ಅ.14 ರಂದು ನವ ವೈವಿಧ್ಯ ಕಾವ್ಯ ವೈಭವ
ಮಂಜೇಶ್ವರ: ಕಾಸರಗೋಡಿನ ವಿಶ್ವಕರ್ಮ ಸಾಹಿತ್ಯ ದರ್ಶನ ಸಂಘಟನೆಯ ಅಶ್ರಯದಲ್ಲಿ ನಾವು ನಮ್ಮವರು ವಾಟ್ಸಪ್ ಬಳಗದ ಸಹಕಾರದಲ್ಲಿ ಬಂಗ್ರಮಂಜೇಶ್ವರದ ಕಾಳಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಅಂಗವಾಗಿ ಅ.14ರಂದು ಮಧ್ಯಾಹ್ನ 1.30ರಿಂದ ನವ ವೈವಿಧ್ಯ ಕಾವ್ಯ ವೈಭವ ಎಂಬ ಖ್ಯಾತ ಕವಿಗಳ ಕೂಡುವಿಕೆಯಲ್ಲಿ ಕವಿಗೋಷ್ಠಿ ನಡೆಯಲಿದೆ.
ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಸಮಾಜ ಸಭಾದ ಅಧ್ಯಕ್ಷ ಪೋಳ್ಯ ಎಂ.ಉಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸುವರು. ಸಿರಿಗನ್ನಡ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಉದ್ಘಾಟಿಸುವರು. ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ವನಿತಾ ತುಕಾರಾಮ ಆಚಾರ್ಯ ಕೊಂಡೆವೂರು, ಓಜ ಸಾಹಿತ್ಯ ಕೂಟದ ಮುಖಂಡ ಯು.ಅಶೋಕ್ ಆಚಾರ್ಯ ಉದ್ಯಾವರ, ವಿನೋದ್ ಆಚಾರ್ಯ ಪುತ್ತೂರು, ಕಾಂಚನ ಕೋಟೆಕ್ಕಾರು, ರಶ್ಮಿತಾ ಅಂಗಡಿಪದವು, ಮೌನೇಶ್ ಆಚಾರ್ಯ ಕಡಂಬಾರು, ರೇಣುಕಾ ಹರೀಶ್, ದೀಕ್ಷಿತಾ ಹೊಸಂಗಡಿ ಉಪಸ್ಥಿತರಿರುವರು. ಕವಿಗೋಷ್ಠಿಯಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 25ಕ್ಕೂ ಮಿಕ್ಕಿದ ಕವಿಗಳು ಪಾಲ್ಗೊಳ್ಳುವರು.