ವಿದ್ಯಾಗಿರಿ ಶಾಲೆಯಲ್ಲಿ ಕೊಯ್ಲು ಉತ್ಸವ
ಬದಿಯಡ್ಕ: ಶಾಲಾ ಅಭಿವೃದ್ಧಿ ಯೋಜನೆಯಂತೆ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜ್ಯಾರಿಗೊಳಿಸಲಾಗುತ್ತಿದ್ದು ವಿದ್ಯಾಗಿರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಕಾರಿ ತೋಟದ ನಿಮರ್ಾಣದ ಯೋಜನೆಯನ್ನು ಕೈಗೆತ್ತಿಕೊಂಡು ಯಶಸ್ಸು ಸಾಧಿಸಿದ್ದು ತರಕಾರಿ ತೋಟವು ಫಲ ನೀಡಿ ಕಂಗೊಳಿಸುತ್ತಿದೆ.
ಶಾಲೆಗಳಲ್ಲಿ ತರಕಾರಿ ಕೃಷಿಯಿಂದ ಪರಿಸರ ಹಸಿರುಮಯ ಆಗುವುದರ ಜೊತೆಗೆ ಮಕ್ಕಳಲ್ಲಿ ಕೃಷಿ ಆಸಕ್ತಿಯು ಬೆಳೆಯುವುದು ಎಂದು ವಿದ್ಯಾಗಿರಿ ಶಾಲೆಯ ಮಾತೃ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಹೇಳಿದರು. ಅವರು ಶಾಲೆ ತರಕಾರಿ ತೋಟದ ಕೊಯ್ಲು ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಶಿಕ್ಷಕಿ ಲಲಿತಾಂಬಿಕಾ ಉಪಸ್ಥಿತರಿದ್ದರು. ಇಕೋ ಕ್ಲಬ್ ಸಂಚಾಲಕ ಕರುಣಾಕರ ಪೂಜಾರಿ ಅವರ ನೇತೃತ್ವದಲ್ಲಿ ಶಾಲೆಯಲ್ಲಿ ಅಲಸಂಡೆ, ಸೌತೆ, ಮುಳ್ಳು ಸೌತೆ, ಮೆಣಸು, ಬದನೆ, ಕ್ಯಾಬೇಜ್, ಕ್ಯಾಲಿಫ್ಲವರ್ ಮೊದಲಾದ ತರಕಾರಿಗಳನ್ನು ಭೆಳೆಸಲಾಗುತ್ತಿದೆ.