HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ನಗರಗಳಲ್ಲಿ ದುಡಿಯುವ ಅರ್ಧ ಸಮಯ ಕೃಷಿ ಸಾಧನೆಗೆ ಸಾಕು-ಪುದುಕೋಳಿ ಶ್ರೀಕೃಷ್ಣ ಭಟ್
    ಬದಿಯಡ್ಕ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಗಳನ್ನು ತಿಳಿಯಪಡಿಸುವ ವ್ಯವಸ್ಥೆಗಳನ್ನು ಜೋಡಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇವಾಲಯ, ಭಜನಾ ವಂದಿರಗಳನ್ನು ಕೇಂದ್ರೀಕರಿಸಿ ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳನ್ನು ಆಯೋಜಿಸುವ ಅಗತ್ಯ ಇಂದಿದೆ. ಈನ ಹಿನ್ನೆಲೆಯಲ್ಲಿ ನೈತಿಕತೆ, ಸತ್ಯಸಂಧತೆ ಮತ್ತು ಸ್ವಾವಲಂಬಿ ಬದುಕನ್ನು ಕಟ್ಟುವ ಶಕ್ತಿ ಯುವ ಮನಸ್ಸುಗಳಲ್ಲಿ ಜಾಗೃತಗೊಳ್ಳುತ್ತದೆ ಎಂದು ಪ್ರಗತಿಪರ ಕೃಷಿಕ, ಧಾಮರ್ಿಕ ಮುಂದಾಳು ಶ್ರೀಕೃಷ್ಣ ಭಟ್ ಪುದುಕೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಟಿಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಲಲಿತಾ ಪಂಚಮಿಯ ಅಂಗವಾಗಿ ಶನಿವಾರ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಮಾಹಿತಿ ತಂತ್ರಜ್ಞಾನದ ಇಂದಿನ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶಗಳ ಯುವ ಮನಸ್ಸುಗಳು ಬೃಹತ್ ನಗರಗಳಿಗೆ ವಲಸೆ ಹೋಗಿ ರಾತ್ರಿ ಹಗಲೆನ್ನದೆ ಕಂಪೆನಿಗಳಲ್ಲಿ ದುಡಿಯುತ್ತಾರೆ. ಆದರೆ ಅದರ ಅರ್ಧದಷ್ಟು ಸಮಯ ವ್ಯಯಿಸಿ ಗ್ರಾಮಗಳಲ್ಲಿ ಕೃಷಿ ಜೀವನವನ್ನು ನೆಮ್ಮದಿಯಿಂದ ನಡೆಸುವುದರ ಬಗ್ಗೆ ಆಸಕ್ತಿ ವಹಿಸದಿರುವುದು ದುದರ್ೈವ ಎಂದು ಅವರು ತಿಳಿಸಿದರು. ಕೃಷಿ, ಹೈನುಗಾರಿಕೆಯಂತಹ ವ್ಯವಸ್ಥೆಯನ್ನು ಮುನ್ನಡೆಸಲು ಅದರ ಬಗ್ಗೆ ಪ್ರೀತಿ, ವಿಶ್ವಾಸಗಳು ಅಗತ್ಯ ಇದೆ. ಕೃಷಿ ಪರಂಪರೆಯಲ್ಲಿ ಬೆಳೆದುಬಂದವರನ್ನು ಎಂದಿಗೂ ಕೃಷಿ ಪತನಗೊಳಿಸದು. ಸುಖ, ಶಾಂತಿಯಿಂದೊಡಗೂಡಿದ ತೃಪ್ತ ಕೌಟುಂಬಿಕ ಜೀವನ ನಿರ್ವಹಣೆಗೆ ಕೃಷಿಯ ಹೊರತು ಪಯರ್ಾಯ ಇಲ್ಲದಿರುವುದನ್ನು ಪ್ರತಿಯೊಬ್ಬರೂ ಗ್ರಹಿಸಬೇಕು ಎಂದು ಅವರು ತಿಳಿಸಿದರು.
   ಕಾರ್ಯಕ್ರಮದಲ್ಲಿ ಹೈನುಗಾರಿಕೆಯಲ್ಲಿ ಸಾಧಕಿಯಾಗಿ ಯಶಸ್ವೀ ಸ್ವಾವಲಂಬಿ ಮಹಿಳೆಯಾದ ಸುಜಾತಾ ಕೆ.ಎಸ್.ಅನಂತಪುರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನಾ ಭಾಷಣಗೈದು ಮಾತನಾಡಿದ ನಾರಂಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಕೋಶಾಧಿಕಾರಿ, ನಿವೃತ್ತ ಶಿಕ್ಷಕ ಸೀತಾರಾಮ ಕುಂಜತ್ತಾಯ ಅವರು, ನಮ್ಮೊಡನಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ. ಹೊಸ ತಂತ್ರಜ್ಞಾನಗಳು ನಮ್ಮನ್ನು ಸೋಮಾರಿಗಳನ್ನಾಗಿಸುತ್ತಿದ್ದು, ಕ್ರೀಯಾತ್ಮಕ ಬದುಕಿಂದ ದೂರ ಭೀತಿ ಕಂಡುಬರುತ್ತಿದೆ. ಶ್ರದ್ದೆ, ಉತ್ಸಾಹಗಳನ್ನು ಬದುಕಲ್ಲಿ ಅಳವಡಿಸಿಕೊಂಡು ನಮ್ಮ ಕರ್ತವ್ಯಗಳನ್ನು ಮುನ್ನಡೆಸುವ ಮೂಲಕ ಸಾರ್ಥಕತೆಯನ್ನು ಪಡೆಯಬೇಕು ಎಂದು ಕರೆನೀಡಿದರು. ಸುಜಾತಾ ಕೆ.ಎಸ್ ಅವರ ಹೈನುಗಾರಿಕೆ ಮಾದರಿಯಾಗಿದ್ದು, ಸ್ವಾವಲಂಬನೆಯ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
   ರಾಜ್ಯ ದೈವಸ್ವಂ ಖಾತೆಯ ಮಂಜೇಶ್ವರ ತಾಲೂಕು ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ ರಾಮನಾಥ ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ ದೇವಾಲಯಗಳ ಮೂಲಕ ಸಾಮಾಜಿಕ ಪುನಶ್ಚೇತನದ ವಿವಿಧ ಚಟುವಟಿಕೆಗಳು ಮೂಡಿಬರುವುದರಿಂದ ಶ್ರೇಯಸ್ಸು ನೆಲೆಗೊಳ್ಳುವುದು. ಸಾಮಾಜಿಕವಾಗಿ ಸಾಧನೆಗೈದು ಇತರರಿಗೆ ಮಾದರಿಯಾಗುವವರನ್ನು ಗುರುತಿಸಿ ಗೌರವಿಸುವುದು ನಾಗರಿಕ ಸಮಾಜದ ಆದ್ಯ ಕರ್ತವ್ಯ ಎಂದು ತಿಳಿಸಿದರು.
   ಬಂಬ್ರಾಣ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಶಂಕರರಾಜ್ ಶಮರ್ಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾವ್ಯಾ.ಎಸ್ ಭಟ್ ಮೊಳೆಯಾರ್ ಸನ್ಮಾನಿತರ ಪರಿಚಯ ಭಾಷಣಗೈದು ಮಾತನಾಡಿದರು. ಸುಂದರ ಕಟ್ನಡ್ಕ ಸ್ವಾಗತಿಸಿ, ಕೆ.ಎಂ. ವೆಂಕಟೇಶ್ವರ ಭಟ್ ವಂದಿಸಿದರು. ಎಚ್.ಎಂ.ಶ್ಯಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು.
   ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀದೇವರಿಗೆ ಪೂಜೆ, 10 ರಿಂದ ಸ್ಥಳೀಯ ಪುಟಾಣಿಗಳಿಗೆ ವಿವಿಧ ಸ್ಪಧರ್ೆಗಳು ನಡೆದವು. ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 7 ರಿಂದ ಭಜನಾ ಸಂಕೀರ್ತನೆ, ಬಳಿಕ ವಿಶೇಷ ದುಗರ್ಾಪೂಜೆ, ಸಾಮೂಹಿಕ ಪ್ರಾರ್ಥನೆ, ಕಾತರ್ಿಕಪೂಜೆ, ಅನ್ನದಾನಗಳು ನೆರವೇರಿದವು.


   
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries