HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಯಕ್ಷಗಾನ ನವಾಹಕ್ಕೆ ವಿದ್ಯುಕ್ತ ಚಾಲನೆ
   ಮಂಜೇಶ್ವರ: ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಸಂಘಸಂಸ್ಥೆಗಳ ಗಣನೀಯ ಕೊಡುಗೆಗಳು ಸ್ತುತ್ಯರ್ಹವಾದುದು. ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಒಗ್ಗೂಡಿಸಿ ಸಾಂಸ್ಕೃತಿಕತೆಯ ಏಕಛತ್ರದಡಿ ಬೆಳೆದುಬಂದ ಕರಾವಳಿಯ ಹಿರಿಯ ತಲೆಮಾರಿನ ಸಾಧನೆಯ ಫಲವಾಗಿ ಇಮದು ಯಕ್ಷಗಾನ ಜಗದಗಲ ಹಬ್ಬಲು ಕಾರಣವಾಗಿದೆ ಎಂದು ಯಕ್ಷ ಬಳಗ ಹೊಸಂಗಡಿಯ ಸಂಚಾಲಕ, ಸಂಘಟಕ ಸಂಕಬೈಲು ಸತೀಶ ಅಡಪ ಅಭಿಪ್ರಾಯ ವ್ಯಕ್ತಪಡಿಸಿದರು.
   ಕೋಳ್ಯೂರಿನ ಶ್ರೀಮಹಾಗಣಪತಿ, ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ಮಂಗಳವಾರ ಕೋಳ್ಯೂರು ಶ್ರೀಕ್ಷೇತ್ರದ ಸಭಾಂಗಣದಲ್ಲಿ ಆಯೋಜಿಸಿದ 8ನೇ ವರ್ಷದ ಯಕ್ಷಗಾನ ನವಾಹ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು.
   ಕೋಳ್ಯೂರು ಶ್ರೀಕ್ಷೇತ್ರದ ಅರ್ಚಕ, ಪ್ರತಿಷ್ಠಾನದ ಅಧ್ಯಕ್ಷ ವೇದಮೂತರ್ಿ ರವಿಶಂಕರ ಹೊಳ್ಳ ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭದಲ್ಲಿ ಯಕ್ಷಗಾನ ಸಂಘಟಕ ವಾಸುದೇವ ರಾವ್ ಸುರತ್ಕಲ್, ಲಕ್ಷ್ಮೀನಾರಾಯಣ ಕಾರಂತ ಕೋಳ್ಯೂರು, ಪ್ರತಿಷ್ಠಾನದ ಸಂಚಾಲಕ ಭಾಸ್ಕರ ಕೋಳ್ಯೂರು, ಪ್ರತಿಷ್ಠಾನದ ಕಾರ್ಯದಶರ್ಿ, ಕೋಳ್ಯೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕಾನ ಉಪಸ್ಥಿತರಿದ್ದರು. ರಾಜ ಕೋಳ್ಯೂರು ಕಾರ್ಯಕ್ರಮ ನಿರೂಪಿಸಿದರು.
  ಬಳಿಕ ನಡೆದ ನವಾಹದ ಪ್ರಥಮ ತಾಳಮದ್ದಳೆಯನ್ನು ಸುರತ್ಕಲ್ಲಿನ ಶ್ರೀದುಗರ್ಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ತಂಡದವರು ನಡೆಸಿಕೊಟ್ಟರು. ಶಾಂಭವೀ ವಿಜಯ  ಪ್ರಸಂಗದ ತಾಳಮದ್ದಳೆ ನಡೆಯಿತು.

    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries