HEALTH TIPS

No title

           ಸನ್ನಿಧಿ ಟಿ. ರೈ ಗೆ ಆಳ್ವಾಸ್ ವಿಧ್ಯಾಥರ್ಿ ಸಿರಿ-2018 ಸಮ್ಮೇಳನಾಧ್ಯಕ್ಷತೆಯ ಕಿರೀಟ
               ಕಾಸರಗೋಡಿನ ಕನ್ನಡಕ್ಕೆ ಒಲಿದ ಗೌರವ
    ಕಾಸರಗೋಡು: ಕಾಸರಗೋಡಿನ ಕಿನ್ನರಿಯೆಂದೇ ಗುರುತಿಸಲ್ಪಡುವ ಕುಮಾರಿ ಸನ್ನಿಧಿ ಈ ಬಾರಿಯ ಆಳ್ವಾಸ್ ವಿಧ್ಯಾಥರ್ಿಸಿರಿ ಸಮ್ಮೇಳನದ ಸವರ್ಾಧ್ಯಕ್ಷತೆಗೆ ಆಯ್ಕೆಗೊಂಡಿದ್ದಾಳೆ. ಕಾಸರಗೋಡಿಗೆ ಇದು ಎರಡನೇ ಸಲದ ಗೌರವ. 2014ರಲ್ಲಿ ಪೈವಳಿಕೆಯ ಹತ್ತನೇ ತರಗತಿಯ ಶ್ರದ್ಧಾ ನಾಯರ್ಪಳ್ಳ ಆ ಸ್ಥಾನಕ್ಕೆ ಆಯ್ಕೆಯಾದರೆ ಈ ಸಲ ಕಾಸರಗೋಡು ವಿದ್ಯಾನಗರದ ಚಿನ್ಮಯಾ ವಿದ್ಯಾಲಯದ 9ನೇ ತರಗತಿ ವಿದ್ಯಾಥರ್ಿನಿ ಕುಮಾರಿ ಸನ್ನಿಧಿಗೆ ದೊರೆತಿದೆ. ಪೆರ್ಲದ ತಾರಾನಾಥ ರೈ= ರಾಜಶ್ರೀ ಟಿ. ರೈ ದಂಪತಿಗಳ ಸುಪುತ್ರಿಯಾಗಿರುವಳು.
   ಕುಮಾರಿ ಸನ್ನಿಧಿ ಕಳೆದ ಸಲ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ತನ್ನ ಮಾತು ಮತ್ತು ಕಾವ್ಯ ವಾಚನದಿಂದ ನೆರೆದ ಜನರ ಮನ ಗೆದ್ದಿದ್ದಳು. ಕಳೆದ ಸಲ ಅದೇ ವೇದಿಕೆಯಲ್ಲಿ ಈಕೆಯ ಇಂಗ್ಲೀಷ್ ಕವನ ಸಂಕಲನ `ಶೇಡ್ಸ್ ' ಬಿಡುಗಡೆ ಕಂಡಿತ್ತು. ಪುಟ್ಟ ವಯಸ್ಸಿನಲ್ಲಿಯೇ ಊರಿನ ಪರ ಊರಿನ ಹಿರಿಯರ ಮತ್ತು ಗುರು ವೃಂದದ ಆಶೀವರ್ಾದದೊಂದಿಗೆ ಕಠಿಣ ಸಾಧನೆಯ ಹಾದಿ ತುಳಿದ ಈ ಬಾಲೆ ಸಣ್ಣ ವಯಸ್ಸಿನಲ್ಲಿಯೇ ಹಲವಾರು ದಿಗ್ಗಜರ ಬಾಯಿಯಿಂದ ಹೊಗಳಿಸಿಕೊಂಡವಳು. ಭರತನಾಟ್ಯ, ಕೀಬೋಡರ್್, ವಯಲಿನ್, ಕರಾಟೆ, ಸುಗಮ-ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಅಲ್ಲದೆ ವಿಶೇಷವಾಗಿ ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲೂ ಗುರುತಿಸುವ ಹೆಜ್ಜೆಯಿರಿಸಿದವಳು. ಈಕೆಯ ಸ್ವರಚಿತ ಕವನ ಸಂಕಲನ `ಚಿಲಿಪಿಲಿ ಚಿತ್ತಾರ' ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಾಗ ಈಕೆಯ ವಯಸ್ಸು ಹತ್ತು ವರ್ಷ. ಇದೇ ವರ್ಷ ಕೇರಳ ತುಳು ಅಕಾಡಮಿ ಪ್ರಾಯೋಜಕತ್ವದಲ್ಲಿ ಬಿಡುಗಡೆಗೊಂಡ ಮಹಾನ್ ಕವಿ ಕಯ್ಯಾರರ ತುಳು ಕವಿತೆಗಳ `ಎಸಲ್' ದ್ವನಿ ಸುರುಳಿಯ ಎಲ್ಲಾ ಒಂಭತ್ತು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿ ಕಯ್ಯಾರರ ಹಾಡಿನ ಹುಡುಗಿ ಎಂಬ ಗುರುತಿಸುವಿಕೆಯನ್ನು ಆಕೆಗೆ ನೀಡಿತ್ತು. ಅತೀ ಕಿರಿಯ ವಯಸ್ಸಿನಲ್ಲಿ ಅಂದರೆ ಕೇವಲ ಐದನೇಯ ತರಗತಿಯಲ್ಲಿರುವಾಗಲೇ ಕನರ್ಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ ಶೇಕಡಾ 85 ಅಂಕಗಳೊಂದಿಗೆ ಉತ್ತೀರ್ಣಗೊಂಡಳು. ರಾಷ್ಟ್ರ, ರಾಜ್ಯ ಮಟ್ಟದ ಕರಾಟೆ ಪಂದ್ಯಗಳಲ್ಲಿ ಹಲವಾರು ಚಿನ್ನದ ಪದಕಗಳನ್ನು ಗಳಿಸಿ ಏಳನೇಯ ತರಗತಿಯಲ್ಲಿ ಕರಾಟೆ ಬ್ಲೇಕ್ ಬೆಲ್ಟ್ ಪಡೆದುಕೊಂಡಳು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭಾಶಯ ಪತ್ರದಿಂದ ಪ್ರೇರಿತಳಾಗಿ ರಚಿಸಿದ `ಕ್ಲೀನ್ ಎರಾ' ಸ್ವಚ್ಛ ಭಾರತ ಯೋಜನೆಯ ಪ್ರೊಜೆಕ್ಟ್ ಡಾ.ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು. ತೆಂಕುತಿಟ್ಟಿನ ಅತೀ ಕಿರಿಯ ಮಹಿಳಾ ಭಾಗವತೆಯಾಗಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವರಮಾಧುರ್ಯ ಮತ್ತು ಸಾಂಪ್ರಧಾಯಿಕ ಶೈಲಿಯ ಹಾಡುಗಾರಿಕೆಯಲ್ಲಿ ಗುರುತಿಸಿಕೊಂಡ ಹುಡುಗಿ. ಕನ್ನಡ, ತುಳು, ಹಿಂದಿ ಮತ್ತು ಆಂಗ್ಲಭಾಷೆಯ ಸಾಹಿತ್ಯದ ಜ್ಞಾನ ಈಕೆಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಕವಿಗೋಷ್ಠಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯುವ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ದೊರೆಯುವಂತೆ ಮಾಡಿತು.  ಇದಲ್ಲದೇ ಸರಳವಾಗಿ ಯಾವುದೇ ಕಾರ್ಯಕ್ರಮದಲ್ಲಿ ಖಾದಿದಾರಿಯಾಗಿ ಕಾಣಿಸಿಕೊಳ್ಳುವ ಈಕೆ ಚಿಂತನೆ ಮತ್ತು ನಡವಳಿಕೆಯಲ್ಲಿ ಬಹಳ ಪ್ರಬುದ್ಧತೆಯೊಂದಿಗೆ ಸಾಮಾಜಿಕ ಕಾಳಜಿಯನ್ನು ತೋರಿಸುತ್ತಾ ಹುಟ್ಟು ಹಾಕಿದ ಕಾತರ್ಿಕೇಯ ಚಾರಿಟೆಬಲ್ ಟ್ರಸ್ಟ್ ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ಮಾಡುತ್ತಿರುವ ಕೆಲಸಗಳು ಆ ಪ್ರದೇಶದ ಮಹಿಳೆ ಮತ್ತು ಮಕ್ಕಳಲ್ಲಿ ಸಾಮಾಜಿಕ, ಸಾಂಸ್ಕೃತಿಕ  ಕ್ರಾಂತಿಯನ್ನೇ ಮಾಡಿದೆ ಎಂಬುದು ಊರ ಹಿರಿಯರ ಅಚ್ಚರಿಯಿಂದ ಕೂಡಿದ ಮೆಚ್ಚುಗೆಯ ಮಾತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries