ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು-ಹ.ಸು.ಒಡ್ಡಂಬೆಟ್ಟು
ಉಪ್ಪಳ: ಮಕ್ಕಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸಾಹಿತ್ಯಾಭಿರುಚಿ ಬೆಳಸುವುದರಿಂದ ಅವರಿಗೆ ಮೌಲ್ಯಗಳನ್ನು ಮೈಗೂಡಿಸುವಂತೆ ಮಾಡಿ ಮುಂದೆ ಉತ್ತಮ ಪ್ರಜೆಗಳನ್ನಾಗಿಸಬಹುದೆಂದು ಗಡಿನಾಡು ಚುಟುಕು ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯಪಟ್ಟರು.
ಅವರು ಪೈವಳಿಕೆ ಚಿಪ್ಪಾರಿನ ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕಯಲ್ಲಿ ನಡೆಯುತ್ತಿರುವ ಶತಮಾನದ ಸಂಭ್ರಮ 2018ರ ಅಂಗವಾಗಿ ನಡೆದ ಕವಿತೆ ರಚನಾ ಕಮ್ಮಟ ಮತ್ತು ಕವಿ ಕಾವ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಇಂತಹ ಕಾವ್ಯ ಕಮ್ಮಟಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ಸುಪ್ತವಾಗಿರುವ ಭಾವನೆಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸುವಲ್ಲಿ ಅದು ಸಹಕಾರಿಯಾಗುವುದು. ಮಕ್ಕಳ ಸಾಹಿತ್ಯವನ್ನು ಹೆಚ್ಚು ಪ್ರಚುರಪಡಿಸುವ ಮೂಲಕ ಅವರಲ್ಲಿ ಸಾಹಿತ್ಯದತ್ತ ಒಲವು ಮೂಡಿಸಬಹುದೆಂದು ಅವರು ತಿಳಿಸಿದರು.
ಹಿರಿಯ ಕವಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರು ಮಕ್ಕಳಿಗೆ ಕವಿತೆ ರಚನೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿ ಮಕ್ಕಳು ಪುಟಾಣಿ ಕವಿಗಳು ಅವರನ್ನು ಬೆಳೆಸಲು ಹಿರಿಯ ಕವಿಗಳು ಆಸಕ್ತಿ ತೋರಬೇಕೆಂದು ಅಭಿಪ್ರಾಯ ಪಟ್ಟರು.
ಶತಮಾನೋತ್ವದ ಕಾಯರ್ಾಧ್ಯಕ್ಷ ಅಬ್ದುಲ್ ರಹಮಾನ್ ಚಿಪ್ಪಾರ್, ನಿವೃತ್ತ ಮುಖ್ಯೋಪಾಧ್ಯಾಯ ನರಸಿಂಹ ಬಲ್ಲಾಲ್ ಶುಭಹಾರೈಸಿದರು.ಬಳಿಕ ನಡೆದ ಕವಿಗೋಷ್ಟಿಯಲ್ಲಿ ಕವಯತ್ರಿ ಸುಶೀಲ ಪದ್ಯಾಣ, ರಾಮ ಏದಾರ್, ಪ್ರೇಮಲತ ಟೀಚರ್, ಶಾಲಾ ವಿದ್ಯಾಥರ್ಿಗಳು ಮತ್ತು ಹಳೆ ವಿದ್ಯಾಥರ್ಿಗಳು ಕವನ ವಾಚನ ನಡೆಸಿದರು.