HEALTH TIPS

No title

       ನಮ್ಮ ನೆಲದ ಬೇರುಗಳಿಂದ ಕಳಚಿ ಅತಂತ್ರರಾಗುವುದು ಬೇಡ ಯುವಜನಾಂಗ-ಡಾ. ಧನಂಜಯ ಕುಂಬ್ಳೆ       
    ಪೆರ್ಲ: ಜಗತ್ತಿನಲ್ಲಿ ಭರತ ಖಂಡದ ಕುಟುಂಬ ವ್ಯವಸ್ಥೆಯಷ್ಟು ಪರಿಪೂರ್ಣವಾದ ಸಮಷ್ಠಿ ವ್ಯವಸ್ಥೆ ಬೇರೊಂದೆಡೆ ಕಂಡುಬರಲಾರದು. ಇಂತಹ ವಿಶಿಷ್ಟ ವ್ಯವಸ್ಥೆಯನ್ನು ರೂಪಿಸುವಲ್ಲಿ ಸ್ತ್ರೀ ಮಹತ್ವಪೂರ್ಣ ಕೊಡುಗೆ ನೀಡಿದ್ದು ಧನಾತ್ಮಕ ಆವರಣ ಸೃಷ್ಟಿಸಿ ಸಮಾಜದ ಅಭ್ಯುದಯಕ್ಕೆ ಕಾರೀಕರ್ತರಾಗಿದ್ದಾಳೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದರು.
  ಕಾಟುಕುಕ್ಕೆಯ ಶ್ರೀಕಾತರ್ಿಕೇಯ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಭಾನುವಾರ ಕಾಟುಕುಕ್ಕೆ ಶ್ರಿಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ "ಸೇಫ್ ಝೋನ್ 2018" ವಿಶೇಷ ಮಾಹಿತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
   ಸೌಂದರ್ಯ, ಪ್ರಜ್ಞೆ ಹಾಗೂ ವಾತ್ಸಲ್ಯಗಳ ಶಕ್ತಿಯ ಮಹಿಳಾ ಮನಸ್ಸುಗಳು ಎಚ್ಚೆತ್ತಲ್ಲಿ ಸಮಗ್ರ ಸಮಾಜ ಕ್ರಿಯಾಕ್ಮಕವಾಗಬಲ್ಲದು ಎಂದು ತಿಳಿಸಿದ ಅವರು, ಕಾತರ್ಿಕೇಯ ಚಾರಿಟೇಬಲ್ ಟ್ರಸ್ಟ್ ತನ್ನ ಬಹುಮುಖೀ ಚಟುವಟಿಕೆಗಳ ಮೂಲಕ ಸಮಾಜ ನಿಮರ್ಾಣದಲ್ಲಿ ಮಾದರಿಯಾಗಿ ರೂಪುಗೊಂಡಿದೆ ಎಂದು ಶ್ಲಾಘಿಸಿದರು. ಆಧುನಿಕ ಸಮಾಜವು ವ್ಯಾವಹಾರಿಕ ಜಗತ್ತಿನೆಡೆಗೆ ತೆರೆದುಕೊಳ್ಳುತ್ತಿರುವುದು ಪರಂಪರೆಯ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದು ಭೀತಿ ವ್ಯಕ್ತಪಡಿಸಿದ ಅವರು, ನಮ್ಮ ನೆಲದ ಬೇರುಗಳಿಂದ ಕಳಚಿ ಅತಂತ್ರ, ಅಸಂತುಷ್ಠ  ಸಮಾಜ ನಿಮರ್ಿಸುವ ಮಕ್ಕಳನ್ನು ರೂಪಿಸುವುದು ಬೇಡ ಎಂದು ಅವರು ಈ ಸಂದರ್ಭ ತಿಳಿಸಿದರು.
   ಮಂಗಳೂರಿನ ಶ್ರೀಮಂಜುನಾಥೇಶ್ವರ ಆಯುವರ್ೇದ ಕಾಲೇಜಿನ ಆಡಳಿತಾಧಿಕಾರಿ ಡಾ.ಪ್ರತಿಭಾ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕುಟುಂಬ ವ್ಯವಸ್ಥೆ ಬಲಿಷ್ಠವಾಗಿ ಸುಲಲಿತವಾಗಿ ಸಾಗುವುದಕ್ಕೆ ಮಹಿಳೆಯ ವೈಶಾಲ್ಯತೆಯ ಅಂತಃಶಕ್ತಿ ಕಾರಣ ಎಂದು ತಿಳಿಸಿದರು.
  ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಪುರುಷೋತ್ತಮ ಭಟ್ ಮಿತ್ತೂರು, ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ ಮಲ್ಲಿಕಾ ಜೆ. ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
  ಈ ಸಂದರ್ಭ ಖ್ಯಾತ ಚಿತ್ರ ಕಲಾವಿದೆ ಅನುಪಮಾ ಪಿ.ಜಿ ಯವರನ್ನು ತಮ್ಮ ಚಿತ್ರಕಲಾ ಕ್ಷೇತ್ರದ ಕೊಡುಗೆಗಳಿಗಾಗಿ ಅಭಿನಂದಿಸಿ ಗೌರವಿಸಲಾಯಿತು. ಗೌರವಾಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಹೆಣ್ಮಕ್ಕಳು ತಮ್ಮೊಳಗಿನ ಪ್ರತಿಭೆಯನ್ನು ಮುನ್ನಲೆಗೆ ತರುವಲ್ಲಿ ಉತ್ಸುಕತೆ ತೋರಿದಲ್ಲಿ ಪ್ರೋತ್ಸಾಹ ಲಭಿಸುತ್ತದೆ. ಕೀಳರಿಮೆ ತೊರೆದು ಯಶಸ್ಸಿನ ಮಾರ್ಗದಲ್ಲಿ ಮುನ್ನಡೆಯುವ ಧೀಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
   ಟ್ರಸ್ಟ್ನ ನಿದರ್ೇಶಕಿ ಸನ್ನಿಧಿ ಟಿ. ರೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾರಾನಾಥ ರೈ ವಂದಿಸಿದರು. ದೀಪಕ್ ಭಂಡಾರಮನೆ ಕಾರ್ಯಕ್ರಮ ನಿರೂಪಿಸಿರು. ರಾಜಶ್ರೀ ಟಿ. ರೈ, ಅಕ್ಷತಾರಾಜ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. 
   ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಬದುಕಿಗೆ ಧೈರ್ಯ ತುಂಬುವ, ಸ್ವಯಂ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಮತ್ತು ತಮ್ಮೊಳಗಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ದಾರಿದೀಪವಾಗುವ ಉದ್ದೇಶದಿಂದ ಕುಮಾರಿ ಸನ್ನಿಧಿ ಟಿ ರೈ ಅವರ ನಿದರ್ೇಶನದ ಕಾತರ್ಿಕೇಯ ಚಾರಿಟೇಬಲ್ ಟ್ರಸ್ಟ್ ಭಾನುವಾರ ದಿನಪೂತರ್ಿ ಆಯೋಜಿಸಿದ ಸೇಫ್ ಝೋನ್ 2018 ವಿಶೇಷ ಮಾಹಿತಿ ಶಿಬಿರವನ್ನು ಬೆಳಗ್ಗೆ 9 ಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಕಾಲೇಜು ಉಪನ್ಯಾಸಕಿ ವಾಣಿ ಜಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಸುಬ್ರಾಯ ದೇಗುಲದ ಪ್ರಧಾನ ಅರ್ಚಕ ನಾರಾಯಣ ಮಯ್ಯ ಉದ್ಘಾಟಿಸಿದರು. ಆಡಳಿತ ಮೊಕ್ತೇಸರ ವಿಷ್ಣು ಪ್ರಕಾಶ್ ಪಿಲಿಂಗಲ್ಲು ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಸಂಜೀವ ರೈ ಕೆಂಗಣಾಜೆ ಶುಭಾಶಂಸನೆಗೈದರು.
   ಬಳಿಕ ನಡೆದ ವಿಶೇಷ ತರಬೇತಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರ ನಿರ್ಮಲ್ ಕುಮಾರ್ "ಆದರ್ಶ ಪೋಷಕರೆನಿಸುವುದು ಹೇಗೆ?", ಮಂಜುನಾಥೇಶ್ವರ ಆಯುವರ್ೇದ ಕಾಲೇಜು ಮಂಗಳೂರು ಇದರ ಸಂಚಾಲಕಿ ಪ್ರತಿಭಾ ರೈ " ಹೆಣ್ಣು ಮಕ್ಕಳ ಶಾರೀರಿಕ, ಮಾನಸಿಕ ಆರೋಗ್ಯ ಮತ್ತು ಸ್ವಚ್ಚತೆ" ,ಚೈಲ್ಡ್ ಲೈನ್ ಕಾಸರಗೋಡು ಇದರ ಸಂಯೋಜಿಕ ಉದಯ ಕುಮಾರ್ "ಹೆಣ್ಣು ಮಕ್ಕಳಲ್ಲಿ ಸ್ವಯಂ ರಕ್ಷಣೆಯ ಜಾಗೃತಿ" ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಬದಿಯಡ್ಕದ ಕರಾಟೆ ಪಟು ಮಾಸ್ಟರ್ ಆನಂದ ಮತ್ತು ತಮಡ ಕರಾಟೆಯ ಮೂಲಕ ಸ್ವರಕ್ಷಣೆಯ ಬಗ್ಗೆ ತರಬೇತಿ ನೀಡಿದರು. ರಂಗ ನಿದರ್ೇಶಕರಾದ ಉದಯ ಸಾರಂಗ್, ಕೃಷ್ಣಪ್ಪ ಬಂಬಿಲ ಹಾಗೂ ಸುಶ್ಮಿತಾ ಕುಂಬಳೆ  ಸೃಜನಾತ್ಮಕತೆ ಮತ್ತು ನಾವು, ಅಭಿನಯ ಗೀತೆ, ರಂಗದಾಟ, ಜಾನಪದ ಹಾಡು ಕುಣಿತ  ವಿಷಯಗಳ ಕುರಿತು ಮಾಹಿತಿ ನೀಡಿದರು.
   



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries