ಮುಜುಂಗಾವಿನಲ್ಲಿ ಮಿನಿ ಕ್ಯಾಂಪೂರಿ, ಕಾರ್ಯಕಾರೀ ಸಮಿತಿ ರೂಪೀಕರಣ
ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನ.9, 10,11 ಹಾಗೂ 12ರಂದು ನಡೆಯಲಿರುವ ನಾಲ್ಕು ದಿನಗಳ ಸ್ಕೌಟ್ ಹಾಗೂ ಗೈಡ್ಗಳ ಮಿನಿ ಕ್ಯಾಂಪೂರಿಯಾ ನಡೆಯಲಿದ್ದು, ಇದರ ಯಶಸ್ವಿಗಾಗಿ ಇತ್ತೀಚೆಗೆ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು. ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಎಸ್.ಎನ್.ರಾವ್ ಮನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಬಾಲಕೃಷ್ಣ ಶರ್ಮ, ಪುತ್ತಿಗೆ ಗ್ರಾಮ ಪಂ.ಸದಸ್ಯ ಇ.ಕೆ.ಮಹಮ್ಮದ್, ಜಯಂತಿ ಪಾಟಾಳಿ ಉಪಸ್ಥಿತರಿದ್ದರು. ಕುಂಬಳೆ ಗ್ರಾ.ಪಂ.ಸದಸ್ಯ ಮುರಲೀಧರ ಯಾದವ್, ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್ , ಜಿಲ್ಲಾ ಸ್ಕೌಟ್ ನಿಯೋಜಕ ಗುರುಮೂತರ್ಿ ನಾಯ್ಕಾಪು, ಶಾಲಾ ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಶಿವಕುಮಾರಿ, ವಿಜಯಾ ಸುಬ್ರಹ್ಮಣ್ಯ, ಪ್ರತೀಕ್ಷಾ, ಪಾರ್ವತಿ ಪೆರಡಾನ, ಲಲಿತಾ ಮಯ್ಯ, ಹರಿಣಿ ನಾಯಕ್, ಕಾವೇರಿ, ರೂಪಶ್ರೀ ಕೋಡಿಮೂಲೆ ಮತ್ತಿತರರು ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನಿತ್ತರು.
ಶಾಲಾ ಆಡಳಿತಾಧಿಕಾರಿ ಶ್ಯಾಂ ಭಟ್ ಧಬರ್ೆಮಾರ್ಗ ಸ್ವಾಗತಿಸಿ, ಶಾಲಾ ಅಧ್ಯಾಪಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಲಾಂಛನ ಆಹ್ವಾನ:
ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾಸರಗೋಡು ಜಿಲ್ಲಾ ಸಂಸ್ಥೆಯ ಆಶ್ರಯದಲ್ಲಿ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ಸ್ಕೌಟ್ ಗೈಡು ಮಿನಿ ಕ್ಯಾಂಪೂರಿಗಾಗಿ ಲಾಂಛನ ಆಹ್ವಾನಿಸಲಾಗಿದೆ. ಆಯ್ಕೆಯಾಗುವ ಉತ್ತಮ ಲಾಂಛನಕ್ಕೆ ಮಿನಿ ಕ್ಯಾಂಪೂರಿ ವೇದಿಕೆಯಲ್ಲಿ ಬಹುಮಾನ ನೀಡಲಾಗುವುದು. ಆಸಕ್ತ ಕಲಾವಿದರು ಅ.17ರ ಮುಂಚಿತವಾಗಿ ಮೊ.ಸಂಖ್ಯೆ 9846588952 ಸಂಪಕರ್ಿಸುವಂತೆ ಪ್ರಕಟಣೆ ತಿಳಿಸಿದೆ.