ಮಕ್ಕಳು ಎಳೆಯ ವಯಸ್ಸಿನಲ್ಲೇ ಉಳಿತಾಯ ಮಾಡುವುದನ್ನು ಅಭ್ಯಸಿಸಬೇಕು- ಮೈತ್ರೇಯೀ ರಾಜ್ ನಾರಂಪಾಡಿ
ಬದಿಯಡ್ಕ: ಮಕ್ಕಳು ಎಳೆಯ ವಯಸ್ಸಿನಲ್ಲೇ ಉಳಿತಾಯ ಮಾಡುವುದನ್ನು ಅಭ್ಯಸಿಸಬೇಕು. ಇದು ಬೆಳೆಯುವ ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಕಾರಿ ಎಂದು ಮೈತ್ರೇಯೀ ರಾಜ್ ನಾರಂಪಾಡಿ ಇವರು ಅಭಿಪ್ರಾಯಪಟ್ಟರು.
ವಿಶ್ವ ಅಂಚೆ ದಿನ 2018ರ ಅಂಗವಾಗಿ ಮಂಗಳವಾರ ಮವ್ವಾರು ಅಂಚೆ ಕಛೇರಿಯಲ್ಲಿ ಆಯೋಜಿಸಿದ ಅಂಚೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಚೆ ಇಲಾಖೆಯು ಈ ದೇಶದ ಅತಿ ದೊಡ್ಡ ಸಂಪರ್ಕ ಜಾಲವಾಗಿದ್ದು ಈ ಇಲಾಖೆಯ ಪ್ರತಿಯೊಂದು ಉಳಿತಾಯ ಯೋಜನೆಯೂ ಆಕರ್ಷಕವಾಗಿ ಜನೋಪಯೋಗಿ ಎಂದು ಅವರು ಹೇಳಿದರು. ಕೇಂದ್ರ ಸರಕಾರದ ವಿನೂತನ ಕ್ರಮಗಳಿಂದಾಗಿ ಅಂಚೆ ಕಛೇರಿಗಳು ಪ್ರಕೃತ ಜನಪರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು.
ಡಾ. ಕೇಶವ ಮವ್ವಾರು ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಕೋಡೋತ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮರಿಕ್ಕಾನ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಜೀವನದ ಮೌಲ್ಯಗಳ ಬಗ್ಗೆ ತಿಳಿ ಹೇಳಿದರು. ಅಂಚೆ ಇಲಾಖೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಕೈಗೊಂಡ ಮಾಯಿಲ ನಾಯ್ಕ್ ಇವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ನಿವೃತ್ತ ಅಧ್ಯಾಪಕ ಪುಂಡರೀಕಾಕ್ಷ ಕೆದಿಲಾಯ ಬೆಳಿಂಜೆ, ಅಧ್ಯಾಪಿಕೆಯರಾದ ವಾಣಿಶ್ರೀ ಕುರುಮುಜ್ಜಿ, ಉಷಾ ಟೀಚರ್ ಮಾಯಿಪ್ಪಾಡಿ ಉಪಸ್ಥಿತರಿದ್ದರು. ಮವ್ವಾರು ಅಂಚೆ ಕಛೇರಿಯ ಉದ್ಯೋಗಿ ಶೋಭನ ಮಲ್ಲಮೂಲೆ ಪ್ರಾಥರ್ಿಸಿದರು. ಕೆ.ವಿ. ರಮೇಶ್ ಶರ್ಮ ಕುರುಮುಜ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಾವತಿ ಬಲೆಕ್ಕಳ ವಂದಿಸಿದರು. ಶಂಕರ ರೈ ಮವ್ವಾರು, ಸಂಜೀವ ರೈ ಕೋಳಿಕ್ಕಜೆ, ಲಲಿತ ಮಲ್ಲಮೂಲೆ, ಚಂದ್ರಶೇಖರ ಕಾನಕ್ಕೋಡು, ಸುಬ್ರಹ್ಮಣ್ಯ ಮಾನ್ಯ ಮೊದಲಾದವರು ಸಭೆಯಲ್ಲಿ ಭಾಗವಹಿಸಿ ಸಹಕರಿಸಿದರು.