HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ತುಳುನಾಡು ಬಾಲೆ ಬಂಗಾರ್ : ವಿಜೇತರು ಘೋಷಣೆ
     ಮಂಜೇಶ್ವರ: ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯೊನೊ ಕೂಟೋ ಮಂಜೇಶ್ವರ ಆಶ್ರಯದಲ್ಲಿ  ಬಸ್ರೂರಿನಲ್ಲಿ ನಡೆಯಲಿರುವ ತುಳುನಾಡೋಚ್ಛಯದಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಾಕರ್್ ಅಪರ್ಿಸುವ ತುಳುನಾಡ ಬಾಲೆ ಬಂಗಾರ್- 2018 ಮುದ್ದು ಮಕ್ಕಳ ಫೋಟೋ ಸ್ಪಧರ್ೆ - ಸೀಸನ್ - 3 ಕಾರ್ಯಕ್ರಮದಂಗವಾಗಿ ಆಯ್ಕೆ ಪಕ್ರಿಯೆ ಹೊಸಂಗಡಿಯ ಹಿಲ್ಸೈಡ್ ಸಭಾಭವನದಲ್ಲಿ ನಡೆಯಿತು.
    ಸುಮಾರು 164 ರಷ್ಟು ಮಕ್ಕಳ ಛಾಯಚಿತ್ರಗಳು ಸ್ಪಧರ್ೆಗೆ ಬಂದಿತ್ತು. ಮಕ್ಕಳ ಮುಗ್ಧತೆ, ನೈಜತೆ, ತುಳುನಾಡಿನ ಸಂಪ್ರದಾಯಿಕ ಉಡುಗೆ, ತೊಡುಗೆ, ತುಳುನಾಡ ಸಂಸ್ಕೃತಿಯ ಪರಿಸರಕ್ಕೆ ಪೂರಕವಾದ ಮಕ್ಕಳ ಛಾಯಾಚಿತ್ರಗಳು ಈ ಬಾರಿಯ ಸ್ಪಧರ್ೆಯ ವಿಶೇಷತೆಯಾಗಿತ್ತು. ಇದರಲ್ಲಿ ಕೆಲವು  ಗ್ರಾಫಿಕ್ಸ್ ಫೋಟೋಗಳನ್ನು ತೀಪರ್ುಗಾರರ ತೀಮರ್ಾನದಂತೆ  ತಿರಸ್ಕರಿಸಲಾಗಿತ್ತು. ಸುಮಾರು 4 ಗಂಟೆಗಳ ಕಾಲ ನಡೆದ ಸ್ಪಧರ್ೆಯ ಛಾಯಾಚಿತ್ರ ಆಯ್ಕೆ ಪ್ರಕ್ರಿಯೆಯು ಮಕ್ಕಳ ಮನಸ್ಸಿನ  ಹಾವಭಾವದೊಂದಿಗೆ ಬಾರೀ ಸ್ಪಧರ್ೆಯನ್ನು ನೀಡಿತ್ತು. ಚಿತ್ರಕಲಾವಿದ ಜಯಪ್ರಸಾದ್ ಆಚಾರ್ಯ ಕೋಟೆಕ್ಕಾರ್, ಖ್ಯಾತ ವೈದ್ಯ ಡಾ. ನರೇಶ್ ನೆಗಳಗುಳಿ, ಹಿರಿಯ ಛಾಯಚಿತ್ರಗಾರ ಸುದರ್ಶನ್ ತೀಪರ್ುಗಾರಾಗಿ ಭಾಗವಹಿಸಿದ್ದರು.
   ಪ್ರಥಮ ಬಹುಮಾನ ತ್ವಿಶ ಜಿ. ಕಾವೂರು ಮಂಗಳೂರು, ದ್ವೀತಿಯ ಬಹುಮಾನವನ್ನು ವಿಹಾ ಎಸ್. ನಂದಳಿಕೆ ಮಂಗಳೂರು, ತೃತೀಯ ಬಹುಮಾನವನ್ನು ದಕ್ಷ ಜೆ.ಆಚಾರ್ಯ ಕದ್ರಿ ಮಂಗಳೂರು ಪಡೆದರು.  ತೀಪರ್ುಗಾರರ ವಿಶೇಷ ಆಯ್ಕೆ ಅಭಿಜ್ಞಾ ಎಚ್. ಸಿ. ಹಾಗೂ ಅಭಿಶ್ ಎಚ್.ಸಿ. ಕೊಯನಾಡ್ ಮಡಿಕೇರಿ. ಸಮಾಧಾನಕರ ಬಹುಮಾನಕ್ಕೆ ಪ್ರತ್ಯುಷಾ ಪಾಲೆಕ್ಕಾರ್ ಕುಂಬ್ಡಾಜೆ, ಋದ್ವೀನ್  ಜಿ.ಮಂಜೇಶ್ವರ, ಆದಿತ್ಯ ಆಳ್ವ ಪೂಕಟ್ಟೆ ಕುಂಬ್ಳೆ, ರಿಕ್ ಶೆಟ್ಟಿ ಹೊಸಬೆಟ್ಟು ಮಂಜೇಶ್ವರ, ಆನಿಕ ಪಾರೆಕಟ್ಟೆ ಐಲ ಅರ್ಹರಾದರು. ಪ್ರೋತ್ಸಾಹಕ ಬಹುಮಾನಕ್ಕೆ ದ್ರುವ ಶಮಂತ್ ಚಿಲಿಂಬಿ, ಅಭಿನವ್ ಭಟ್ ಪಂಜರಿಕೆ, ಐಶನ್ ಕೊಡಂಗೆ, ಪಂಚಮಿ ಬಿಕರ್ಣಕಟ್ಟೆ, ಹಷರ್ಿತ್ ಬಾಳೆಮೂಲೆ, ರಿತ್ವಿ ಪೂಂಜ ತಾಳಿಪ್ಪಾಡಿ ಗುತ್ತು, ಅದ್ವೈತ ಕೃಷ್ಣ ಬಣ್ಪುತ್ತಡ್ಕ ಪೆರ್ಲ, ಕೃಪಾಶ್ರೀ ಕಾಯರ್ತಡ್ಕ, ಅನ್ವಿತ ಎಂ.ಎಸ್. ಕುಠ್ಯಲಿ ಹಿತ್ಲು, ಶ್ರೀಹಾನ್ ಕಲ್ಯಲು ಇನ್ನಂಜೆ, ಅದ್ವೀ ಎ. ಪೂಜಾರಿ ಕಲ್ಲಗದ್ದೆ, ನಿಶಿಲ್ ಹೆಗ್ಡೆ ಕಲ್ಲಡನೆ ಬೆಳ್ಳಾರೆ, ಶ್ರೀನಿ ಐಲ ಪಾರೆಕಟ್ಟೆ, ಸ್ವಾನಿ ಶೆಟ್ಟಿ ಸೂರಂಬೈಲ್, ಸುಮುಕ್ ಶೆಟ್ಟಿ ಕೊಂಚಾಡಿ ಮಂಗಳೂರು, ಅಶ್ವಿತ್ ಪಿ. ಆಚಾರ್ಯ ಆಕಾಶ ಭವನ ಮಂಗಳೂರು, ವಲೋನಿಯ ಡಿ'ಸೋಜಾ ಮಹಾಕಾಳಿ ಗುಡಿ ಮಂಜೇಶ್ವರ, ಅದ್ವಯ್ ಶೆಟ್ಟಿ ಸುಳ್ಯಮೆ, ಚಿಂತನ್ ಬಿ.ಎಂ ಅಂಗಡಿಪದವು, ಪ್ರಾಪ್ತಿ ಪಿ.ಶೆಟ್ಟಿ ಬೇಳ, ಶ್ರೀಹನ್ ರಾಜ್ ಮಂಗಳೂರು, ಶಮಾ ಪಿ.ಎಸ್. ಪೈವಳಿಕೆ, ಅಘ್ರ್ಯ ಮಡ್ತಿಲ, ವಾಸವಿ ಎ.ಎಂ. ಐಲ, ಪಾರ್ಥ ಆರ್. ಪದವಿನಂಗಡಿ, ಸಗನ್ ಕೆ. ಪೂಜಾರಿ ಶಿಲರ್ಾಲ್, ದಶರ್ಿತ್ ಬಿ.ಎಂ ಮಜಿಬೈಲ್, ಇಹಾ ಗೌಡ ನೆಲ್ಯಾಡಿ, ಸ್ವಾತಿ ಭಟ್ ಪೆರಡಾಲ, ಸುಮಂತ್ ಕುಲಾಲ್ ಸುರಂತೋಡು, ತಕ್ಷೀಲ್ ಎಂ.ದೇವಾಡಿಗ ದೇರಬೈಲ್, ದಿಯಾ ಎಚ್.ಚೆರುಗೋಲಿ, ಐಶಾನಿ ಬಿ.ಎಂ ಕಾವೂರು, ಜನಾಯು. ಎಸ್. ರೈ ಕುತ್ತಾರು, ಅಂಕಿತ ಅಶೋಕ್ ಕೊಡ್ಲಮೊಗರು ಪ್ರೋತ್ಸಾಹಕ  ಬಹುಮಾನಕ್ಕೆ ಅರ್ಹರಾದರು. ಛಾಯಚಿತ್ರ ಸ್ಪಧರ್ೆಯಲ್ಲಿ ವಿಜೇತರಾದವರಿಗೆ ನವೆಂಬರ್ 13ರಂದು ಮಧ್ಯಾಹ್ನ 3  ಗಂಟೆಗೆ ಹೊಸಂಗಡಿ ಹಿಲ್ಸೈಡ್ ಸಭಾ ಭವನದಲ್ಲಿ ಜರಗುವ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.


    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries