ಬಾಲಡ್ಕದಲ್ಲಿ ನಾಮಜಪ ಯಾತ್ರೆ
ಬದಿಯಡ್ಕ: ಶಬರಿಮಲೆ ಆಚಾರ ಉಲ್ಲಂಘನೆಗೆ ಷಡ್ಯಂತ್ರ ನಡೆಸಿದ ಎಡರಂಗ ಸರಕಾರದ ವಿರುದ್ಧ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದು ಭಾನುವಾರ ಪೈಕ್ಕ ಬಾಲಡ್ಕದಲ್ಲಿ ಅಯ್ಯಪ್ಪ ಭಕ್ತರಿಂದ ನಾಮಜಪ ಯಾತ್ರೆ ನಡೆಯಿತು.
ಹಿಂದೂ ನೇತಾರ ಸುನಿಲ್ ಪಿ.ಆರ್. ನಾಮಜಪಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸಬೇಕೆಂಬ ಹುನ್ನಾರದಿಂದ ಶಬರಿಮಲೆ ವಿಚಾರದಲ್ಲಿ ಅನೇಕ ಷಡ್ಯಂತ್ರಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಎಡರಂಗ ನೇತೃತ್ವದ ರಾಜ್ಯ ಸರಕಾರವು ಬೆಂಬಲವನ್ನು ನೀಡುತ್ತಿರುವುದು ಖಂಡನೀಯ. ಶಬರಿಮಲೆಯ ಪಾವಿತ್ರ್ಯವನ್ನು ಕಾಪಾಡಲು ಯಾವುದೇ ತ್ಯಾಗಕ್ಕೂ ಸಿದ್ಧವಾಗಿ ಹಿಂದೂ ಸಂಘಟನೆಗಳು, ಅಯ್ಯಪ್ಪ ಭಕ್ತರು ಪಕ್ಷಬೇಧ ಮರೆತು ಹೋರಾಟಕ್ಕೆ ಧುಮುಕಿದ್ದಾರೆ ಎಂಬುದನ್ನು ಸರಕಾರವು ನೆನಪಿನಲ್ಲಿಟ್ಟುಕೊಳ್ಳುವುದು ಒಳಿತು ಎಂದು ಸರಕಾರಕ್ಕೆ ಎಚ್ಚರಿಕೆಯ ಮಾತನ್ನು ಹೇಳಿದರು.
ರಾಘವ ಗುರುಸ್ವಾಮಿ, ಗೋಪಾಲ ಗುರುಸ್ವಾಮಿ, ಕುಂಞಿಕಣ್ಣ ಗುರುಸ್ವಾಮಿ ಚಂದ್ರಂಪಾರ, ಸೀನ ಗುರುಸ್ವಾಮಿ ಚೂರಿಪಳ್ಳ, ಗೋಪಾಲ ಗುರುಸ್ವಾಮಿ ಚೂರಿಪಳ್ಳ, ಜಯಚಂದ್ರನ್ ಪೈಕ, ಶ್ರೀನಿವಾಸ್ ಚೂರಿಪಳ್ಳಂ, ಹರೀಶ್ ನಾರಂಪಾಡಿ, ರಾಜೇಶ್ ಪೈಕ, ಆಶಾ ಕೃಷ್ಣ ಬಾಲಡ್ಕ, ಶಕುಂತಲಾ ಕೃಷ್ಣನ್ ಪೈಕ, ಮೋಹನ್ ಶೆಟ್ಟಿ ಹಾಗೂ ಅಯ್ಯಪ್ಪ ಭಕ್ತರು ಪಾಲ್ಗೊಂಡರು.