HEALTH TIPS

No title

                     ಸರಕಾರ ಧರ್ಮಪತನಕ್ಕೆ ಯತ್ನಿಸುವುದು ಭೂಷಣವಲ್ಲ-ಶ್ರೀರಾಮಚಂದ್ರ ಸ್ವಾಮೀಜಿ
         ಮಂಜೇಶ್ವರ: ಸತ್ಯ ಪ್ರಮಾಣ ಮಾಡಿ ಅಧಿಕಾರದಲ್ಲಿರುವ ಕೇರಳದ ಮುಖ್ಯಮಂತ್ರಿ ಆ ಸ್ಥಾನಕ್ಕೆ ಅವಮಾನ. ನಾಸ್ತಿಕರಾದರು ರಾಜ್ಯದಲ್ಲಿ ಇರುವ ಅಸ್ತಿಕ ಬಂಧುಗಳ ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ. ಅಯ್ಯಪ್ಪ ಭಕ್ತರನ್ನು ಪೋಲಿಸ್ ಬಲ ಉಪಯೋಗಿಸಿ ಬಂಧಿಸಿದರೆ ಅಯ್ಯಪ್ಪ ಒಂದು ದಿನ ಮುಖ್ಯಮಂತ್ರಿಗಳನ್ನೇ ಜೈಲಿಗೆ ಅಟ್ಟಲಿದ್ದಾನೆ ಎಂದು ಉತ್ತರ ಕಾಶಿಯ ಶ್ರೀ ರಾಮಚಂದ್ರ ಸ್ವಾಮೀಜಿ ಹೇಳಿದರು.
  ಕೇರಳ ಸರಕಾರದ ಧರ್ಮವಿರೋಧಿ ನೀತಿ ಖಂಡಿಸಿ ಹಾಗು ಅಯ್ಯಪ್ಪ ಭಕ್ತರ ಮೇಲೆ  ಪೋಲಿಸ್ ದೌರ್ಜನ್ಯಕ್ಕೆ ವಿರೋಧವಾಗಿ
ಭಾನುವಾರ ಉದ್ಯಾವರ ಶ್ರೀಶಾಸ್ತಾವೇಶ್ವರ ದೇವಸ್ಥಾನದಿಂದ ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರಕ್ಕೆ ನಡೆಸಲಾದ ಶ್ರೀ ಅಯ್ಯಪ್ಪನಾಮ ಜಪ ಯಾತ್ರೆಯ ಸಮಾರೋಪದ ಹೊಸಂಗಡಿಯಲ್ಲಿ ನಡೆದ ಸಭೆಯಲ್ಲಿ ಶ್ರೀಗಳು ಮಾತನಾಡಿದರು.
  ಆಳುವ ಸರಕಾರಗಳೇ ಜನರಲ್ಲಿ ಗೊಂದಲ ಹುಟ್ಟಿಸಲು ಯತ್ನಿಸುವುದು, ಜನಾಕ್ರೋಶಕ್ಕೆ ಕಾರಣವಾಗುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗಿದೆ. ಪರಂಪರೆ, ಸಂಸ್ಕೃತಿಯ ಉಳಿಯುವಿಕೆಗೆ ಪ್ರಯತ್ನಿಸಬೇಕಾದ ಸರಕಾರ ಧರ್ಮಪತನಕ್ಕೆ ಯತ್ನಿಸುವುದು ಸರಿಯಲ್ಲ. ರಾಜ್ಯ ಸರಕಾರ ಪರಾಮಶರ್ೆ ನಡೆಸುವ ಮೂಲಕ ಪ್ರಮಾದಗಳಿಗೆ ಎಡೆಮಾಡಿಕೊಡಬಾರದೆಂದು ಅವರು ಕರೆನೀಡಿದರು. 
   ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯದಶರ್ಿ  ಶಿಬಿನ್ ತ್ರಿಕ್ಕರಿಪುರ ಮಾತನಾಡಿ ಕೇರಳ ಪೊಲೀಸ್ ಇಂದು ಎಡರಂಗದ ಅಪ್ಪಣೆಯಂತೆ ಕಾರ್ಯ ನಿರ್ವಹಣೆ ಮಾಡಿದರೆ ಹಿಂದೂ ಸಮಾಜ ಪೊಲೀಸ್ ಇಲಾಖೆಗೆ ತಕ್ಕ ಉತ್ತರ ನೀಡಲು ಸಿದ್ಧವಿದೆ, ಧರ್ಮ ಸಂರಕ್ಷಣೆ ಪ್ರತಿಯೊಬ್ಬ ಹಿಂದೂವಿನ ಕತ್ರ್ಯವ ಎಂದರು.
    ಶಂಭು ನಂಬೂದಿರಿ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಶೈಲೇಶ್ ಅಂಜರೆ, ಭರತ್ ಕನಿಲ, ಸುರೇಶ್ ಪರಂಕಿಲ, ಹರಿಶ್ಚಂದ್ರ ಎಂ, ಪದ್ಮನಾಭ ಕಡಪ್ಪರ, ಆದರ್ಶ ಬಿಎಂ, ಸಂಕಪ್ಪ, ಸಂಜೀವ ಶೆಟ್ಟಿ, ನ್ಯಾಯವಾದಿ.ನವೀನರಾಜ್ ಕೆ.ಜೆ ಮೆರವಣಿಗೆ ನೇತೃತ್ವ ವಹಿಸಿದ್ದರು. ಕಿಶನ್ ಸ್ವಾಗತಿಸಿ, ಹರೀಶ್ ಶೆಟ್ಟಿ ಮಾಡ ವಂದಿಸಿದರು.


    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries