HEALTH TIPS

No title

                       ಆಧುನಿಕ ವ್ಯವಸ್ಥೆಯ ಸಮರ್ಪಕ ಬಳಕೆಯಲ್ಲಿ ಮದ್ಯದ ಪಿಡುಗು ಸವಾಲು-ಫಾ. ಪ್ರಾನ್ಸಿಸ್ ರೋಡ್ರಿಗಸ್
                          ವಕರ್ಾಡಿ ಸುಂಕದಕಟ್ಟೆಯಲ್ಲಿ ಧ.ಗ್ರಾ.ಯೋ.ಯ 1205ನೇ ಮದ್ಯವರ್ಜನ ಶಿಬಿರ ಉದ್ಘಾಟನೆ
    ಮಂಜೇಶ್ವರ: ಜಗತ್ತಿನ ಯಾವ ಮತ, ಧರ್ಮಗಳೂ ಅಧರ್ಮ, ಅನೀತಿಗಳಿಗೆ ಆಸ್ಪದ ನೀಡಿಲ್ಲ. ಎಲ್ಲಾ ಧರ್ಮಗಳ ಸಾರ ಸುಖ, ಶಾಂತಿ, ನೆಮ್ಮದಿಯ ಕುಟುಂಬ-ಸಮಾಜ ನಿಮರ್ಾಣ ಹಾಗೂ ಭಗವತ್ ಪ್ರೀತಿಯ ಮೂಲಕ ಜೀವನ ಸಾರ್ಥಕತೆಯಾಗಿದೆ ಎಂದು ವಕರ್ಾಡಿ ಸುಂಕದಕಟ್ಟೆಯ ಸೇಕ್ರೆಡ್ ಹಾಟರ್್ ಚಚರ್್ನ ಧರ್ಮಗುರು ರೇ.ಫಾ. ಪ್ರಾನ್ಸಿಸ್ ರೋಡ್ರಿಗಸ್ ಅಭಿಪ್ರಾಯ ವ್ಯಕ್ತಪಡಿಸಿ ಆಶೀರ್ವಚನಗೈದರು.
   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು, ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಸಹಿತ ವಿವಿಧ ಸಂಘಸಂಸ್ಥೆಗಳು ಮತ್ತು ಯೋಜನೆಯ ಪೈವಳಿಕೆ ವಲಯ ಸಮಿತಿಯ ಸಹಕಾರದೊಂದಿಗೆ ವಕರ್ಾಡಿ ಸುಂಕದಕಟ್ಟೆಯ ಸೇಕ್ರೆಡ್ ಹಾಟರ್್ ಚಚರ್್ ಸಭಾಂಗಣದಲ್ಲಿ ಶುಕ್ರವಾರದಿಂದ ಆರಂಭಗೊಂಡ 1205ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕುಟುಂಬ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ನಾಶಗೊಳಿಸುವ ಮದ್ಯ ಸೇವನೆ ಸಹಿತವಾದ ಪಿಡುಗುಗಳನ್ನು ನಿಯಂತ್ರಿಸುವ ಅಗತ್ಯ ತುತರ್ು ಆಗಬೇಕಿದೆ. ಮನಸ್ಸು-ಬುದ್ದಿಯ ಸ್ಥಿಮಿತವನ್ನು ತಪ್ಪಿಸಿ ವ್ಯಾಪಕ ಅಶಾಂತಿ, ನೆಮ್ಮದಿ ಹರಣಗಳ ಸಹಿತ ಆರೋಗ್ಯ ಸಂಬಂಧಿ ಸಮಸ್ಯೆಗೊಳಗಾಗಿ ಬದುಕು ಕಳೆದುಕೊಳ್ಳುವ ಯುವ ಸಮೂಹವನ್ನು ಪಾರಾಗಿಸುವ ಶ್ರೀಕ್ಷೇತ್ರದ ಮಹತ್ವಾಕಾಂಕ್ಷಿಯ ಯೋಜನೆ ಸ್ತುತ್ಯರ್ಹವಾದುದು ಎಂದು ಅವರು ಈ ಸಂದರ್ಭ ತಿಳಿಸಿದರು. ಆಧುನಿಕ ಸೌಕರ್ಯಗಳು, ವಿದ್ಯಾಭ್ಯಾಸ, ತಂತ್ರಜ್ಞಾನ ಸಹಿತ ವಿವಿಧ ಸವಲತ್ತುಗಳು ಇಂದು ನಮ್ಮಿದಿರಿದ್ದರೂ ಸಮರ್ಪಕವಾಗಿ ಬದುಕನ್ನು ರೂಪಿಸುವಲ್ಲಿ ಪಿಡುಗುಗಳು ಸವಾಲಾಗುತ್ತಿದ್ದು, ಇವುಗಳ ನಿಯಂತ್ರಣದ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಎಲ್ಲೆಗಳನ್ನು ಮೀರಿ ಪರಸ್ಪರ ಕೈಜೋಡಿಸಿ ಕಾಯರ್ಾನುಷ್ಠಾನಗೊಳಿಸಬೇಕೆಂದು ಅವರು ತಿಳಿಸಿದರು.
   ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜಿಲ್ಲೆಯಾದ್ಯಂತ ವಿವಿಧ ಸ್ತರಗಳಲ್ಲಿ ನಡೆಯುತ್ತಿರುವ ಸಮಗ್ರ ಅಭಿವೃದ್ದಿ ಪಥದ ಯೋಜನೆಗಳು ಸತ್ಪಥದ ಬದುಕಿಗೆ ಮಾರ್ಗದಶರ್ಿಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 11 ಮದ್ಯವರ್ಜನ ಶಿಬಿರವನ್ನು ಯಶಸ್ವಿಯಾಗಿ ಪೂರೈಸಲಾಗಿದ್ದು, ಸಾವಿರಕ್ಕಿಂತಲೂ ಮಿಕ್ಕಿದ ಜನರು ಮದ್ಯಮುಕ್ತರಾಗಿದ್ದಾರೆ ಎಂದು ತಿಳಿಸಿದರು.
   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು-ಕಾಸರಗೋಡು ವಿಭಾಗೀಯ ನಿದರ್ೇಶಕ ಚಂದ್ರಶೇಖರ ಕೆ., ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಮಂಜೇಶ್ವರ ಠಾಣಾಧಿಕಾರಿ ಅನೀಶ್ ವಿ.ಕೆ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ವಕರ್ಾಡಿ ಗ್ರಾಮ ಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
  ಪೈವಳಿಕೆ ಬಾಯಿಕಟ್ಟೆಯ ಶ್ರೀಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀರಾಮ ಮೂಡಿತ್ತಾಯ, ಜನಜಾಗೃತಿ ವೇದಿಕೆಯ ಪೈವಳಿಕೆ ವಲಯಾಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೀಂಜ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಫಾತಿಮಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಂಕರ ಭಂಡಾರಿ,ಯೋಜನೆಯ ಕಾಸರಗೋಡು ವಲಯ ಮೇಲ್ವಿಚಾರಕಿ ಮಧುರಾ ವಸಂತ್,  ಮಂಜೇಶ್ವರ ಬ್ಲಾ.ಪಂ.ಸದಸ್ಯ ಸದಾಶಿವ ಚೇರಾಲು,ಸಾಮಾಜಿಕ ಕಾರ್ಯಕರ್ತ ಸೀತಾರಾಮ ನಾಯ್ಕ್ ಬೋಳಂಗಳ, 1205ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಘ್, ಉಪಾಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರ್, ಯೋಗ ಶಿಕ್ಷಕ ಪ್ರಕಾಶಾನಂದ ಮೊದಲಾದವರು ಉಪಸ್ಥಿತರಿದ್ದರು.
   ಶಿಬಿರಾಧಿಕಾರಿ ಮಾಧವ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಪೈವಳಿಕೆ ವಲಯ ಮೇಲ್ವಿಚಾರಕ ವಿಶ್ವನಾಥ ಗೌಡ ಸ್ವಾಗತಿಸಿ, ಶಿಬಿರ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಕಿಶೋರ್ ವಂದಿಸಿದರು. ತಲಪಾಡಿ ವಲಯ ಮೇಲ್ವಿಚಾರಕ ಮೋಹನ್ ಕಾರ್ಯಕ್ರಮ ನಿರೂಪಿಸಿದರು. ಒಂದು ವಾರಗಳ ಕಾಲ ನಡೆಯುವ ಶಿಬಿರದಲ್ಲಿ 90 ಕ್ಕಿಂತಲೂ ಮಿಕ್ಕಿದ ಜನರು ಪಾಲ್ಗೊಂಡು ಮದ್ಯವಿಮುಕ್ತರಾಗಿ ಹೊಸ ಜೀವನಕ್ಕೆ ಕಾಲಿರಿಸಲಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries