ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 09, 2018
ಶೇಷವನ ಕಾತರ್ಿಕ ಮಾಸಾಚರಣೆ ಶೋಭಾಯಾತ್ರೆಯೊಂದಿಗೆ ಚಾಲನೆ
ಕಾಸರಗೋಡು: ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನವಂಬರ್ 8 ರಿಂದ ದಶಂಬರ್ 7ರ ತನಕ ಜರಗುವ ಕಾತರ್ಿಕಮಾಸ ದೀಪೋತ್ಸವಕ್ಕೆ ಸೂಲರ್ು ಗಣೇಶ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಸಹಿತ ಶೋಭಾಯಾತ್ರೆಯ ಮೂಲಕ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ನ ಅನುವಂಶಿಕ ಮೊಕ್ತೇಸರ ಸದಾಶಿವ, ಆಡಳಿತ ಮೊಕ್ತೇಸರ ವೇಣುಗೋಪಾಲ, ಟ್ರಸ್ಟ್ ಸದಸ್ಯರು, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ನೇತೃತ್ವ ವಹಿಸಿದರು.




