HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ದಸರಾ ಆಚರಣೆಯ ಆದೇಶವನ್ನು ನಾಲ್ಕೇ ದಿನಗಳಲ್ಲಿ ಕಾರಣ ನೀಡದೆ ಹಿಂತೆಗೆದುಕೊಂಡ ಡಿಡಿಇ
                             ಭಾಷಾ ಅಲ್ಪಸಂಖ್ಯಾಕರ ಮೇಲೆ ಭಾಷಾಂತರ ಪ್ರಹಾರ
     ಕುಂಬಳೆ: ಡಯಟ್ ಸಹಿತ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ತರಗತಿಗಳಿರುವ ಎಲ್ಲ ಶಾಲೆಗಳಲ್ಲೂ ಜ್ಞಾನದ ಹಬ್ಬ ದಸರಾವನ್ನು ಆಚರಿಸಬೇಕೆಂದು ಅ.8 ರಂದು ತಾವೇ ನೀಡಿದ ಆದೇಶವನ್ನು ನಾಲ್ಕೇ ದಿಗಳಲ್ಲಿ ಡಿಡಿಇ(ಜಿಲ್ಲಾ ಶಿಕ್ಷಣ ಉಪನಿದರ್ೇಶಕ) ಹಿಂದೆ ಪಡೆದಿದ್ದಾರೆ. ಇದರಿಂದ ಈ ವರ್ಷ ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡದ ಸಾಂಸ್ಕೃತಿಕ ಹಬ್ಬ ದಸರೆಯನ್ನು ಆಚರಿಸಲು ಸಾಧ್ಯವಾಗದ ಸ್ಥಿತಿ ನಿಮರ್ಾಣವಾಗಿದೆ. ಆದೇಶದಲ್ಲಿ ಹಿಂತೆಗೆದುಕೊಂಡುದಕ್ಕೆ ಕಾರಣವನ್ನು ನಮೂದಿಸಲಾಗಿಲ್ಲ. ಇದು ದಸರಾ ಆಚರಿಸಬೇಕೆಂದಿದ್ದ ಕನ್ನಡ ವಿದ್ಯಾಥರ್ಿಗಳನ್ನು ಆತಂಕ ಹಾಗೂ ನಿರಾಶೆಗೆ ನೂಕಿದೆ.
   ಡಿಡಿಇ ಅವರ ಆದೇಶದ ಮೇರೆಗೆ ದಸರಾ ಆಚರಿಸಲು ಹಲವಾರು ಶಾಲೆಗಳಲ್ಲಿ ಸಿದ್ಧತೆ ನಡೆದಿತ್ತು. ಆದರೆ ಈಗ ಅದನ್ನು ರದ್ದುಗೊಳಿಸಬೇಕಾಗಿ ಬಂದುದರಿಂದ ಉಂಟಾದ ಕಷ್ಟ ನಷ್ಟಗಳಿಗಿಂತಲೂ ಕನ್ನಡಿಗರಿಗೆ ಉಂಟಾಗಿರುವ ಮಾನಸಿಕ ಆಘಾತ ಹೆಚ್ಚಾಗಿದೆ. ಕನ್ನಡ ಶಾಲೆಗಳಿಗೆ ಕನ್ನಡ ಬಾರದ ಅಧ್ಯಾಪಕರ ನೇಮಕ, ಮಲಯಾಳ ಕಡ್ಡಾಯ ಮೊದಲಾದ ಸರಕಾರದ ಕ್ರಮಗಳಿಂದ ಅಭದ್ರತೆಯನ್ನು ಎದುರಿಸುತ್ತಿದ್ದ ಭಾಷಾ ಅಲ್ಪಸಂಖ್ಯಾಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದಸರೆಯನ್ನು ಯಾವ ಕಾರಣಕ್ಕಾಗಿ ರದ್ದುಗೊಳಿಸಲಾಗಿದೆ ಎಂದು ಸ್ಪಷ್ಟೀಕರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕನ್ನಡಿಗರು ತಿಳಿಸಿದ್ದಾರೆ.
    ಒಂದು ಮೂಲದ ಪ್ರಕಾರ ಈ ವರ್ಷ ಕೇರಳದಲ್ಲಿ ಪ್ರಾಕೃತಿಕ ದುರಂತ ಸಂಭವಿಸಿದ್ದರಿಂದ ಎಲ್ಲ ಸಂಭ್ರಮಾಚರಣೆಗಳನ್ನು ರದ್ದುಗೊಳಿಸಿರುವುದರ ಫಲವಾಗಿ ದಸರೆಯನ್ನು ರದ್ದುಗೊಳಿಸಲಾಗಿದೆ. ಇತ್ತೀಚೆಗೆ ಕುಂಬಳೆ ಸಮೀಪದ ಸರಕಾರಿ ಶಾಲೆಯೊಂದಕ್ಕೆ ಡಿಡಿಇ ಭೇಟಿಯಿತ್ತಾಗ ಕೇರಳದಲ್ಲಿ ಪ್ರವಾಹದಿಂದ ನಾಶನಷ್ಟಗಳಾಗಿರುವ ಈ ವರ್ಷ ಕನ್ನಡ ಶಿಕ್ಷಕರು ಹಾಗೂ ವಿದ್ಯಾಥರ್ಿಗಳು ದಸರಾ ಆಚರಿಸಲು ಸಿದ್ಧತೆ ನಡೆಸುತ್ತಿರುವುದನ್ನು ಆಕ್ಷೇಪಿಸಿ ಆಡಳಿತ ಪಕ್ಷಕ್ಕೆ ನಿಷ್ಠರಾದ ಅಧ್ಯಾಪಕ ಸಂಘಟನೆಯೊಂದಕ್ಕೆ ಸೇರಿದ ಮಲಯಾಳಿ ಶಿಕ್ಷಕರು ದೂರು ಸಲ್ಲಿಸಿದ್ದರೆನ್ನಲಾಗಿದೆ. ಆ ಕಾರಣವನ್ನು ಉಲ್ಲೇಖಿಸಿ ಈ ವರ್ಷ ದಸರಾ ಹಬ್ಬವನ್ನು ರದ್ದುಗೊಳಿಸಿದ್ದರೆ ಕನ್ನಡಿಗರ ಆಕ್ಷೇಪವಿರುತ್ತಿರಲಿಲ್ಲ. ಆದರೆ ಇನ್ನೊಂದು ಮೂಲಕ ಪ್ರಕಾರ ದಸರಾ ಹಬ್ಬವನ್ನು ಆಚರಿಸುತ್ತಿರುವುದರ ವಿರುದ್ಧ ಕೆಲವು ಭಾಷಾ ದುರಭಿಮಾನಿಗಳು ಶಿಕ್ಷಣ ಸಚಿವರಿಗೆ ದೂರು ನೀಡಿದ್ದು, ಅದರ ಫಲವಾಗಿ ದಸರಾವನ್ನು ರದ್ದುಗೊಳಿಸಲಾಗಿದೆ. ವಾಸ್ತವವಾಗಿ ದಸರಾ ಕೇವಲ ಒಂದು ಸಾಂಸ್ಕೃತಿಕ ಹಬ್ಬವಾಗಿದ್ದು ಓಣಂ ಹಬ್ಬದ ಹಾಗೆ ಎಲ್ಲ ಮತ, ಜಾತಿ, ಸಮುದಾಯದವರೂ ಆಚರಿಸಬಹುದಾದ ಹಬ್ಬವಾಗಿದೆ. ಈ ಹಬ್ಬ ಧಾಮರ್ಿಕ ಆಚರಣೆಗೆ ಸೀಮಿತವಾದ ಹಬ್ಬವಲ್ಲ. ಹಾಗಿದ್ದರೂ ತಪ್ಪು ಮಾಹಿತಿಯನ್ನು ಹರಡಿ ಕಾಸರಗೋಡಿನಲ್ಲಿ ಸುದೀರ್ಘ ಪರಂಪರೆಯಿರುವ ನವರಾತ್ರಿಯ ಸಾಂಸ್ಕೃತಿಯ ಸ್ವರೂಪವಾಗಿರುವ ದಸರೆಯನ್ನು ಕಾರಣ ನೀಡದೆ ರದ್ದುಗೊಳಿಸಿದ್ದು ಇಲ್ಲಿನ ಸ್ಥಳೀಯರ ಭಾವನೆಗಳಿಗೆ ನೋವು ತಂದಿದೆ.
2004 ರಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಭಾಷಾ ಅಲ್ಪಸಂಖ್ಯಾಕರ ಸಭೆಯಲ್ಲಿ ನಿರ್ಧರಿಸಿದಂತೆ ದಸರಾ ಆಚರಿಸಲು ಆ ವರ್ಷವೇ ಡಿಡಿಇ ಆದೇಶ ಹೊರಡಿಸಿದ್ದರು. ಆ ಆದೇಶದ ಸ್ಪಷ್ಟೀಕರಣವನ್ನು ಮಾತ್ರವೇ ಈ ವರ್ಷ ಪ್ರಕಟಿಸಲಾಗಿದೆ. ಡಿಡಿಇಯವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಾಂವಿಧಾನಿಕ ಮಾನ್ಯತೆಯಿರುವ ಜಿಲ್ಲಾ ಭಾಾಷಾ ಅಲ್ಪಸಂಖ್ಯಾಕ ಸಭೆಯಲ್ಲಿ ಕೈಗೊಂಡ ತೀಮರ್ಾನವನ್ನು ಡಿಡಿಇ ಅವರಿಗೆ ಏಕಪಕ್ಷೀಯವಾಗಿ ರದ್ದುಗೊಳಿಸಲು ಸಾಧ್ಯವಿಲ್ಲ. ಇದರ ಬಗ್ಗೆ ಸರಕಾರ ಸ್ಪಷ್ಟೀಕರಣ ನೀಡಬೇಕು ಎಂಬುದು ಕನ್ನಡ ಸಂಘಟನೆಗಳ ಒತ್ತಾಯವಾಗಿದೆ. ಓಣಂ ಆಚರಿಸಲು ಕನ್ನಡ ಅಧ್ಯಾಪಕರು ವಿದ್ಯಾಥರ್ಿಗಳು ಎಲ್ಲ ಸಹಕಾರವನ್ನು ನೀಡುತ್ತಿದ್ದರು. ಆದರೆ ದಸರಾ ಹಬ್ಬವನ್ನು ತಮ್ಮಷ್ಟಕ್ಕೆ ತಾವೇ ಆಚರಿಸಲೂ ಕನ್ನಡಿಗ ಭಾಷಾ ಅಲ್ಪಸಂಖ್ಯಾಕರಿಗೆ ಅನುಮತಿ ನೀಡದಿರುವುದು ಖಂಡನೀಯವೆಂದು ಹೆಸರನ್ನು ಬಹಿರಂಗಗೊಳಿಸಲಿಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
   ನಾಡಹಬ್ಬದ ಪರಂಪರೆ ದೊಡ್ಡದು:
   ಕಾಸರಗೋಡಿನ ದಸರಾ ನಾಡಹಬ್ಬ ಪರಂಪರೆ ವಿಸ್ಕೃತವಾದುದು. ಆದರೆ ಭಾಷಾವಾರು ಪ್ರಾಂತ್ಯ ವಿಭಜನೆ ಬಳಿಕ ಶಾಲಾ ಕಾಲೇಜುಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತಿತ್ತು. ಪೈವಳಿಕೆ, ಉಪ್ಪಳ, ಮಂಜೇಶ್ರ, ಮೀಯಪದವು, ವಕರ್ಾಡಿ, ಕುಂಬಳೆ, ಬದಿಯಡ್ಕ, ಪೆರ್ಲ, ಶೇಣಿ, ನೀಚರ್ಾಲು ಮೊದಲಾದೆಡೆ ಆಯೋಜನೆಗೊಳ್ಳುತ್ತಿದ್ದ ನಾಡಹಬ್ಬ ಉತ್ಸವ 1990ರ ಬಳಿಕ ಕೋಮು ಭಾವನೆಗಳ ಕಾರಣ ಮುಂದಿಟ್ಟು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬದಲಾಯಿತು. ಕಳೆದ ಎರಡು ದಶಕಗಳಿಂದ ನಿಧಾನವಾಗಿ ಕನ್ನಡ ಶಾಲೆಗಳಿಂದಲೂ ದಸರಾ ಮರೆಯಾಗಿ ಸಂಪೂರ್ಣ ನಾಮಾವಶೇಷದ ಹಂತದಲ್ಲಿ ಬಂದು ನಿಂತಿದೆ. 
     ಏನಂತಾರೆ ಕೇಳಿ:
   ಗಡಿನಾಡಿನ ಪಾರಂಪರಿಕ ಸಾಂಸ್ಕೃತಿಕ ಆಚರಣೆಯಾದ ದಸರಾ ನಾಡಹಬ್ಬವನದ ಆದೇಶವನ್ನು ಏಕಾಏಕಿ ಹಿಂತೆಗೆದಿರುವುದು ದುರದೃಷ್ಟಕರ. ಜೊತೆಗೆ ಶಿಕ್ಷಣ ಉಪನಿದರ್ೇಶಕರು ಹಿಂತೆಗೆದಿರುವ ಆದೇಶದಲ್ಲಿ ಯಾವುದೇ ಕಾರಣಗಳನ್ನು ನೀಡಿಲ್ಲ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕೇರಳದ ಅತಿವೃಷ್ಟಿಯ ಕಾರಣ ಮುಂದಿಟ್ಟು ಒಮ್ಮೆ ನೀಡಿದ ಆದೇಶವನ್ನು ಹಿಂತೆಗೆದಿರುವುದು ಕನ್ನಡಿಗರ ಅವಗಣನೆಯಾಗಿದೆ. ಈ ಬಗ್ಗೆ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರಶ್ನಿಸಲಾಗುವುದು.
                           ನ್ಯಾಯವಾದಿ ಮುರಳೀಧರ ಬಳ್ಳುಕುರಾಯ.
                        ಅಧ್ಯಕ್ಷರು. ಕನರ್ಾಟಕ ಸಮಿತಿ ಕಾಸರಗೋಡು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries