ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 09, 2018
ಮಧೂರಿನಲ್ಲಿ ಗ್ಲೋಬಲ್ ಅಖಂಡ ಭಜನೆ
ಮಧೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಧೂರು ಮತ್ತು ಸನಾತನ ಸೇವಾ ಟ್ರಸ್ಟ್ ಮಧೂರು ಇವುಗಳ ಆಶ್ರಯದಲ್ಲಿ ಗ್ಲೋಬಲ್ ಅಖಂಡ ಭಜನಾ ಕಾರ್ಯಕ್ರಮವು ನ.10ರಂದು ಸಂಜೆ 6 ಗಂಟೆಯಿಂದ ನ.11ರಂದು ಸಂಜೆ 6 ಗಂಟೆಯ ವರೆಗೆ ಮಧೂರಿನ ಶ್ರೀ ಸತ್ಯಸಾಯಿ ಮಂದಿರದಲ್ಲಿ ಜರಗಲಿದೆ.
ನಿರಂತರವಾಗಿ 24 ಗಂಟೆಗಳ ಕಾಲ ಜಗತ್ತಿನಾದ್ಯಂತ ಭಗವಾನ್ ಶ್ರೀ ಸತ್ಯಸಾಯಿ ಬಾಬರ ನಾಮ ಸಂಕೀರ್ತನೆ ಪ್ರತೀ ವರ್ಷ ನಡೆಯುತ್ತಿದ್ದು, ಅದರಂತೆ ಈ ವರ್ಷವೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕುಂಬಳೆಯ ಪ್ರಸಿದ್ಧ ವೈದ್ಯ ಡಾ.ಎಂ.ಆರ್.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸುವರು. ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




