಯ ಪುಸ್ತಕಗಳೊಂದಿಗೆ ಶಾಲೆಗಳಿಗೆ ತೆರಳಲಿದ್ದು, ಶಾಲಾ ಪ್ರವೇಶೋತ್ಸವದಲ್ಲಿ ಭಾಗವಹಿಸಲಿದ್ದಾರೆ. 'ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ 1 ರಿಂದ 9 ನೇ ತರಗತಿ ವಿದ್ಯಾಥರ್ಿಗಳಿಗೆ ಮುಂಚಿತವಾಗಿಯೇ ಮುಂದಿನ ತರಗತಿಗಳ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ.ಕಳೆದ ಹಲವು ವರ್ಷಗಳಿಂದ ವಿದ್ಯಾಥರ್ಿಗಳು ಪಠ್ಯ ಪುಸ್ತಕಗಳ ಮುದ್ರಣದಲ್ಲಿ ಅವ್ಯವಸ್ಥೆಯಿಂದ ಪಠ್ಯ ಪುಸ್ತಕ ವಂಚಿತರಾಗುತ್ತಿದ್ದರು, ಈ ಬಾರಿ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಆರಂಭಿಸಲಾಗಿದೆ' ಎಂದು ಶಿಕ್ಷಣ ಉಪನಿದರ್ೇಶಕ ಗಿರೀಶ್ ಚೊಲಯಿಲ್ ಹೇಳಿದ್ದಾರೆ. ಪುಸ್ತಕ ಪಡೆಯದೆ ಇದ್ದ ವಿದ್ಯಾಥರ್ಿಗಳು ಶಾಲಾರಂಭದ ದಿನದಂದು ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
   ರಾಜ್ಯದಲ್ಲೇ ಮೊದಲ ಬಾರಿಗೆ 1 ರಿಂದ 4 ನೇ ತರಗತಿಯವರೆಗಿನ ಸರಕಾರಿ ಶಾಲಾ ವಿದ್ಯಾಥರ್ಿಗಳಿಗೆ ಎರಡು ಜೊತೆ ಸಮವಸ್ತ್ರ ಬಟ್ಟೆ ಹಂಚಲಾಗಿದೆ. 8 ನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾಥರ್ಿಗಳಿಗೆ ಸಮವಸ್ತ್ರಕೊಳ್ಳಲು ಅಗತ್ಯವಿರುವ ಹಣವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
   ಜಿಲ್ಲೆಯ ಹೆಚ್ಚಿನ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಸ್ಮಾಟರ್್ ಕ್ಲಾಸ್ರೂಮ್ಗಳನ್ನು ಸಿದ್ಧಪಡಿಸಲಾಗಿದ್ದು, ವಿದ್ಯಾಥರ್ಿನಿಯರಿಗೆ ಶೀ-ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಲಾಗಿದೆ.ಸರಕಾರಿ ಶಾಲೆಗಳಲ್ಲಿ ಪ್ರತಿಬಾರಿಗಿಂತ 10 ಶೇ. ಹೆಚ್ಚಿನ ನೋಂದಣಿಯಾಗುವ ನಿರೀಕ್ಷೆಯಿದೆ. ಜಿಲ್ಲೆಯ ಪೊಯಿನಾಚಿ ಬಳಿಯಿರುವ ತೆಕ್ಕಿಲಪರಂಬ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾವಾರು ಪ್ರವೇಶೋತ್ಸವ ನಡೆಯಲಿದ್ದು, ಒಂದನೇ ತರಗತಿಗೆ 115 ಮಂದಿ ಪುಟಾಣಿಗಳು ದಾಖಲಾಗಿದ್ದಾರೆ ಎಂದು ಶಿಕ್ಷಣ ನಿದರ್ೇಶಕರು ತಿಳಿಸಿದ್ದಾರೆ.
     ಶಿಕ್ಷಕರ ಕೊರತೆ:
  ಜಿಲ್ಲೆಯ ಮಲಯಾಳಂ ಮತ್ತುಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 368 ಮಂದಿ ಶಿಕ್ಷಕರ ಕೊರತೆಯಿದೆ. ಹಿರಿಯ ಪ್ರಾಥಮಿಕ ಶಾಲೆಗಳ ಕನ್ನಡ ಮತ್ತು ಮಲಯಾಳಂ ಮಾಧ್ಯಮದಲ್ಲಿ ಪಾಠಮಾಡುವ 260 ಮಂದಿ ಶಿಕ್ಷಕರ ಕೊರತೆಯಿದೆ. ಜಿಲ್ಲೆಯ ಹಲವು ಪ್ರೌಢಶಾಲೆಗಳಲ್ಲಿ 149 ಮಂದಿ ಶಿಕ್ಷಕರ ಕೊರೆತೆಯಿದೆ ಎಂದು ತಿಳಿಸಿರುವ ಶಿಕ್ಷಣ ಇಲಾಖೆ, ಖಾಲಿ ಬಿದ್ದಿರುವ ಹುದ್ದೆಗಳನ್ನು ಶೀಘ್ರವೇ ಭತರ್ಿ ಮಾಡುವಂತೆ  ಲೋಕಸೇವಾ ಆಯೋಗವನ್ನು ಕೇಳಿಕೊಂಡಿದೆ.
     ಕನ್ನಡ ಹೋರಾಟ: ಮಲಯಾಳ ಹೇರಿಕೆಯ ಭೀತಿ:
   ಸರಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಹೇರಬಾರದು, ಕನ್ನಡ ಭಾಷಾ ಶಿಕ್ಷಣ ಕನ್ನಡಿಗರ ಹಕ್ಕು ಮತ್ತು ಸ್ವಾತಂತ್ರ್ಯ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕೆನ್ನುವ ಹೋರಾಟದ ಹೊರತಾಗಿಯೂ ಮಲಯಾಳ ಭಾಷಾ ಹೇರಿಕೆಯ ಭೀತಿಯು ಕನ್ನಡ ಮಾಧ್ಯಮ ಶಾಲೆಗಳನ್ನು ಆವರಿಸಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಮಲಯಾಳಂ ಭಾಷೆಯನ್ನು ಕಲಿಸಲು ಸರಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಸರಕಾರದ ನಡೆಯನ್ನು ವಿರೋಧಿಸಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಕನ್ನಡ ಪ್ರೇಮಿಗಳು, ಅಧ್ಯಾಪಕರು, ವಿದ್ಯಾಥರ್ಿಗಳು ಒಂದು ವಾರ ಧರಣಿ ಸತ್ಯಾಗ್ರಹ ನಡೆಸಿದ್ದು, ಒಟ್ಟು ಏಳು ಅಂಶದ ಮನವಿಯನ್ನು ಸರಕಾರಕ್ಕೆ ಸಮಪರ್ಿಸಿ, ಮಲಯಾಳ ಹೇರಿಕೆಯನ್ನು ಹಿಂಪಡೆಯಬೇಕು ಎನ್ನುವ ಬೇಡಿಕೆಯನ್ನು ಮುಂದಿರಿಸಲಾಗಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries