HEALTH TIPS

No title

           ವಿದ್ಯಾಥರ್ಿನಿಯರದೇ ಮೇಲುಗೈ ಯೊಂದಿಗೆ ಕನ್ನಡ ಎಂ. ಎ ಫಲಿತಾಂಶ ಪ್ರಕಟ
     ಕಾಸರಗೋಡು: ಕಣ್ಣೂರು ವಿ.ವಿ.ಯ ಎಂ.ಎ ಕನ್ನಡ ಫಲಿತಾಂಶ ಪ್ರಕಟವಾಗಿದ್ದು, ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು  ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾಥರ್ಿನಿಯರಾದ ಸುಶ್ಮಿತಾ ಶೆಟ್ಟಿ ಎಸ್, ಶ್ರಾವ್ಯ ಎಸ್.ಎನ್. ಮತ್ತು ಸುಶ್ಮಿತಾ ಆರ್. ಇವರು ಪಡೆದಿದ್ದಾರೆ.
   ಮೊದಲ ಸ್ಥಾನ ಪಡೆದ ಸುಶ್ಮಿತಾ ಶೆಟ್ಟಿ ಎಸ್. ಅವರು ಡಯಟ್ ಮಾಯಿಪ್ಪಾಡಿ, ಕೂಡ್ಲು  ಶ್ರೀ  ಗೋಪಾಲಕೃಷ್ಣ ಹೈಸ್ಕೂಲ್ ಹಾಗೂ ಕಾಸರಗೋಡು ಬಿ.ಇ.ಎಂ. ವಿದ್ಯಾಸಂಸ್ಥೆಗಳ ಹಳೆವಿದ್ಯಾಥರ್ಿನಿಯಾಗಿದ್ದಾರೆ. ಇವರು ಬಿ.ಎ. ಪದವಿಯನ್ನು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಪೂರೈಸಿದ್ದು ವಿ.ವಿ. ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಕನ್ನಡ ವಿದ್ಯಾಥರ್ಿಗಳ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ ಸ್ನೇಹರಂಗದ ಕಾರ್ಯದಶರ್ಿ, ಕೋಶಾಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಿದ್ದರು. ಓದು ಬರಹಗಳಲ್ಲಿ ಆಸಕ್ತಿಯಿರುವ ಸುಶ್ಮಿತಾ ಶೆಟ್ಟಿಯವರ ಕಥೆ ಹಾಗೂ ಇತರ ಬರಹಗಳು ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಉದಯವಾಣಿ ದೈನಿಕದಲ್ಲಿ ಉಪಸಂಪಾದಕ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸಿರಿಬಾಗಿಲು, ಬೇರಮನೆ ಜಯಶೆಟ್ಟಿ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ.
   ದ್ವಿತೀಯ ಸ್ಥಾನವನ್ನು ಪಡೆದಿರುವ ಶ್ರಾವ್ಯ ಎಸ್.ಎನ್. ಅವರು ಜಿ.ಎಚ್.ಎಸ್.ಎಸ್. ಬೇಕೂರು, ಕೆ.ವಿ. ಎಂ.ಎಚ್.ಎಸ್. ಕುರುಡಪದವು, ಜಿಎಚ್ಎಸ್ಎಸ್ ಪೈವಳಿಕೆ ನಗರ, ಮಂಜೇಶ್ವರ  ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು, ಕಣ್ಣೂರು ವಿ.ವಿ.ಯ ಅಧ್ಯಾಪಕ ತರಬೇತಿ ಕೇಂದ್ರ ಈ ವಿದ್ಯಾಸಂಸ್ಥೆಗಳ ಹಳೆ ವಿದ್ಯಾಥರ್ಿನಿ. ವಿದ್ಯಾಥರ್ಿ ಸಂಘ ಹಾಗೂ ಸ್ನೆಹರಂಗದ ಪದಾಧಿಕಾರಿಯಾಗಿ ದುಡಿದಿದ್ದಾರೆ. ಪ್ರಸ್ತುತ ಕೊಕ್ಕೆಚಾಲ್ ಕಮಿಲ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೇಕೂರು ಸುಭಾಶ್ ನಗರದ ನಾರಾಯಣ ಮತ್ತು ಶಾಂತ ದಂಪತಿಯರ ಪುತ್ರಿಯಾಗಿದ್ದಾರೆ.
    ತೃತೀಯ ಸ್ಥಾನ ಪಡೆದ ಸುಶ್ಮಿತಾ ಆರ್. ಅವರು ಕುಂಬಳೆ ಹೋಲಿ ಪ್ಯಾಮಿಲಿ, ಜಿ ಎಚ್ ಎಸ್ ಎಸ್ ಕುಂಬಳೆ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ವಿದ್ಯಾಸಂಸ್ಥೆಗಳ ಹಳೆ ವಿದ್ಯಾಥರ್ಿನಿ. ಇವರು ಪದವಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಯಕ್ಷಗಾನ ಮತ್ತು ನಾಟಕ ಕಲಾವಿದೆಯಾದ ಇವರಿಗೆ ವಿಶ್ವವಿದ್ಯಾನಿಲಯ ಮಟ್ಟದ ಉತ್ತಮ ನಟಿ ಸ್ಥಾನ ಲಭಿಸಿದೆ.  ಇವರ ಬರಹಗಳು ಸ್ಥಳಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉತ್ಥಾನ ಪತ್ರಿಕೆಯವರು ನಡೆಸಿದ ವಿಮಶರ್ಾ ಸ್ಪಧರ್ೆಯಲ್ಲಿ ಸುಶ್ಮಿತಾರವರು ಬಹುಮಾನ ಪಡೆದಿದ್ದರು. ವಿವಿಧ ಕನ್ನಡ ತುಳು ನಾಟಕಗಳಲ್ಲಿ ಅಭಿನಯಿಸಿ ಉತ್ತಮ ನಟಿಯೆಂದು ಗುರುಸಿಕೊಂಡಿರುವ ಇವರು, ಸ್ನೇಹರಂಗದ ಪದಾಧಿಕಾರಿಯಾಗಿ ದುಡಿದಿದ್ದಾರೆ. ಪ್ರಸ್ತುತ ಸವಾಕ್, ಸಿರಿಚಂದನ ಕನ್ನಡ ಯುವಬಳಗ, ಅಪೂರ್ವ ಕಲಾವಿದರು ಈ ಮುಂತಾದ ಕನ್ನಡ ಮತ್ತು ರಂಗಭೂಮಿಗೆ ಸಂಬಂಧಪಟ್ಟ ಸಂಘಸಂಸ್ಥೆಗಳಲ್ಲಿ ಕಾರ್ಯದಶರ್ಿ, ಕೋಶಾಧಿಕಾರಿಯಾಗಿ, ಪದಾಧಿಕಾರಿಯಾಗಿ ದುಡಿಯುತ್ತಿದ್ದಾರೆ. ಕುಂಬಳೆ ಸಮೀಪದ ಕುಂಟಗೇರಡ್ಕ ಲಕ್ಷ್ಮೀ ನಿಲಯದ ರಾಧಾಕೃಷ್ಣ ಮತ್ತು ಆಶಾಲತಾ ದಂಪತಿಯರ ಪುತ್ರಿಯಾಗಿದ್ದಾರೆ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries