ಇಂದು ಕಾಟುಕುಕ್ಕೆ ದೇವಾಲಯದಲ್ಲಿ ತೆನೆ ತುಂಬಿಸುವ ಹಬ್ಬ.
ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅ.11 ಗುರುವಾರ ತೆನೆ ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಪ್ರತೀ ವರ್ಷ ನಡೆದು ಬರುತ್ತಿರುವ ಸಂಪ್ರದಾಯದಂತೆ ವೈದಿಕ ಅನುಷ್ಠಾನಗಳೊಂದಿಗೆ ಬೆಳಿಗ್ಗೆ ಭತ್ತದ ತೆನೆಯನ್ನು ಪೂಜಿಸಿ ಕಟ್ಟುವ ಕಾರ್ಯಕ್ರಮ ಆಗಿದೆ. ನಂತರ ಗ್ರಾಮದ ಭಕ್ತ ಜನರು ದೇವಾಲಯದಿಂದ ಭತ್ತದ ತೆನೆಗಳನ್ನು ಪಡೆದು ತಮ್ಮ ಮನೆಗಳಿಗೆ ತಂದು ಮನೆ ತುಂಬಿಸುತ್ತಾರೆ.
ತುಳು ನಾಡಿನ ಸಂಪ್ರದಾಯದಂತೆ ಕೃಷಿ ಸಂಸ್ಕೃತಿಯ ಪ್ರತೀಕವಾಗಿ, ಐಶ್ವರ್ಯ ಲಕ್ಷ್ಮಿಯ ಅನುಗ್ರಹದ ಕಲ್ಪನೆಯೊಂದಿಗೆ ಹೊಸ ಬೆಳೆಯನ್ನು ಮನೆಗೆ ತರುವ ಮೊದಲು ಪೂಜಿಸಿ ತುಂಬಿಸುತ್ತಾರೆ. ಹೆಚ್ಚಾಗಿ ನವರಾತ್ರಿ ಸಮಯದಲ್ಲಿ ಇದನ್ನು ಆಚರಿಸುವುದು ವಾಡಿಕೆಯಾಗಿ ಪರಂಪರಾಗತವಾಗಿ ನಡೆದುಬಂದಿದೆ