HEALTH TIPS

No title

               ಸಾಂಕ್ರಾಮಿಕ ರೋಗ ತಡೆ : ಸ್ವಚ್ಛತಾ ಅಭಿಯಾನ
     ಮಂಜೇಶ್ವರ: ಮಳೆಗಾಲದ ವೇಳೆ ಹೆಚ್ಚಬಹುದಾದ ಸಾಂಕ್ರಾಮಿಕ ರೋಗ ತಡೆಗೆ ಶುಚಿತ್ವ ಅಭಿಯಾನಗಳು ಪೂರಕವಾಗಿವೆ. ಸಾಮೂಹಿಕ ಸ್ವಚ್ಛತಾ ಆಂದೋಲನಗಳಿಂದ ಜನಸಾಮಾನ್ಯರಲ್ಲಿ ಪರಿಸರ ಕಾಳಜಿ ಮೂಡಿಸಿ ಉತ್ತಮ ಆರೋಗ್ಯಯುತ ಸಮಾಜವನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಸಿಪಿಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಕೆ.ಆರ್.ಜಯಾನಂದ ಹೇಳಿದರು.
    ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪೈವಳಿಕೆ ಕಳಾಯಿ ನದಿ ತಟದಲ್ಲಿ ಭಾನುವಾರ ಆರಂಭಗೊಂಡ ಶುಚೀಕರಣ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಜಿಲ್ಲೆಯ ಒಟ್ಟು ಏಳು ನದಿಗಳ ಸ್ವಚ್ಛತಾ ಕಾರ್ಯವು ಆರಂಭಗೊಂಡಿದ್ದು, ಜೂ.3 ರತನಕ ನಡೆಯಲಿದೆ.  ಜೂ.5 ರಂದು ಪಕ್ಷದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಏರ್ಪಡಲಿದೆ. ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯವ್ಯಾಪಿಯಾಗಿ  ಸ್ವಚ್ಛತಾ ಅಭಿಯಾನವು ನಡೆಯುತ್ತಿದ್ದು, ನದಿ ರಕ್ಷಣೆ ಸಹಿತ ಪ್ಲಾಸ್ಟಿಕ್ ಮುಕ್ತ ಪರಿಸರ ಪ್ರಧಾನಗುರಿಯಾಗಿದೆ ಎಂದರು.
     ಜೂ.3 ರತನಕ ನಡೆಯಲಿರುವ ಸ್ವಚ್ಛತಾ ಅಭಿಯಾನದಲ್ಲಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಕೈ  ಜೋಡಿಸಲಿದ್ದಾರೆ. ಜಿಲ್ಲೆಯ ಉತ್ತರ ಭಾಗದ ಕಳಾಯಿ, ಉಪ್ಪಳ, ಮಂಜೇಶ್ವರದ ಹೊಳೆ ಸಹಿತ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ಸ್ವಚ್ಛತೆ ಈ ಸಂದರ್ಭ ನಡೆಯಲಿದೆ.
   ಕಳಾಯಿ ಪ್ರದೇಶದಲ್ಲಿ ಆರಂಭಗೊಂಡ ಸ್ವಚ್ಛತಾ ಕಾರ್ಯದಲ್ಲಿ ಏರಿಯಾ ಕಾರ್ಯದಶರ್ಿ ಅಬ್ದುಲ್ ರಜಾಕ್ ಚಿಪ್ಪಾರು, ಬೇಬಿ ಶೆಟ್ಟಿ ಮೊದಲಾದ ನೇತಾರರು ಉಪಸ್ಥಿತರಿದ್ದರು. ಕಳಾಯಿ ಸೇತುವೆ ಬಳಿಯಿಂದ ಜೋಡುಕಲ್ಲು ತನಕ ನಡೆದ ಶುಚೀಕರಣ ಕಾರ್ಯದಲ್ಲಿ ಕೆ.ಚಂದ್ರಹಾಸ ಶೆಟ್ಟಿ, ಕೆ.ಕಮಲಾಕ್ಷ, ಕೆ.ನಾರಾಯಣ ಶೆಟ್ಟಿ, ಸದಾನಂದ ಕೋರಿಕ್ಕಾರ್, ಅರವಿಂದ, ಫಾರೂಕ್ ಶಿರಿಯಾ, ನವೀನ ಕೆ, ರವೀಂದ್ರ ಶೆಟ್ಟಿ, ಉಮೇಶ ಶೆಟ್ಟಿ, ಸಚ್ಚಿದಾನಂದ ಕಳ್ಳಿಗೆ, ಸಾದಿಕ್ ಚೆರುಗೋಳಿ, ಪುರುಷೋತ್ತಮ, ಪಿ.ಕೆ.ಅಹಮ್ಮದ್ ಹುಸೈನ್, ಶ್ಯಾಮ್ ಭಟ್ ಸಹಿತ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದರು.  ಕಾಸರಗೋಡು ಮಧುವಾಹಿನಿ ನದಿಯ ಶುಚೀಕರಣ ಕಾರ್ಯವನ್ನು ಮಾಜಿ ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿ, ಶುಚಿತ್ವ ಅಭಿಯಾನದಲ್ಲಿ ಪಾಲ್ಗೊಂಡರು. ಮುಹಮ್ಮದ್ ಹನೀಫಾ, ಸುಮತಿ, ರವೀಂದ್ರನ್, ಅಬ್ದುಲ್ರಹಿಮಾನ್ ಮೊದಲಾದವರು ಭಾಗವಹಿಸಿದರು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries