HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                               ಗಡಿನಾಡಿನ ಕನ್ನಡ ಕೈಂಕರ್ಯಕ್ಕೆ ಆಸಕ್ತಿ, ಪ್ರೋತ್ಸಾಹ ಕಾರಣ-ಕಲ್ಕೂರ
       ಉಪ್ಪಳ: ಸೂಕ್ತ ಪ್ರೋತ್ಸಾಹ ನೀಡಿ ಮಕ್ಕಳನ್ನು ಮುನ್ನಡೆಸುವ ಕನ್ನಡ ಸಂಘಟನೆಯ ಕಾರ್ಯ ಶ್ಲಾನೀಯ. ಸಾಧನೆಗಳನ್ನು ಗುರುತಿಸಿ ಬೆನ್ನು ತಟ್ಟುವ ಕೈಗಳಿಂದ ಬೆಳವಣಿಗೆಗೆ ಪೂರಕವಾಗುತ್ತದೆ. ಕಾಸರಗೋಡು ಕನ್ನಡಿಗರು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ  ತೋರುವ ಆಸಕ್ತಿ ಹಾಗೂ ಪ್ರೋತ್ಸಾಹಕ್ಕೆ ಇಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳೇ ಸಾಕ್ಷಿ  ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ ಕಲ್ಕೂರ ಅಭಿಪ್ರಾಯಪಟ್ಟರು.
   ಅವರು ಸರಕಾರಿ ಫ್ರೌಢ ಶಾಲೆ ಪೈವಳಿಕೆ ಕಾಯರ್ಕಟ್ಟೆ ಯಲ್ಲಿ ಸೋಮವಾರ ಜರುಗಿದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಸಾಹಿತ್ಯ ಸಾಂಸ್ಕೃತಿಕ ಪಯಣ-8 ಉದ್ಘಾಟಿಸಿ, ಜೊತೆಗೆ ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಿಸಿ ಮಾತನಾಡಿದರು.
   ಗಡಿನಾಡಿನ ಶಾಲೆಗಳಲ್ಲಿ  ಮಕ್ಕಳು ಅನುಭವಿಸುತ್ತಿರುವ ಭಾಷಾ ಸಮಸ್ಯೆಗೆ ಜಾತಿ ಮತ ಮರೆತು ಜನರು ಒಗ್ಗಟ್ಟಾಗಬೇಕು. ನಾನು ನೀನೆಂಬ ಸ್ವಾರ್ಥ ಮರೆತಾಗ ಸಮಸ್ಯೆ ಸುಲಭದಲ್ಲಿ  ಪರಿಹಾರವಾಗುತ್ತದೆ ಎಂದು ಹೇಳಿದರು.
   ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ  ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಯೊಂದು ಹೃದಯದ ಮಿಡಿತಗಳನ್ನು  ಮುಂದಿನ ಪೀಳಿಗೆಗೆ ವಗರ್ಾಯಿಸಬಲ್ಲದು ಎಂಬುದರಲ್ಲಿ  ಯಾವುದೇ ಸಂಶಯವಿಲ್ಲ. ಕನ್ನಡವು ಸಂಸ್ಕೃತದಂತಹ ಪ್ರಾಚೀನ ಭಾಷೆಗಳಿಂದ ಸಭ್ಯತೆ ಮತ್ತು ಸಂಸ್ಕಾರಯುತ ವಿಚಾರಗಳನ್ನು ಬಳಸಿ ಶ್ರೀಮಂತ ಸಾಂಸ್ಕೃತಿಕತೆಯೊಂದಿಗೆ ಜಗತ್ತಿನಾದ್ಯಂತ ಮಾನಗೊಂಡಿದೆ. ಕನ್ನಡದ ಜಾನಪದ, ಸಾಂಸ್ಕೃತಿ ಹಾಗೂ ಸಾಹಿತ್ತಿಕ ಗಟ್ಟಿತನವನ್ನು ಕಾಯ್ದುಕೊಳ್ಳುವ ಹೊಣೆ ನವ ಪೀಳಿಗೆಗೆ ಇದೆ ಎಂದು ತಿಳಿಸಿದರು.
   ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ  ಫಾತಿಮಾ ಸುಹರ, ಕವಿ-ಕತೆಗಾರ ಅಪ್ಪಯ್ಯ ಯಾದವ್,  ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಅಜಿತ್ ಎಂ.ಸಿ ಲಾಲ್ಬಾಗ್, ಪುರುಷೋತ್ತಮ, ಝಡ್.ಎ. ಕಯ್ಯಾರ್, ಮಾಪಿಳ್ಳ ಪಾಟು ಕಲಾವಿದ ಅಸೀಸ್ ಕಳಾಯಿ, ಶಾಲಾ ಪ್ರಾಂಶುಪಾಲ ಕುಂಞಿಕೃಷ್ಣನ್ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ  ವಿವಿಧ ರಂಗಗಳಲ್ಲಿ  ಸಾಧನೆಗೈದ ಸಾಧಕರಾದ ನಿವೃತ್ತ ಬಿಡಿಓ ಅಬ್ದುಲ್ಲ ಕೆ, ರಾಜೇಶ್ ಬಾಯಾರು ಹಾಗೂ ಬಾಲ ಪ್ರತಿಭೆಗಳಾದ ತೇಜಸ್ವಿನಿ ಕಡೆಂಕೋಡಿ, ಮೇಧಾ ನಾಯರ್ಪಳ್ಳ, ಯಕ್ಷ ಪ್ರತಿಭೆ ಶ್ರೀಗಿರಿ ಅನಂತಪುರ ಮುಂತಾದವರನ್ನು  ಅಭಿನಂದಿಸಲಾಯಿತು. ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಸಂಧ್ಯಾಗೀತಾ ಬಾಯಾರು, ನಿತಿನ್, ಜನಪದ ಗಾಯಕ ವಸಂತ ಬಾರಡ್ಕ  ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ  ಅಕಾಡೆಮಿಯ ಪ್ರಧಾನ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಮಣ ನಾಯಕ್ ವಂದಿಸಿದರು. ವಿದ್ಯಾ ಗಣೇಶ್ ಅಣಂಗೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿವಿಧ ನೃತ್ಯಗಳು, ಜನಪದ ಹಾಡುಗಳು, ಕನ್ನಡ ಹಾಡುಗಳು ಜನಮನ ರಂಜಿಸಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries