HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಕುಂಜತ್ತಾಯರ ಸಾರ್ಥಕ ಬದುಕು ಸಮಾಜಕ್ಕೆ ಆದರ್ಶ : ರಾಧಾಕೃಷ್ಣ ಭಟ್ ಪಣಿಯೆ
      ಮುಳ್ಳೇರಿಯ : ಮನುಷ್ಯ ತನ್ನ ಸಂಸಾರಕ್ಕೆ, ಸುತ್ತಲಿನ ಸಮಾಜಕ್ಕೆ, ಭವಿಷ್ಯದ ಜನಾಂಗಕ್ಕೆ ಹೊಂದಿಕೊಂಡು ಸಾರ್ಥಕ ಬದುಕು ನಡೆಸಬೇಕಾದರೆ ಸಹಸ್ರಾರು ವರುಷದ ಪುಣ್ಯ ಮಾಡಿರಬೇಕು. ಒರ್ವ ಉತ್ತಮ ಶಿಕ್ಷಕ, ಉತ್ತಮ ಸಂಸಾರಿ, ಸದುದ್ದೇಶದ ಸಮಾಜ ಸೇವಕನಾಗಿ ಬಾಳ್ವೆ ನಡೆಸಿದ ಸೀತಾರಾಮ ಕುಂಜತ್ತಾಯರು ಆದರ್ಶ ಬದುಕಿನ ಸಪ್ತತಿ ಸಮಾರಂಭವನ್ನು ನಡೆಸಿ ಗೌರವಾಭಿಮಾನಕ್ಕೆ ಪಾತ್ರರಾಗಿರುವುದು ಸರ್ವರಿಗೂ ಹೆಮ್ಮೆಯ ವಿಷಯವಾಗಿದೆ. ತನ್ನ ಬದುಕಿನ ಉದ್ದಗಲಕ್ಕೂ ಎಳೆಯರ ತಪ್ಪು ತಿದ್ದುವ ಮಾರ್ಗದರ್ಶಕನಾಗಿ, ಸಮಾಜವನ್ನು ಮುನ್ನಡೆಸುವ ಮುಂದಾಳುವಾಗಿ, ಮನೆಯವರ ಮನವರಿತು ನಡೆಯುವ ಹಿರಿಯಣ್ಣನಾಗಿ, ಕಲೋಪಾಸಕ ಬದುಕನ್ನು ಕೌಶಲ್ಯಯುತವಾಗಿ ನಡೆಸುವ ಇವರ ಮುಂದಿನ ಬದುಕು ಇನ್ನಷ್ಟು ಹಸನಾಗಿ ಶತ ಸಂವತ್ಸರ ಪೂರೈಸಲಿ ಎಂದು ರಾಧಾಕೃಷ್ಣ ಭಟ್ ಪಣಿಯೆ ಹೇಳಿದರು.
ಅವರು ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸಭಾಂಗಣದಲ್ಲಿ ಧಾಮರ್ಿಕ, ಸಾಮಾಜಿಕ ಮುಂದಾಳು, ನಿವೃತ್ತ ಶಿಕ್ಷಕ ಸೀತಾರಾಮ ಕುಂಜತ್ತಾಯರ ಸಪ್ತತಿ ಸಮಾರಂಭದ ಅಂಗವಾಗಿ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮೀಶ ರಾವ್ ಕಡಂಬಾರು ವಹಿಸಿದ್ದರು. ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ಭಟ್ ತಲೇಕ, ಕ್ಷೇತ್ರ ಸೇವಾ ಸಮಿತಿಯ ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಮಧುಕರ ರೈ ಕೊರೆಕ್ಕಾನ, ನರಸಿಂಹ ಭಟ್ ಪಣಿಯೆ ಮೊದಲಾದವರು ಶುಭ ಹಾರೈಸಿದರು. ಕೃಷ್ಣಕುಂಜತ್ತಾಯ ಮಲ್ಲಾರ, ವೆಂಕಟ್ರಮಣ ಕುಂಜತ್ತಾಯರು ಉಪಸ್ಥಿತರಿದ್ದರು.
ಉಡುಪಿ ಮಾಧ್ವ ಬ್ರಾಹ್ಮಣ ಸಭಾ(ಕೇರಳ) ಇದರ ರಕ್ಷಾಧಿಕಾರಿ ಶ್ರೀರಾಮಪ್ರಸಾದ್ ದಂಪತಿಗಳು, ಉಳಿಯ ಬ್ರಹ್ಮಶ್ರೀ ವಿಷ್ಣು ಅಸ್ರ, ಶ್ರೀ ಉಮಾಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್, ಕಾರ್ಯದಶರ್ಿ ಬಾಲಕೃಷ್ಣ ಮಾಸ್ತರ್ ಮತ್ತು ಧಾಮರ್ಿಕ ಮುಂದಾಳು ಕೊರೆಕ್ಕಾನ ಮಧುಕರ ರೈ, ಶಿವಳ್ಳಿ ಬ್ರಾಹ್ಮಣ ಸಭಾ(ರಿ) ಕಾಸರಗೋಡು ಇದರ ಅಧ್ಯಕ್ಷರಾದ ಲಕ್ಷ್ಮೀಶ ರಾವ್ ಕಡಂಬಾರ್ ಹಾಗೂ ಸೀತಾರಾಮ ಕಡಮಣ್ಣಾಯ, ಆಯರ್ಾಂಬ ಮಾತೃಮಂಡಳಿ ವತಿಯಿಂದ ವಸಂತಿ ಟೀಚರ್ ಅಗಲ್ಪಾಡಿ ಹಾಗೂ ಪದಾಧಿಕಾರಿಗಳಿಂದ, ಕೇರಳ ರಾಜ್ಯ ಪೆನ್ಸನರ್ಸ್ ಸಂಘ ಕುಂಬಡಾಜೆ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಈಶ್ವರ ರಾವ್, ಘಟಕದ ಕಾರ್ಯದಶರ್ಿ ಶ್ರೀಧರ ಭಟ್ ಜೋಕೆಮೂಲೆ, ಮವ್ವಾರು ಸ್ವದೇಶಿ ಕ್ಲಿನಿಕ್ನ ಡಾ| ಕೇಶವ ಮವ್ವಾರು ಹಾಗೂ ವಿವಿಧ ಸಂಘ ಸಂಸ್ಥೆಯವರು ಸೀತಾರಾಮ ಕುಂಜತ್ತಾಯ ದಂಪತಿಯವರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಚಂದ್ರಶೇಖರ ಮಲ್ಲಾರ, ಜಯಂತಿ ಕಬಣೂರಾಯ, ಶಾಲಿನಿ ಹೆಬ್ಬಾರ್, ವಿಶಾಲಾಕ್ಷಿ ಬಿ.ವಿ., ಇಂದಿರಾ ಬಿ.ಕೆ., ಉದಯ ಕುಂಜತ್ತಾಯ, ರಾಘವೇಂದ್ರ ಕುಂಜತ್ತಾಯ ಇವರು ಸ್ವರಚಿತ ಕವನ ವಾಚನ ಮಾಡಿ ಸ್ಮರಣಿಕೆ ನೀಡಿ ಗೌರವಿಸಿದರು.
ಸಪ್ತತಿ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸತ್ಯನಾರಾಯಣ ಪುಣಿಂಚಿತ್ತಾಯರ ನೇತೃತ್ವದಲ್ಲಿ ಹಿರಿಯ ಕಲಾವಿದರಿಂದ "ಯಕ್ಷಗಾನ ಬಯಲಾಟ" ಜರಗಿತು.
   ಈ ಸಂದರ್ಭದಲ್ಲಿ ಪಾಲ್ಗೊಂಡ ಪ್ರತಿಯೊಂದು ಮನೆಯವರಿಗೂ ಹಸಿರು ಕ್ರಾಂತಿಯ ಪ್ರತೀಕವಾಗಿ ವಿವಿಧ ತರದ ಗಿಡಗಳನ್ನು ವಿತರಿಸಿದರು. ತನ್ಮೂಲಕ ಪರಿಸರ ಪ್ರೇಮದ ಜಾಗೃತಿ ಮೂಡಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries