HEALTH TIPS

No title

              ವಿದ್ಯೆಯ ಮೂಲಕ ಸುಸಂಸ್ಕೃತ ಸಮಾಜ ಸೃಷ್ಟಿ
   ಕುಂಬಳೆ: ವಿದ್ಯೆಯ ಮೂಲಕ ಸುಸಂಸ್ಕೃತ ಸಮಾಜದ ಸೃಷ್ಟಿ ಸಾಧ್ಯ. ವಿಧ್ಯೆಯ ಮಹತ್ವವನ್ನರಿತು ಮಹಾದಾನಗಳಲ್ಲಿ ವಿದ್ಯಾದಾನವು ವಿಶೇಷವೆಮದು ಪರಿಗಣಿಸಲ್ಪಟ್ಟಿರುವುದು ಈ ಕಾರಣದಿಂದ ಎಂದು ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಸಂಘಟನಾ ಕಾರ್ಯದಶರ್ಿ ಭಾಸ್ಕರ ಕಾಸರಗೋಡು ಅಭಿಪ್ರಾಯಪಟ್ಟರು.
    ಬೆದ್ರಡ್ಕ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಜರಗಿದ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
    ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಪರಿಸರದಲ್ಲಿ ಶನಿವಾರ ಜರಗಿದ ಕಾರ್ಯಕ್ರಮವನ್ನು ಪುತ್ತೂರು ಕೊಲ್ಯ ಶ್ರೀ ಧೂಮಾವತಿ ದೈವಸ್ಥಾನದ ನಾರಾಯಣ ಪೂಜಾರಿ ದೀಪ ಪ್ರಜ್ವಲನಗೊಳಿಸಿದರು. ಬಿಲ್ಲವ ಮುಂದಾಳುಗಳಾದ ಶಿವ ಕೆ, ತಾರಾನಾಥ ಗಂಗೆ, ಬಂಟಪ್ಪ ಪೂಜಾರಿ, ಕೋಟಿ ಪೂಜಾರಿ ಮೊದಲಾದವರು ಶುಭಹಾರೈಸಿದರು.
    ಉಮೇಶ್ ಭಗವತಿನಗರ ಅಧ್ಯಕ್ಷತೆ ವಹಿಸಿದರು. ಚಂದ್ರಶೇಖರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಈ ಸಾಲಿನ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಶ್ರೇಣಿಯನ್ನು ಪಡೆದ ಚೈತ್ರ ಪಿ.ಜಿ. ಅವರಿಗೆ ಸ್ಮರಣಿಕೆ, ಶಾಲು ಹೊದಿಸಿ ನಗದು ನೀಡಿ ಗೌರವಿಸಲಾಯಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries