`ನವರಾತ್ರಿ ಮತ್ತು ದಸರಾ ಹಬ್ಬ ಕನ್ನಡ ಸಂಸ್ಕೃತಿಯ ಪ್ರತೀಕ'
ಉಪ್ಪಳ: ನವರಾತ್ರಿ ಮತ್ತು ದಸರಾ ಕನ್ನಡ ನಾಡಿನ ಭಾಷೆ, ಸಾಹಿತ್ಯ, ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಡಿನಾಡ ಕಲಾಸಂಘ ಪೈವಳಿಕೆ ಪ್ರತಿವರ್ಷ ನಡೆಸುವ ಕಾರ್ಯಕ್ರಮ ಅಭಿನಂದನೀಯ. ಇಂದಿನ ಯುವ ಜನತೆಗೆ ಇದರ ಮಹತ್ವವನ್ನು ತಿಳಿಸಬೇಕಾದುದು ಅತ್ಯಗತ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಹೇಳಿದರು.
ಅವರು ಗಡಿನಾಡ ಕಲಾಸಂಘ ಪೈವಳಿಕೆ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪೈವಳಿಕೆ ನಗರ ಇದರ ಸಂಯುಕ್ತ ಆಶ್ರಯದಲ್ಲಿ ಪೈವಳಿಕೆ ನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಸರಾ ನಾಡ ಹಬ್ಬ ಮಹೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಗಡಿನಾಡ ಕಲಾಸಂಘ ಪೈವಳಿಕೆ ಇದರ ಅಧ್ಯಕ್ಷ ಕೋಚಣ್ಣ ಶೆಟ್ಟಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಗಡಿನಾಡ ಕಲಾಸಂಘದ ಪ್ರಯತ್ನವನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳಲು ಹಬ್ಬಗಳು ಅತಿ ಮಹತ್ವದ ಪಾತ್ರವಹಿಸುತ್ತವೆ ಎಂದರು.
ಗಡಿನಾಡ ಕಲಾಸಂಘದ ಗೌರವ ಸಲಹೆಗಾರರಾದ ಅಬ್ದುಲ್ಲ ಹಾಜಿ, ಗಡಿನಾಡ ಕಲಾಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಪೈವಳಿಕೆ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್, ರಾಘವ ಬಳ್ಳಾಲ್ ಉಪಸ್ಥಿತರಿದ್ದರು. ಗಡಿನಾಡ ಕಲಾಸಂಘದ ಪ್ರಧಾನ ಕಾರ್ಯದಶರ್ಿ ಶಂಕರನಾರಾಯಣ ಭಟ್ ಬೀಡುಬೈಲು ಸ್ವಾಗತಿಸಿ, ಕಾರ್ಯದಶರ್ಿ ನಯನ ಪ್ರಸಾದ್ ಎಚ್.ಟಿ. ವಂದಿಸಿದರು. ಹಿರಿಯ ಶಿಕ್ಷಕರು ಹಾಗು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜಾಧ್ಯಕ್ಷ ರವೀಂದ್ರನಾಥ್ ಕೆ.ಆರ್. ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲ ಕೆ, ಹರೀಶ್ ಕುಮಾರ್ ಬೀಡುಬೈಲು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಸುಮಾರು 13 ಶಾಲೆಗಳ ವಿದ್ಯಾಥರ್ಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.