HEALTH TIPS

No title

                      ಮುಳ್ಳೇರಿಯ ಹವ್ಯಕ ಮಂಡಲ ಸಭೆ : ಗೋಸ್ವರ್ಗ ಸಂವಾದ
    ಮುಳ್ಳೇರಿಯ: ಮುಳ್ಳೇರಿಯ ಹವ್ಯಕ ಮಂಡಲ ಮಾಸಿಕ ಸಭೆಯು ಕಾಸರಗೋಡಿನ ಹವ್ಯಕ ಸಭಾ ಭವನದಭಿತ್ತೀಚೆಗೆ ಜರಗಿತು.
     ವಲಯ ಪದಾಧಿಕಾರಿಗಳು ವರದಿ ಮಂಡನೆ ಮಾಡಿದರು. ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ವಿಶಿಷ್ಟ ಪರಿಕಲ್ಪನೆಯ ಮಹತ್ವಾಕಾಂಕ್ಷಿ ಯೋಜನೆ ಗೋಸ್ವರ್ಗ ಕುರಿತಾದ ಗೋಸ್ವರ್ಗ ಸಂವಾದ ಕಾರ್ಯಕ್ರಮವನ್ನು ಮಹಾಮಂಡಲದ ಉಲ್ಲೇಖ ಪ್ರಧಾನ ಗೋವಿಂದ ಭಟ್ ಬಳ್ಳಮೂಲೆ ಅವರು ನಡೆಸಿದರು. ಮಂಡಲ ಮಾತೃ ಪ್ರಧಾನೆ ಕುಸುಮಾ ಪೆಮರ್ುಖ ಸಾವಿರದ ಸುರಭಿ ಸುರಭಿ ಸೇವಿಕಾ ಮತ್ತು ಭಜನೆ ರಾಮಾಯಣದ ರೂಪುರೇಷೆಗಳನ್ನು ವಿವರಿಸಿದರು. ಮಂಡಲ ಗುರಿಕ್ಕಾರರಾದ ಸತ್ಯನಾರಾಯಣ ಭಟ್ ಮೊಗ್ರ ಅವರು ದಾನಮಾನ ಸಮಾವೇಶದ ಕುರಿತು ಸಮಗ್ರ ಮಾಹಿತಿಗಳನ್ನಿತ್ತರು.
   ಶ್ರೀಗುರುಗಳ ಮಾರ್ಗದರ್ಶನದಲ್ಲಿ ಮುಳ್ಳೇರಿಯದ ಕಾಲರ್ೆಯಲ್ಲಿ ನಿಮರ್ಾಣವಾಗಲಿರುವ ಶ್ರೀ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಸಮರಸ ಯೋಜನೆಯ ಬಗ್ಗೆ ಸಮಾಲೋಚಿಸಲಾಯಿತು. ಸಭೆಯಲ್ಲಿ ಕೇರಳ ರಾಜ್ಯ ಕಲೋತ್ಸವದ ಸಂಗೀತ, ಕಂಠ ಪಾಠ, ಸಮೂಹ ಗಾನ, ದೇಶಭಕ್ತಿಗೀತೆ ಇವುಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾನ್ವಿತ ವಿದ್ಯಾಥರ್ಿನಿ ಶಿವರಂಜಿನಿ, ಬೆಂಗಳೂರಿನಲ್ಲಿ ಬಿ.ಎ.ಎಂ.ಎಸ್. ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಪಣರ್ಾ ಕೋಂಗೋಟು ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.
   ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮುಂದಿನ ಸಾಂಘಿಕ ಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನಿತ್ತರು. ಉಪಾಧ್ಯಕ್ಷ ಕುಮಾರ ಪೈಸಾರಿ, ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್ ಗಬ್ಬಿಲಡ್ಕ, ಬಾಲಸುಬ್ರಹ್ಮಣ್ಯ ಪರಪ್ಪೆ, ಕೇಶವ ಪ್ರಸಾದ ಎಡಕ್ಕಾನ, ದೇವಕಿ ಪನ್ನೆ, ವೈ.ಕೆ.ಗೋವಿಂದ ಭಟ್, ಗೀತಾಲಕ್ಷ್ಮಿ ತಮ್ಮ ವಿಭಾಗದ ವರದಿಗಳನ್ನು ಮಂಡಿಸಿದರು. ರಾಮಮಂತ್ರ, ಶಾಂತಿ ಮಂತ್ರ, ಗೋಸ್ತುತಿ, ಧ್ವಜಾವರೋಹಣ, ಶಂಖನಾದಗಳೊಂದಿಗೆ ಸಭೆ ಮುಕ್ತಾಯವಾಯಿತು.
    ಕಾರ್ಯದಶರ್ಿ ಬಾಲಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಭಾ ಸಂಯೋಜನೆ ಮಾಡಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries