HEALTH TIPS

No title

            ಮನೆಯ  ಹಿತ್ತಿಲೇ ಜಲಾನಯನವಾಗಲಿ: ಶ್ರೀ ಪಡ್ರೆ
    ಪೆರ್ಲ: ನೀರಿನ ಲಭ್ಯತೆಯ ಕೊರತೆ ಜೀವಜಾಲದ ಅಸ್ತಿತ್ವವನ್ನು ವಿನಾಶದತ್ತ ಕೊಂಡೊಯ್ಯುವುದು. ಮನೆ ಹಿತ್ತಿಲಲ್ಲಿ ಸುರಿದು ಹೊರಹೋಗುವ  ಮಳೆ ನೀರನ್ನು ತಡೆದು ನಿಲ್ಲಿಸಿದಲ್ಲಿ ನೀರಿನ ಕೊರತೆ ಉಂಟಾಗದು. ಕಾಸರಗೋಡು, ದ.ಕ. ಜಿಲ್ಲೆಗಳಲ್ಲಿ ಅತಿ ಬಡವರ ಮನೆಗಳ ಮೇಲೂ ಅವರ ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ ಅಗತ್ಯ ಇರುವುದಕ್ಕಿಂತಲೂ ಅಧಿಕ  ಪ್ರಮಾಣದಲ್ಲಿ ನೀರು ಮಳೆಯ ರೂಪದಲ್ಲಿ ಛಾವಣಿಯ ಮೇಲೆ ಸುರಿಯುತ್ತಿದ್ದು ಆ ನೀರನ್ನು ಅವರವರ ಬಾವಿಗೆ ಮರು ಪೂರಣ ಗೊಳಿಸಿದಲ್ಲಿ  ಅಸಾಮಾನ್ಯ ಪರಿಸ್ಥಿತಿ ಹೊರತುಪಡಿಸಿದರೆ ಅದು ಬತ್ತಿಹೋಗದು.ಕೇವಲ ಎರಡು ದಿನಗಳ  ಮಾನವ ಶ್ರಮದೊಂದಿಗೆ ಸರಿಯಾದ ರೀತಿಯಲ್ಲಿ  ಯೋಜನೆ ರೂಪಿಸಿ  ನೀರಿಂಗಿಸಿದಲ್ಲಿ  ಬಾವಿಯಲ್ಲಿನ ನೀರಿನ ಪ್ರಮಾಣವನ್ನು  ಹೆಚ್ಚಿಸಲು ಸಾಧ್ಯ ಎಂದು ಖ್ಯಾತ ಜಲ,ಪರಿಸರ ತ್ರಜ್ಞ ಶ್ರೀಪಡ್ರೆ ಅವರು ತಿಳಿಸಿದರು.
   ಪಡ್ರೆ ಸ್ವರ್ಗದ ಗ್ರಾಮೀಣ ಅಭಿವೃದ್ಧಿ ಕ್ರಿಯಾ ಸಮಿತಿ "ಸುದರ್ಶನ" ದ ಸ್ತ್ರೀ ಶಕ್ತಿ ಮಹಿಳಾ ಘಟಕ ಶನಿವಾರ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ  "ಕನ್ಸವರ್್ ವಾಟರ್, ಸೇವ್ ಪ್ಲಾನೆಟ್ "(ನೀರನ್ನು ಸಂರಕ್ಷಿಸಿ, ಭೂಮಿಯನ್ನು ಉಳಿಸಿ) ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
    ಎಣ್ಮಕಜೆ, ಕುಂಬ್ಡಾಜೆ ಪಂಚಾಯಿತಿ ವ್ಯಾಪ್ತಿಯ ಕುಡಿ ನೀರು ಸಮಸ್ಯೆಯಿಂದ  ಬಳಲುತ್ತಿದ್ದ ಹಲವು ಮನೆಗಳಿಗೆ "ಜಲಯಜ್ಞ" ಯೋಜನೆಯಂತೆ ದಾನಿಗಳ ಸಹಾಯದೊಂದಿಗೆ ನೀರಿನ ಸರಬರಾಜು ನಡೆಸುತ್ತಿರುವ ಸುದರ್ಶನ ಕ್ರಿಯಾ ಸಮಿತಿಯ ಚಟುವಟಿಕೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಅರಿತ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಅವರ ನಿದರ್ೇಶನದಂತೆ ಜಲ ಸಂರಕ್ಷಣೆಗೆ ಪೂರಕವಾದ ಕ್ರಿಯಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
   ಇಂದು ಜಲಸಂರಕ್ಷಣೆಯ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದ್ದರೂ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ.ಇದರಿಂದ ವ್ಯಾಪಕ ವಿನಾಶಗಳು ಭವಿಷ್ಯದಲ್ಲಿ ಎದುರಾಗಬಹುದಾಗಿದ್ದು, ಪ್ರಜ್ಞಾವಂತಿಕೆಯ ಸಮಾಜ ಈ ಬಗ್ಗೆ ಕ್ರಿಯಾತ್ಮಕ ಚಟುವಟಿಕೆ ಕೈಗೊಳ್ಳಬೇಕು ಎಂದು ತಿಳಿಸಿದರು. 
    ಸಮಾರಂಭದ  ಅಧ್ಯಕ್ಷತೆ ವಹಿಸಿದ ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅವರು ಮಾತನಾಡಿ "ಮಳೆ ನೀರು ಭೂಮಿಯಲ್ಲಿ ಇಂಗುವಂತೆ ಮಾಡಲು ಪಂಚಾಯಿತಿ ಹಲವು ಯೋಜನೆಗಳನ್ನು ಕೈಗೊಂಡಿದ್ದು ತಾಂತ್ರಿಕ ಹಾಗೂ  ಉದ್ಯೋಗಸ್ತರ ಸಹಕಾರ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಅತ್ಯಗತ್ಯ. ಜಲ ಸಂರಕ್ಷಣೆ, ಮರು ಪೂರಣೆ ವಿಧಾನಗಳ ಬಗ್ಗೆ ಜನರಲ್ಲಿ ಮಾಹಿತಿಯ ಕೊರತೆ ಇದೆ. ಹಲವು ಜನಪರ ಯೋಜನೆಗಳನ್ನು ಕೈಗೆತ್ತಿ ಅನುಷ್ಠಾನಗೊಳಿಸುವಲ್ಲಿ ಯಶಸ್ಸನ್ನು ಪಡೆಯುವುದರ ಮೂಲಕ ಜನಮನವನ್ನು ಗೆದ್ದಿರುವ ಸುದರ್ಶನ ಕ್ರಿಯಾ ಸಮಿತಿಯು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವು ಸಂದರ್ಭ ಹಾಗೂ ಸಮಯೋಚಿತವಾಗಿದ್ದು ಪ್ರತಿಯೊಬ್ಬರೂ ಅವರವರ ಹಿತ್ತಿಲಲ್ಲಿ ಬಿದ್ದು ಹರಿದು ಹೊರ ಹೋಗುವ ಮಳೆ ನೀರನ್ನು ಇಂಗಿಸಿ ಅಥವಾ ಮರು ಪೂರಣ ಗೊಳಿಸಿದಲ್ಲಿ ದೈನಂದಿನ ಹಾಗೂ ಕೃಷಿ ಸಹಿತ ಇನ್ನಿತರ ಆವಶ್ಯಕತೆಗಳಿಗೂ ಬೇಕಾದಷ್ಟು ಪ್ರಮಾಣದ ನೀರನ್ನು ಪಡೆಯಬಹುದು ಎಂದು ತಿಳಿಸಿದರು.  ನೀರಿನ ಸಂರಕ್ಷಣೆಗೆ ಪಂಚಾಯಿತಿ ಕೈಗೊಂಡಿರುವ ಯೋಜನೆಗಳ  ಬಗ್ಗೆ ಮಾಹಿತಿ ನೀಡಿದರು.
   ಬ್ಲಾಕ್ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ ಉಪಸ್ಥಿತರಿದ್ದರು.
   ಬಳಿಕ ದೇಶದಾದ್ಯಂತ ವಿವಿಧ ಕಡೆಗಳಲ್ಲಿ ಹಲವು ವರ್ಷಗಳಿಂದ ಅನುಭವಿಸಲ್ಪಟ್ಟ  ನೀರಿನ ಅಭಾವ ಹಾಗೂ ಅದಕ್ಕೆ ಅವರು ಕಂಡು ಕೊಂಡತಹ   ಪರಿಹಾರ, ಬರಡಿದ ನೆಲದಲ್ಲಿ ಮತ್ತೆ ನದಿ ಹರಿಯುವುದರ ಮೂಲಕ ಅಭಿವೃದ್ಧಿ ಗೊಂಡ ಕೃಷಿ, ಹೈನುಗಾರಿಕೆ, ಕೇರಳ,ಕನರ್ಾಟಕದ  ಹಲವು ಕಡೆಗಳಲ್ಲಿ ನೀರಿನ ಅಭಾವವಿದ್ದ ಪ್ರದೇಶಗಳಲ್ಲಿ ಜಲ ಸಂಪನ್ಮೂಲ ಗೋಳಿಸಿದ ರೀತಿ, ಮನೆಗಳ ಮಾಡು, ತಾರಸಿಗಳ ಮೇಲಿನಿಂದ  ಹರಿದು ಹೋಗುವ ನೀರನ್ನು ಸಂರಕ್ಷಿಸಿ ಶುದ್ದೀಕರಣ ಗೊಳಿಸುವ ವಿಧಾನ, ಗುಡ್ಡ ಪ್ರದೇಶಗಳ ತುದಿಗಳಲ್ಲಿ ನೀರು ಇಂಗುವಂತೆ ಮಾಡಿ ಪ್ರಯೋಜನಕಾರಿ ಯಾದ ರೀತಿ, ರಭಸವಾಗಿ ಹರಿಯುವ ನೀರಿನ ವೇಗವನ್ನು ದಿಡ್ಡುಗಳ ನಿಮರ್ಾಣದ ಮೂಲಕ ನಿಯಂತ್ರಿಸಿ ಕಡಿಮೆ ಗೊಳಿಸಿ ಸುತ್ತುಬಳಸಿ ಹೋಗುವಂತೆ ಮಾಡುವುದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗುವಂತೆ ಮಾಡಿ ಅಂತರ್ಜಲದ ಪ್ರಮಾಣವನ್ನು  ಹೆಚ್ಚಿಸುವುದೇ ಮೊದಲಾದ ಪ್ರಕ್ಷೇಪಕ ದೀಪ(ಪ್ರೊಜೆಕ್ಟರ್)ದ ಮೂಲಕ ಚಿತ್ರ ಸಹಿತ  ಪ್ರಾತ್ಯಕ್ಷಿಕೆಗಳೊಂದಿಗೆ ಜಲ ಸಂರಕ್ಷಣೆ, ಮರು ಪೂರಣೆ ಹಾಗೂ ಪುನರ್ಬಳಕೆ ಬಗ್ಗೆ ಶ್ರೀ ಪಡ್ರೆಯವರು ಮಾಹಿತಿ ಒದಗಿಸಿದರಲ್ಲದೆ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
   ಮಳೆ ನೀರು ಇಂಗಿಸುವ ವಿಧಾನಗಳ ಕುರಿತಾಗಿ ಚಚರ್ಾಗೋಷ್ಟಿಯನ್ನು  ಹಮ್ಮಿಕೊಳ್ಳಲಾಯಿತು.ಸ್ವರ್ಗ ಶಾಲಾ ಅಧ್ಯಾಪಕರಾದ ಮಂಜುನಾಥ ಭಟ್, ಶಿಕ್ಷಕಿ ಜಯಲಕ್ಷ್ಮಿ ಕುಂಟಿಕ್ಕಾನ ಸಹಕರಿಸಿದರು.
   ಸ್ವರ್ಗ ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಕುಮಾರಿ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ನಳಿನಿ ಸೈಪಂಗಲ್ಲು ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ. ಪ್ರತಿನಿಧಿ ಶಶಿಕಲಾ ವೈ ಸ್ವಾಗತಿಸಿ, ಸುದರ್ಶನ ಸ್ತ್ರೀ ಶಕ್ತಿ ಮಹಿಳಾ ಘಟಕದ ಸಂಚಾಲಕಿ ಶ್ಯಾಮಲಾ ಆರ್ ಭಟ್ ಪತ್ತಡ್ಕ ವಂದಿಸಿದರು. ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ. ವೈ, ಸುದರ್ಶನ ಕ್ರಿಯಾ ಸಮಿತಿ ಸದಸ್ಯರು,ಮಹಿಳಾ ಘಟಕದ ಸದಸ್ಯೆಯರು, ಸ್ಥಳೀಯರು ಉಪಸ್ಥಿತರಿದ್ದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries