HEALTH TIPS

No title

                ಕನ್ನಡ ಹೋರಾಟ ಶಕ್ತಿ ಪ್ರದರ್ಶನ- ಮಹಾಸ್ಪೋಟ-ತುಳು ಅಕಾಡೆಮಿ ಅಧ್ಯಕ್ಷರ ರಾಜೀನಾಮೆ
              ಮಹಾಜನ ಆಯೋಗ ವರದಿ ಶೀಘ್ರ ಜಾರಿಯಾಗಲಿ : ಪುರುಷೋತ್ತಮ ಮಾಸ್ತರ್
    ಕಾಸರಗೋಡು: ರಾಜ್ಯ ಸರಕಾರದ ಕನ್ನಡ ವಿರೋಧಿ ಧೋರಣೆಗೆದುರಾಗಿ ಕನ್ನಡ ಹೋರಾಟ ಸಮಿತಿ ಕಳೆದ ಆರು ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ಸಹನೆಯ ಕಟ್ಟೆಯೊಡೆದು ಕೇರಳ ತುಳು ಅಕಾಡೆಮಿಯ ಅಧ್ಯಕ್ಷರ ರಾಜೀನಾಮೆಯ ಘೋಷಣೆಯ ಮೂಲಕ ಅಚ್ಚರಿಯೊಂದಿಗೆ ಕನ್ನಡ ಶಕ್ತಿಯ ಪ್ರದರ್ಶನ ಗೆಲುವು ಪಡೆದಿದೆ. 
    ಸೋಮವಾರ ಬೆಳಿಗ್ಗೆ ಹಿರಿಯ ಹೋರಾಟಗಾರ, ಸಮನ್ವಯ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಮಾಸ್ತರ್ ಆರನೇ ದಿನದ ಧರಣಿಯನ್ನು ಉದ್ಘಾಟಿಸಿ  ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು 1956 ರಿಂದ ಅನು`ವಿಸುತ್ತಿರುವ ವಿವಿ` ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಹಾಜನ ಆಯೋಗ ವರದಿ ಜಾರಿಯಾಗಲೇ ಬೇಕೆಂದು ಆಗ್ರಹಿಸಿದರು.
   ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆಂದು ಮಹಾಜನ ವರದಿಯಲ್ಲಿ ಶಿಫಾರಸು ಮಾಡಿದೆ. ಈ ವರದಿ ಇಂದೂ ಕೇಂದ್ರ ಸರಕಾರದಲ್ಲಿ ನೆನೆಗುದಿಗೆ ಬಿದ್ದಿದೆ. ಈ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು. ಈ ಮೂಲಕ ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳಿಂದ ಮತ್ತು ಕೇರಳ ಸರಕಾರದ ದಬ್ಬಾಳಿಕೆಯಿಂದ ಪಾರಾಗಲು ಸಾಧ್ಯ. ಮಹಾಜನ ವರದಿ ಶೀಘ್ರ ಅನಷ್ಠಾನಗೊಳಿಸುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ ಎಂದ ಅವರು ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವೆಂದು ಘೋಷಿಸಲಾಗಿದೆ. ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕರಿಗೆ ನೀಡಲಾದ ಎಲ್ಲಾ ಸವಲತ್ತು, ಹಕ್ಕುಗಳನ್ನು ಕಸಿದು ಕೊಳ್ಳಲು ಕೇರಳ ಸರಕಾರ ನಿರಂತರವಾಗಿ ಯತ್ನಿಸುತ್ತಲೇ ಇದೆ. ಅಧಿಕಾರಿಗಳು ಕನ್ನಡಿಗರ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ಹತ್ತಿಕ್ಕಲು ಪ್ರಯತ್ನಿಸುವುದರ ಜೊತೆಗೆ ಕನ್ನಡಿಗರಿಗೆ ಬೆದರಿಕೆಯೊಡ್ಡುವ ಮಟ್ಟಿಗೆ ಮುಂದುವರಿದಿದೆ. ಸರಕಾರದ ಕಡ್ಡಾಯ ಮಲಯಾಳ ಕಲಿಕೆ ಆದೇಶದ ವಿರುದ್ಧ ಕನ್ನಡಿಗರು ನಿರಂತರ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿಮರ್ಾಣವಾಗಿದ್ದು, ಈ ಆದೇಶ ಹಿಂತೆಗೆಯುವ ತನಕ ಹೋರಾಟವನ್ನು ಮುಂದುವರಿಸಬೇಕೆಂದು ಅವರು ಹೇಳಿದರು. 
    ಸೋಮವಾರದ ಸರಣಿ ಸತ್ಯಾಗ್ರಹವನ್ನು ವಿದ್ಯಾಥರ್ಿ ಬಳಗ ಕೈಗೆತ್ತಿಕೊಂಡಿರುವುದು ಶ್ಲಾಘನೀಯ. ಯುವ ಜನಾಂಗ ಕನ್ನಡ ಪರ ಹೋರಾಟದಲ್ಲಿ ಸಕ್ರಿಯವಾಗಬೇಕು. ಇದರಿಂದ ಕಾಸರಗೋಡಿನ ಕನ್ನಡಿಗರನ್ನು, ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ರಕ್ಷಿಸಲು ಸಾಧ್ಯವಾಗುವುದು. ವಿದ್ಯಾಥರ್ಿಗಳ ಬಳಗದ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು. ಕಾಸರಗೋಡು ಎಂದೆಂದೂ ಕನ್ನಡ ನಾಡು. ಇದು ಕನರ್ಾಕದ ಭಾಗವೇ ಆಗಿದೆ. ರಾಜ್ಯ ಪುನವರ್ಿಂಗಡಣೆಯ ಮೂಲಕ ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರಿಸುವ ಮೂಲಕ ಕನ್ನಡಿಗರಿಗೆ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ನಿರಂತರ ಹೋರಾಟವನ್ನು ಮುಂದುವರಿಸಬೇಕೆಂದರು.
  ಧರಣಿ ಸತ್ಯಾಗ್ರಹದಲ್ಲಿ ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್. ಅಧ್ಯಕ್ಷತೆ ವಹಿಸಿದರು.
       ಹೋರಾಟ ಅನಿವಾರ್ಯ : ಯಕ್ಷಗಾನದಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಇನ್ನೂ ಜೀವಂತವಾಗಿದೆ. ಜೀವಂತವಾಗಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಹತ್ತಿಕ್ಕಲು ಮಲಯಾಳ ಕಲಿಕೆ ಕಡ್ಡಾಯ ಆದೇಶದ ಮೂಲಕ ಕೇರಳ ಸರಕಾರ ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಇದಕ್ಕಾಗಿ ಕನ್ನಡಿಗರೆಲ್ಲರು ಒಂದಾಗಿ ಹೋರಾಟವನ್ನು ತೀವ್ರಗೊಳಿಸಬೇಕೆಂದು ಕನರ್ಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ ಅವರು ಹೇಳಿದರು.
   ಮಲಯಾಳ ಹೇರಿಕೆಯಿಂದ ಕನ್ನಡ ಭಾಷೆ, ಸಂಸ್ಕೃತಿ ನಾಶ : ಭಾಷಾ ಅಲ್ಪಸಂಖ್ಯಾತರ ಮೇಲೆ ಮಲಯಾಳ ಕಲಿಕೆ ಕಡ್ಡಾಯಗೊಳಿಸುವ ಆದೇಶದ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ನಾಶಕ್ಕೆ ಕೇರಳ ಸರಕಾರ ಹೊರಟಿದೆ. ಭಾಷೆ ಹೇರಿಕೆಯಿಂದ ಕೆಲವೇ ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಸರ್ವನಾಶವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಾವೆಲ್ಲ ಎಚ್ಚೆತ್ತುಕೊಂಡು ಸರಕಾರದ ದಬ್ಬಾಳಿಕೆ ನೀತಿಯನ್ನು ಪ್ರತಿಭಟಿಸೋಣ ಎಂದು ಶ್ರದ್ಧಾ ನಾಯರ್ಪಳ್ಳ ಅವರು ಹೇಳಿದರು. ಕನ್ನಡಿಗರು ಇಂದಿನಿಂದಲೇ ಕ್ರಿಯಾತ್ಮಕತೆಯನ್ನು ರೂಢಿಸಿಕೊಳ್ಳಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದರು.
   ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ವಿದ್ವಾನ್.ಕಲ್ಮಾಡಿ ಸದಾಶಿವ ಆಚಾರ್, ಐ.ಸತ್ಯನಾರಾಯಣ ಭಟ್, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸವಾಕ್ ಜಿಲ್ಲಾ ಅಧ್ಯಕ್ಯೆಂ.ಉಮೇಶ್ ಸಾಲಿಯಾನ್, ಶ್ರೀಶ ಪಂಜಿತ್ತಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ತರ್, ವಿಜಯರಾಜ ಪುಣಿಂಚಿತ್ತಾಯ, ಸ್ನೇಹರಂಗದ ಅಧ್ಯಕ್ಷೆ ವಿಶಾಲಾಕ್ಷಿ, ಸಿರಿಚಂದನದ ಮಹೇಶ್ ಏತಡ್ಕ, ಪ್ರಭಾವತಿ ಕೆದಿಲಾಯ ಮೊದಲಾದವರು ಮಾತನಾಡಿದರು.
   ಗಿಳಿವಿಂಡು ಅಧ್ಯಕ್ಷ ಉದಿತ್ ಕುಮಾರ್, ಪ್ರಶಾಂತ್ ಹೊಳ್ಳ, ಕೀರ್ತನ್ ಕುಮಾರ್, ಲವೀನಾ ಪ್ರೀತಿ ಕ್ರಾಸ್ತಾ, ವಿನೋದ್ ಕುಮಾರ್ ಸಿ.ಎಚ್, ರಾಜೇಶ್ ಎಸ್.ಪಿ, ಅಜಿತ್ ಶೆಟ್ಟಿ, ಸುಬ್ರಹ್ಮಣ್ಯ ಹೇರಳ, ಸಂಶೋಧನಾ ವಿದ್ಯಾಥರ್ಿಗಳಾದ ಸಂಧ್ಯಾ ಕುಮಾರಿ, ಸೌಮ್ಯಾ ಪ್ರಸಾದ್, ಸೌಮ್ಯ ಶೆಟ್ಟಿ, ಸುಜಿತ್ ಕುಮಾರ್, ಪ್ರದೀಪ್ ಕುಮಾರ್, ರಶೀದ್ ಉಪ್ಪಳ, ಸ್ವಾತಿ ಸರಳಿ, ಡಯಟ್ನ ವಿದ್ಯಾಥರ್ಿಗಳಾದ ಶ್ಯಾಮ್, ಸುಕೃತ, ಸ್ವಾತಿ, ಸ್ನೇಹರಂಗದ ರಾಮಕೃಷ್ಣ, ಬಿಎಡ್ ವಿದ್ಯಾಥರ್ಿಗಳಾದ ನಿಷಾ, ಭವ್ಯ ಬಲ್ಲಾಳ್, ಸಾಹಿತಿ ರಂಗ ಶಮರ್ಾ ಉಪ್ಪಂಗಳ, ನ್ಯಾಯವಾದಿ ಅನಂತ ರಾಮ್, ಎ.ಟಿ.ನಾಕ್ ಮೊದಲಾದವರು ಉಪಸ್ಥಿತರಿದ್ದರು.
   ಸರಕಾರಿ ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾಥರ್ಿನಿ ಸೌಮ್ಯಾ ಸ್ವಾಗತಿಸಿ, ಕಾತರ್ಿಕ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ  ಪ್ರಾಸ್ತಾವಿಕ ನುಡಿಗಳನ್ನಾಡಿದರು.
   ವಿದ್ಯಾಥರ್ಿಗಳ ನೇತೃತ್ವ : ಸೋಮವಾರ ನಡೆದ ಸರಣಿ ಸತ್ಯಾಗ್ರಹದ ಪೂರ್ಣ ನೇತೃತ್ವವನ್ನು ವಿದ್ಯಾಥರ್ಿಗಳೇ ವಹಿಸಿಕೊಂಡಿದ್ದರು. ಕಾಸರಗೋಡು ಸರಕಾರಿ ಕಾಲೇಜಿನ ಸ್ನೇಹರಂಗ, ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜಿನ ಗಿಳಿವಿಂಡು, ಮಾಯಿಪ್ಪಾಡಿ ಶಿಕ್ಷಕ ತರಬೇತಿ ಕೇಂದ್ರ(ಡಯಟ್), ಬಿಎಡ್ ಕಾಲೇಜುಗಳ ಕನ್ನಡ ವಿದ್ಯಾಥರ್ಿಗಳು ಒಗ್ಗೂಡಿ ಧರಣಿಗೆ ನೇತೃತ್ವ ವಹಿಸಿ ಯುವ ಬಳಗದಲ್ಲಿ ಕನ್ನಡದ ಅಭಿಮಾನ, ಸಂಸ್ಕೃತಿ ಬಗೆಗಿನ ಕಾಳಜಿಯನ್ನು ತೋರಿಸಿ ಸರಕಾರದ ದಬ್ಬಾಳಿಕೆಯನ್ನು ಪ್ರತಿಭಟಿಸಿದರು.
     ಇಂದು ಸಮಾರೋಪ : ಒಂದು ವಾರಗಳ ಧರಣಿ ಸತ್ಯಾಗ್ರಹದ ಪ್ರಥಮ ಹಂತದ ಸಮಾರೋಪ ಮೇ 29 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.
               ಮಲಯಾಳ ಕಲಿಕೆ ಕಡ್ಡಾಯ ಪ್ರತಿಭಟಿಸಿ
   ತುಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪಿ.ಎಸ್.ಪುಣಿಂಚಿತ್ತಾಯ ರಾಜೀನಾಮೆ
   ಭಾಷಾ ಅಲ್ಪಸಂಖ್ಯಾಕರ ಮೇಲೆ ಮಲಯಾಳ ಭಾಷೆ ಹೇರುವ ಕೇರಳ ಸರಕಾರದ ನೀತಿಯನ್ನು ಪ್ರತಿಭಟಿಸಿ ತುಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಅವರು ರಾಜೀನಾಮೆ ನೀಡಿದರು.
    ಕೇರಳ ಸರಕಾರ ಮಲಯಾಳ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶವನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಒಂದು ವಾರ ಕಾಲ ನಡೆಯುತ್ತಿರುವ ಸರಣಿ ಧರಣಿ ಸತ್ಯಾಗ್ರಹ ಚಪ್ಪರದಲ್ಲಿ ಸತ್ಯಾಗ್ರಹಿಗಳ ಸಮ್ಮುಖದಲ್ಲಿ ಅವರು ರಾಜೀನಾಮೆ ಘೋಷಿಸಿದರು.
   `ನನಗೆ ಅಧಿಕಾರ ಮುಖ್ಯ ಅಲ್ಲ. ಭಾಷೆ, ಸಂಸ್ಕೃತಿ ಉಳಿಯುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಮಲಯಾಳ ಕಲಿಕೆ ಕಡ್ಡಾಯ ಆದೇಶದಿಂದ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ನಾಶವಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ತುಳು ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಕನ್ನಡ ಪರ ಹೋರಾಟದಲ್ಲಿ ನಾನೂ ನಿಮ್ಮೊಂದಿಗಿದ್ದೇನೆ ಎಂದು ಸಾರಿದರು.
   ಅಧಿಕಾರಕ್ಕೆ ಅಂಟಿಕೊಳ್ಳದೆ, ಅನ್ಯಾಯವನ್ನು ಸಮಥರ್ಿಸದೆ ರಾಜೀನಾಮೆ ನೀಡುವ ಮೂಲಕ ಸ್ವತಂತ್ರನಾಗಿದ್ದೇನೆ ಎಂದರು. ಸಾಮಾನ್ಯವಾಗಿ ಅಧಿಕಾರಕ್ಕೆ ಅಂಟಿಕೊಳ್ಳುವವರೆ ಹೆಚ್ಚು. ಪಿ.ಎಸ್.ಪುಣಿಂಚಿತ್ತಾಯರು ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜೀನಾಮೆ ನೀಡಿದ್ದರಿಂದ ಕನ್ನಡಾಭಿಮಾನಿಗಳು ಅವರನ್ನು ಹೆಗಲಿಗೇರಿಸಿಕೊಂಡು ಸಂತೋಷ ವ್ಯಕ್ತಪಡಿಸಿದರು.
   ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ತುಳು ಅಕಾಡೆಮಿಯ ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದೆ. ಆದರೆ ಆ ಯೋಜನೆಗಳು ಸಾಕಾರಗೊಳಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲ. ಅನುದಾನವು ಲಭಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ತುಳು ಅಕಾಡೆಮಿ ನಾಮ್ ಕಾ ವಾಸ್ತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಕನ್ನಡಿಗರು ಮತ್ತು ತುಳುವರನ್ನು ಒಡೆದು ಆಡುವ ರಾಜಕೀಯ ನಡೆಯದು.ಅವುಗಳೆರಡೂ ಜೊತೆಜೊತೆಯಾಗಿ ಈ ಮಣ್ಣಿನೊಡನೆ ಸಮ್ಮಿಳಿತಗೊಂಡು ಬೆಳೆದು ಬಂದವುಗಳು. ಇನ್ನೂ ಅದೇ ತೆರದಲ್ಲಿ ಎರಡಾಗದೆ ಜೊತೆಯಾಗಿ ಸಾಗಲಿದೆ ಎಂದು ತಿಳಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries