ನಂಬಿಕೆಗಳಿಗೆ ಹೊಡೆತ ನೀಡುವ ಧೋರಣೆಗೆ ಒಗ್ಗಟ್ಟಿನ ಹೋರಾಟ ಬೇಕು-ಚೈತ್ರಾ ಕುಂದಾಪುರ
ಬದಿಯಡ್ಕ: ಕೇರಳವನ್ನು ಮತ್ತೊಮ್ಮೆ ಬಡಿದೆಬ್ಬಿಸಲು ದೇವರ ಹೆಸರಿನಲ್ಲಿ ದೇವರ ನಾಡಿನ ಜನ ಯಾವತ್ತಿಗೂ ಒಂದಾಗುತ್ತಾರೆ ಎನ್ನುವ ಸಂದೇಶವನ್ನು ಜಗತ್ತಿಗೆ ಸಾರುವಂತಹ ಪ್ರಯತ್ನ ಇಲ್ಲಿ ನಡೆಯುತ್ತಿದೆ. ರಾಜ್ಯವು ಹೊಸ ಕ್ರಾಂತಿಗೆ ಸಜ್ಜಾಗಿದೆ. ಕಮ್ಮಿನಿಷ್ಟರಿಂದಾಗಿ ಕೇರಳ ರಾಜ್ಯದ ಹಿಂದುಗಳು ಒಂದುಗೂಡುವಂತಾಗಿದೆ ಎಂದು ಯುವ ವಾಗ್ಮಿ ಚೈತ್ರ ಕುಂದಾಪುರ ಹೇಳಿದರು.
ಶಬರಿಮಲೆ ಆಚಾರ ಉಲ್ಲಂಘನೆಗೆ ಷಡ್ಯಂತ್ರ ನಡೆಸಿದ ಕೇರಳ ಸರಕಾರದ ಹಿಂದೂ ವಿರೋಧಿ ಧೋರಣೆಗೆದುರಾಗಿ ವಿಶ್ವಹಿಂದೂಪರಿಷತ್, ಭಜರಂಗದಳ, ಮಾತೃಮಂಡಳಿಗಳ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಭಗವಂತನ ಮೇಲಿನ ನಂಬಿಕೆಯನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಪಂಚ ಮಹಿಳೆಯರ ಪೀಠದಿಂದ ಸುಪ್ರೀಂಕೋಟರ್್ ತೀಪರ್ು ನೀಡಿದರೆ ನಾವು ಸ್ವಾಗತಿಸುತ್ತೇವೆ. ರಾಜ್ಯದಲ್ಲಿ ಧಾಮರ್ಿಕ ನಂಬಿಕೆಗಳಿಗೆ ಹೊಡೆತ ನೀಡುವಂತಹ ಸರಕಾರದ ಧೋರಣೆಗೆದುರಾಗಿ ಒಗ್ಗಟ್ಟಿನ ಹೋರಾಟ ಆರಂಭವಾಗಿದೆ. ಧಾಮರ್ಿಕತೆಯನ್ನು ನಂಬದ ಸರಕಾರಗಳು ನಶಿಸಿಹೋಗುತ್ತಿದ್ದು, ಕೇರಳ ರಾಜ್ಯದ ಎಡರಂಗ ಸರಕಾರದ ಅವನತಿಯ ಕಾಲ ಇದಾಗಿದೆ ಎಂದರು.
ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದ ಹಿಂದೂ ಐಕ್ಯವೇದಿಯ ನೇತಾರ ಪ್ರವೀಣ್ ಕೋಡೋತ್ ಅವರು 33 ಕೋಟಿ ದೇವತೆಗಳನ್ನು ಪೂಜಿಸುವ ಹಿಂದೂ ಸಮಾಜವು ಕಲಿಯುಗವರದನಾಗಿ ಅಯ್ಯಪ್ಪ ಸ್ವಾಮಿಯನ್ನು ಆರಾಧಿಸುತ್ತಿದ್ದೇವೆ. ಅಯ್ಯಪ್ಪ ಸ್ವಾಮಿಯ ಆಚಾರ ಅನುಷ್ಠಾನಗಳ ಸಂರಕ್ಷಣೆಗಿರುವ ಹೋರಾಟದಲ್ಲಿ ಆಬಾಲವೃದ್ಧ ಜನರು ಜಾತಿ ಮತ ರಾಜಕೀಯವನ್ನು ಮರೆತು ಒಂದುಗೂಡುತ್ತಿದ್ದಾರೆ. ಮಾತೆಯರಿಗೆ ಶ್ರೇಷ್ಠವಾದ ಸ್ಥಾನವನ್ನು ನೀಡಿದ ಹಿಂದೂಧರ್ಮದಲ್ಲಿರುವ ಯಾವ ಆಚಾರವೇ ಇರಲಿ ಅದಕ್ಕೊಂದು ಸಮರ್ಪಕವಾದ ಹಿನ್ನೆಲೆಯಿದೆ. ಶಬರಿಮಲೆಯಲ್ಲಿ ಅಯ್ಯಪ್ಪನು ಬ್ರಹ್ಮಚಾರಿಯಾಗಿ ನಮಗೆಲ್ಲ ದಾರಿದೀಪವಾಗಿದ್ದಾನೆ. ರಾಜ್ಯ ಸರಕಾರದ ಕೆಟ್ಟ ನಿರ್ಣಯಗಳಿಗೆದುರಾಗಿ ಇಡೀ ಹಿಂದೂ ಸಮಾಜವು ಬೃಹತ್ ಅಲೆಯಾಗಿ ಕೇರಳದ ಕೆಂಪು ಬಣ್ಣವನ್ನು ಕೇಸರಿಬಣ್ಣದತ್ತ ತಿರುಗಿಸಿದೆ. ಶಬರಿಮಲೆಯ ಸಾನ್ನಿಧ್ಯ ರಕ್ಷಣೆಗಾಗಿ ಅಯ್ಯಪ್ಪ ಭಕ್ತರು ಟೊಂಕಕಟ್ಟಿ ನಿಂತಿದ್ದಾರೆ. ಹಿಂದುಗಳ ನಂಬಿಕೆ, ಆಚಾರಗಳ ತೀಮರ್ಾನಕ್ಕೆ ಸರಕಾರ ಅಥವಾ ಕಾನೂನು ಬೇಕಾಗಿಲ್ಲ ಎಂದು ತಿಳಿಸಿದರು.
ವಿಹಿಂಪ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ಧರ್ಮದ ಮೇಲೆ ಆಕ್ರಮಣವನ್ನು ನಡೆಸಿ ಕಾನೂನಿನ ಕುಣಿಕೆಯ ಮೂಲಕ ಧರ್ಮವನ್ನು ಕಟ್ಟಿಹಾಕುವ ಪ್ರಯತ್ನ ಕೇರಳ ರಾಜ್ಯದಲ್ಲಿ ನಡೆಯುತ್ತಿದೆ. ಹಿಂದೂಧರ್ಮದ ಭಾವನೆಗಳ ಮೇಲೆ, ನಂಬಿಕೆಗಳಿಗೆ ಘಾಸಿ ಮಾಡುವ ಮೂಲಕ ಜಗತ್ತಿನ ಏಕೈಕ ಹಿಂದೂ ರಾಷ್ಟ್ರವನ್ನು ಇಲ್ಲವಾಗಿಸುವ ಷಡ್ಯಂತ್ರದ ಫಲವಾಗಿದೆ ಶಬರಿಮಲೆ ವಿಚಾರ. ಮೂಲನಂಬಿಕೆಯ ಆಧಾರದಲ್ಲಿ ಸನಾತನ ಹಿಂದೂ ಧರ್ಮವು ನೆಲೆನಿಂತಿದೆ. ಮೂಲನಂಬಿಕೆಯು ಎಷ್ಟು ಸತ್ಯ ಎಂಬುದಾಗಿ ವೈಜ್ಞಾನಿಕವಾಗಿ ಸಾಬೀತಾಗಿದೆ. ಶಬರಿಮಲೆ ವಿಚಾರದಲ್ಲಿ ಲಕ್ಷಾಂತರ ಜನ ಅಯ್ಯಪ್ಪನ ಭಕ್ತರು ಒಟ್ಟಾಗಿ ಜಾಗೃತರಾಗಿದ್ದಾರೆ ಎಂಬುದು ದೇಶದಾದ್ಯಂತ ನಡೆಯುವ ಪ್ರತಿಭಟನೆಗಳಿಂದ ಕಂಡು ಬರುತ್ತದೆ. ಅಯ್ಯಪ್ಪ ಭಕ್ತರ ಭಾವನೆಗಳಿಗೆ ಗೌರವವನ್ನು ನೀಡಿ ಕೇರಳ ರಾಜ್ಯ ಸರಕಾರವು ಸುಪ್ರೀಂಕೋಟರ್್ಗೆ ಪುನಃಪರಿಶೀಲನಾ ಅಜರ್ಿಯನ್ನು ಸಲ್ಲಿಸಲು ಮುಂದಾಗಬೇಕು ಎಂದರು.
ಭಾಸ್ಕರ ಗುರುಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ರವೀಶ ತಂತ್ರಿ ಕುಂಟಾರು ಮಾತನಾಡಿದರು. ಸಂದೇಶ್ ಬದಿಯಡ್ಕ ಸುಶ್ರಾವ್ಯವಾಗಿ ದೇಶಭಕ್ತಿಗೀತೆಯನ್ನು ಹಾಡಿದರು. ಹರೀಶ್ ನಾರಂಪಾಡಿ ನಿರೂಪಣೆಗೈದರು. ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಉಷಾ ವಳಮಲೆ ವಂದಿಸಿದರು.
ಸಾರ್ವಜನಿಕ ಸಭೆಯ ಆರಂಭಕ್ಕೂ ಮೊದಲು ಬದಿಯಡ್ಕ ಬೋಳುಕಟ್ಟೆಯಿಂದ ಆರಂಭವಾದ ಬೃಹತ್ ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತಾದಿಗಳು ಜೊತೆಗೂಡಿದ್ದರು. ಮೆರವಣಿಗೆಯುದ್ಧಕ್ಕೂ ಅಯ್ಯಪ್ಪ ನಾಮಸ್ಮರಣೆ ಮುಗಿಲುಮುಟ್ಟಿತ್ತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.