HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಅ.21.ಮಂಗಳೂರು ಪುರಭವನದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ "ಆತ್ಮಾನಂ ಮಾನುಷಂಮನ್ಯೇ"" ಯಕ್ಷಗಾನ ಬಯಲಾಟ
      ಕುಂಬಳೆ: ಸಿರಿಬಾಗಿಲು ವೆಂಕಪ್ಪಯ್ಯ ಸಾಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ವಾಷರ್ಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸುಪ್ರಸಿಧ್ಧ ಕಲಾವಿದರ ಕೂಡುವಿಕೆಯಲ್ಲಿ "ಆತ್ಮಾನಂ ಮಾನುಷಂಮನ್ಯೇ" ಯಕ್ಷಗಾನ ಬಯಲಾಟ ಕಾರ್ಯಕ್ರಮವು ಅ.21 ರಂದು ಭಾನುವಾರ ಬೆಳಿಗ್ಗೆ  10ರಿಂದ ಮಂಗಳೂರು ಪುರಭವನದಲ್ಲಿ ಜರಗಲಿದೆ.
   ಬೆಳಿಗ್ಗೆ ಗಂಟೆ 10ರಿಂದ ಜರಗುವ ಕಾರ್ಯಕ್ರಮದಲ್ಲಿ 2018ನೇ ಸಾಲಿನ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ ಖ್ಯಾತ ಯಕ್ಷಗಾನ ಕಲಾಸಂಸ್ಥೆ ಯಕ್ಷಗಾನ ಕಲಾರಂಗ ಉಡುಪಿ ಸಂಸ್ಥೆಗೆ ನೀಡಲಾಗುವುದು ಹಾಗೂ ಸದ್ರಿ ಸಂಸ್ಥೆಗೆ ನುಡಿಗೌರವ ಕಾರ್ಯಕ್ರಮ ನಾಡಿನ ಗಣ್ಯರ ಸಮಕ್ಷಮ ಜರಗಲಿದೆ. ಅಪರಾಹ್ನ 2ರಿಂದ ಯಕ್ಷಗಾನ ಬಯಲಾಟ ಜರಗಲಿದೆ.
    ಬೆಳಿಗ್ಗೆ  9.50ಕ್ಕೆ ಬಾಲಗೋಪಾಲಕುಣಿತ ಜರಗಲಿದ್ದು ಹಿಮ್ಮೇಳದಲ್ಲಿ ಶ್ರೀನಿವಾಸ ಬಳ್ಳಮಂಜ, ಕೃಷ್ಣ ಪ್ರಕಾಶ ಉಳಿತ್ತಾಯ, ಮುರಾರಿ ಕಡಂಬಳಿತ್ತಾಯ ಭಾಗವಹಿಸಲಿದ್ದು ಮುಮ್ಮೇಳದಲ್ಲಿ ಉಪಾಸನಾ ಪಂಜರಿಕೆ,  ಕಿಷನ್ ಅಗ್ಗಿತ್ತಾಯ ನೆಲ್ಲಿಕಟ್ಟೆ ಪಾಲ್ಗೊಳ್ಳುವರು. 10.15ರಿಂದ ಚೆಂಡೆ ಮದ್ದಳೆ ಲಯ ವಿನ್ಯಾಸ ಜರಗಲಿದೆ.
   10.30ಕ್ಕೆ 'ಯಕ್ಷಗಾನ ಕಲೆ-ಕಲಾವಿದರ ಅಧ್ಯಯ'ಯಕ್ಷಗಾನ ಕಲಾರಂಗ ಉಡುಪಿ ಇದರ ಯೋಜನೆಗಳು ವಿಷಯದಲ್ಲಿ ವಿಚಾರ ಸಂಕಿರಣ ಹಾಗೂ ನುಡಿಗೌರವ ಕಾರ್ಯಕ್ರಮ ಜರಗಲಿದೆ. ಸಮಾರಂಭವನ್ನು  ನಿವೃತ್ತ ಪ್ರಾಚಾರ್ಯ ಪ್ರೊ.ಜಿ.ಆರ್.ರೈ ಉದ್ಘಾಟಿಸುವರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆ ವಹಿಸುವರು.  'ಕಲಾರಂಗದ ಚಟುವಟಿಕೆಗಳ ಬಗೆಗೆ ಡಾ.ಚಂದ್ರಶೇಖರ ದಾಮ್ಲೆ  ವಿಚಾರಮಂಡಿಸುವರು. ಹಿರಿಯ ಪ್ರಸಂಗಕರ್ತ ವಿದ್ವಾಂಸ ಶ್ರೀಧರ ಡಿ.ಎಸ್. ಕಲಾರಂಗದ ಪ್ರಶಸ್ತಿಗಳು, ಪ್ರೊ. ಪದ್ಮನಾಭ ಗೌಡ ಕಲಾವಿದರಿಗೆ ನೀಡುವ ಸಹಕಾರ ವಿಷಯಗಳಲ್ಲಿ ವಿಚಾರ ಮಂಡಿಸುವರು. ಯಕ್ಷಗಾನ ಕಲಾರಂಗ ಉಡುಪಿ ಸಂಸ್ಥೆಯ ಕಾರ್ಯದಶರ್ಿ ಮುರಳಿ ಕಡೆಕಾರ್ ಪ್ರತಿಕ್ರಿಯೆ ನೀಡಲಿದ್ದು ಹಿರಿಯ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಕಾರ್ಯಕ್ರಮ ನಿರ್ವಹಿಸುವರು.
   ಮಧ್ಯಾಹ್ನ 12ರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದ್ದು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಅರ್ಥಧಾರಿ ಕುಂಬ್ಳೆ ಸುಂದರರಾವ್ ಅಭಿನಂದನಾ ಭಾಷಣ ಮಾಡುವರು. ಕಲಾರಂಗದ ಅಧ್ಯಕ್ಷ ಕೆ.ಗಣೇಶ ರಾವ್ ಉಪಸ್ಥಿತರಿರುವರು. ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಸ್ತಾವಿಕವಾಗಿ ಮಾತನಾಡುವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ ಸ್ವಾಗತಿಸಿ ಕಲಾವಿದ ಗುರುರಾಜ ಹೊಳ್ಳ ಬಾಯಾರು ನಿರೂಪಿಸುವರು. ಡಾ.ಶ್ರುತ ಕೀತರ್ಿ ರಾಜ್ ಉಜಿರೆ ವಂದನಾರ್ಪಣೆಗೈಯ್ಯುವರು.
   ಅಪರಾಹ್ನ  2ರಿಂದ ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ 'ಆತ್ಮಾನಂ ಮಾನುಷಂ ಮನ್ಯೇ" ಹೊಸ ರಂಗ ಪರಿಕಲ್ಪನೆಯಲ್ಲಿ ಜರಗಲಿದೆ. ಪ್ರಸಂಗದ ಕಥಾ ಸಂವಿಧಾನ ಹಾಗೂ ರಂಗ ಸಂಯೋಜನೆಯನ್ನು 'ಯಕ್ಷಕಲಾರಂಗ ಉಡುಪಿ' ಮಾಡಿದ್ದು ಛಾಂದಸ  ಗಣೇಶ ಕೊಲೆಕಾಡಿ ಪದ್ಯರಚಿಸಿರುತ್ತಾರೆ. ತೆಂಕುತಿಟ್ಟಿನ ನುರಿತ ಹಿಮ್ಮೇಳ ಮುಮ್ಮೇಳ ಕಲಾವಿದರು ಯಕ್ಷಗಾನದಲ್ಲಿ ಭಾಗವಹಿಸುವರು. ಎಂದು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
                             
                                               

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries