HEALTH TIPS

No title

                ಬದಿಯಡ್ಕದ ವಿದ್ಯಾಪೀಠದಲ್ಲಿ ಕಾಯರ್ಾಗಾರ
    ಬದಿಯಡ್ಕ : ಗ್ರಾಮೋತ್ಥಾನ ಸೇವಾ ಕೇಂದ್ರ ಬದಿಯಡ್ಕ ಇದರ ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಧ್ಯಾಪಕ ವೃಂದಕ್ಕೆ ನೂತನ ಕಲಿಕಾ ತಂತ್ರಗಳನ್ನೊಳಗೊಂಡ ಎರಡು ದಿನಗಳ ಕಾಯರ್ಾಗಾರವನ್ನು ನಡೆಸಲಾಯಿತು.
  ಶುಕ್ರವಾರ ಹಾಗೂ ಶನಿವಾರಗಳಂದು ನಡೆಸಿದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಪ್ರಖ್ಯಾತ ತರಬೇತಿ ಕೇಂದ್ರದ ಸಂಚಾಲಕ ರಾಹುಲ್ ಮತ್ತು ತಂಡದವರು ಪಾಲ್ಗೊಂಡರು. ಬೆಂಗಳೂರಿನಲ್ಲಿ `ವ್ಹಾವ್ ರಿಯಲಿ' ಎಂಬ ತರಬೇತಿ ಸಂಸ್ಥೆಯನ್ನು ನಡೆಸುತ್ತಿರುವ ಇವರು ಕೇರಳ, ಕನರ್ಾಟಕ, ತಮಿಳುನಾಡು ಮೊದಲಾದ ರಾಜ್ಯಗಳ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಿಗೆ ತರಬೇತಿಯನ್ನು ನೀಡಿದ ಅನುಭವವನ್ನು ಬದಿಯಡ್ಕದ ಅಧ್ಯಾಪಕ ವೃಂದದ ಜೊತೆಗೆ ಹಂಚಿಕೊಂಡರು. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳನ್ನು ಪಠ್ಯ ವಿಷಯಗಳಲ್ಲಿ ಒತ್ತಡ ರಹಿತವಾಗಿ ತೊಡಗಿಸಿಕೊಳ್ಳುವ ವಿಧಾನಗಳು, ಸಾಮಾಜಿಕವಾಗಿ ಬದುಕುವ ಜೀವನ ಕಲೆ, ಕೌಶಲ್ಯವೃದ್ಧಿಯೊಂದಿಗಿನ ಆಧುನಿಕತೆಯ ಅಂಶಗಳೇ ಮೊದಲಾದವುಗಳನ್ನು ಚಟುವಟಿಕೆಗಳ ಮೂಲಕ ಮನವರಿಕೆ ಮಾಡಿಸಿಕೊಟ್ಟರು.
ಗ್ರಾಮೋತ್ಥಾನ ಸೇವಾಕೇಂದ್ರದ ಸಂಯೋಜಕ ಜೀವನ್ ಹಾಗೂ ಧನಂಜಯ್ ಮಧೂರು ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ, ಸಂಚಾಲಕ ಜಯಪ್ರಕಾಶ್ ಪಜಿಲ, ಅಧ್ಯಾಪಕ, ಅಧ್ಯಾಪಿಕೆಯರು ಶಿಬಿರದಲ್ಲಿ ಪಾಲ್ಗೊಂಡರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries