ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಕಾಸರಗೋಡಲ್ಲೊಂದು ಸಿನಿಮೀಯ ಘಟನೆ ನಾಪತ್ತೆಯಾದಾಕೆಯನ್ನು ಪತ್ತೆ ಹಚ್ಚಿತು ಅಧಾರ್ ಕಾಡರ್್ !!
ಹೆಬ್ವೆರಳು ಒತ್ತಿದಾಗ ಮೂಡಿ ಬಂತು ಕಂಪ್ಲೀಟ್ ಡಿಟೈಲ್ಸ್
ಬದಿಯಡ್ಕ: ಕೇಂದ್ರ ಮತ್ತು ರಾಜ್ಯ ಸರಕಾರಗಳ ನಾನಾ ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳು ಆಧಾರ್ ಕಾಡರ್್ ಹೊಂದಬೇಕಿರುವುದು ಕಡ್ಡಾಯ. ಜೊತೆಗೆ ಮೊಬೈಲ್ ಸಿಮ್ ಕಾಡರ್್, ಪಾನ್ ಕಾಡರ್್, ಬ್ಯಾಂಕ್ ಖಾತೆ, ಅಡುಗೆ ಅನಿಲ ಸಂಪರ್ಕ, ವಿವಿಧ ಸ್ಕಾಲರ್ ಶಿಪ್ ಯಾವುದೇ ಸೇವೆಗೂ ಆಧಾರ್ ಜೋಡಣೆ ಕಡ್ಡಾಯ.ಇದೇ ಆಧಾರ್ ಕಾಡರ್್ ಕುಟುಂಬ ವೊಂದರಿಂದ ಅಚಾನಕ್ ಆಗಿ ಬೇರ್ಪಟ್ಟ ಸದಸ್ಯೆಯೊಬ್ಬರನ್ನು ಕಂಡು ಹಿಡಿಯಲು ಸಾಧ್ಯವಾಯಿತೆಂದರೆ ನೀವು ನಂಬುವಿರಾ???
ಹೌದು ಇಂತಹ ಒಂದು ನಂಬಲೇ ಬೇಕಾದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ಸಂಭವಿಸಿದೆ. ಕಳೆದ ಒಂದೂವರೆ ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಇದೇ ಆಧಾರ್ ಕಾಡರ್್ ಕುಂಟುಂಬಕ್ಕೆ ಮರು ಸೇರ್ಪಡೆಗೊಳಿಸುವಂತೆ ಮಾಡಿದೆ.
ಘಟನೆಯ ವಿವರ :
ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕಂಡು ಹಿಡಿದ ಅತ್ಯಪೂರ್ವ ಘಟನೆ ಪರಪ್ಪದಲ್ಲಿ ನಡೆದಿದೆ. ಮಂಜೇಶ್ವರ ಹೊಸಂಗಡಿ ಸಮೀಪದ ಬಾಗಿ ಎಂಬ ಹೆಸರಿನ ಮಹಿಳೆ 2017ರ ಮಾಚರ್್ ತಿಂಗಳಿನಿಂದ ನಾಪತ್ತೆಯಾಗಿದ್ದರು.ಸಂಬಂಧಿಕರು ಇವರನ್ನು ಹುಡುಕುವ ಎಲ್ಲಾ ಪ್ರಯತ್ನವನ್ನೂ ಮಾಡಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅನ್ವಯ ನಾಪತ್ತೆ ಪ್ರಕರಣ ದಾಖಲಾಯಿತು. ಪತ್ರಿಕಾ ಪ್ರಕಟಣೆಯಲ್ಲೂ ನಾಪತ್ತೆ ಘಟನೆ ಬಿತ್ತರಗೊಂಡಿತು.ಏನೇ ಮಾಡಿದರೂ ಅವರ ಸುಳಿವು ಸಿಗಲೇ ಇಲ್ಲ. ವಿಷಯ ಹೀಗಿರಲು ಪರಪ್ಪ ಬ್ಲಾಕ್ ವ್ಯಾಪ್ತಿಗೆ ಒಳಪಟ್ಟ ಮಾಲಕ್ಕಲ್ ಸಮೀಪದ ಅನಾಥಾಶ್ರಮದಲ್ಲಿನ ನಿವಾಸಿಗಳ ಆಧಾರ್ ಕಾಡರ್್ಗಾಗಿ ಭಾವಚಿತ್ರ ತೆಗೆಯಲು ಅಕ್ಷಯ ಕೇಂದ್ರದ ಸೆಬಾಸ್ಟಿನ್ ಹೋಗಿದ್ದರು. ಹಲವರ ಕಣ್ಣು (ಐರಿಸ್), ಬೆರಳು ಮುದ್ರೆಗಳನ್ನು ಸ್ಕ್ಯಾನ್ ಮಾಡಲಾಯಿತು.
ಸರತಿ ಸಾಲಿನಲ್ಲಿ ನಿಂತಿದ್ದ ಅನಾಮಿಕ ಹಾಗೂ ಅನಾಥ ವಯೋ ವೃದ್ದೆಯೋರ್ವರನ್ನು ಇದೇ ರೀತಿ ಸ್ಕ್ಯಾನಿಂಗ್ ಓಳಪಡಿದಾಗ ಈ ಮೊದಲೇ ಆಧಾರ್ ತೆಗೆಯಲಾಗಿರುವ ವಿವರ ಪತ್ತೆಯಾಯಿತು.
ಬೆರಳಚ್ಚು ದಾಖಲಿಸಿ ತಡಕಾಡಿದಾಗ ಕಂಪ್ಯೂಟರ್ ಸ್ಕ್ರೀನ್ ಆ ಮಹಿಳೆಯ ವಿಳಾಸ ಸಹಿತ ಪೂತರ್ಿ ವಿವರಗಳನ್ನು ಜಾತಕದಂತೆ ಹೇಳಿತು.
ಮಂಜೇಶ್ವರ ವಿಳಾಸ:
ಅನಾಥೆ ವಯೋವೃದ್ದಿಯ ಬಗ್ಗೆ ಮಂಜೇಶ್ವರ ವಿಳಾಸ ಕಂಡು ಬಂದೊಡನೆ ಪರಪ್ಪ ಬ್ಲಾಕ್ ಕೋಡರ್ಿನೇಟರ್ ಗ್ರೇಸಿ ಥೋಮಸ್, ಮಂಜೇಶ್ವರ ಬ್ಲಾಕ್ ಕೋಡರ್ಿನೇಟರ್ ಶ್ರೀನಿವಾಸ ಸ್ವರ್ಗ ಇವರಿಗೆ ಮಾಹಿತಿ ರವಾನಿಸಿದರು.
ಶ್ರೀನಿವಾಸ್ ತಕ್ಷಣ ಸ್ಪಂದಿಸಿ ಮಂಜೇಶ್ವರ ಪಂಚಾಯಿತಿ ಅಂಗನವಾಡಿ ಕಾರ್ಯಕತರ್ೆಯರಾದ ಸರಸ್ವತಿ ಹಾಗೂ ಲಕ್ಷ್ಮಿ ಅವರನ್ನು ಸಂಪಕರ್ಿಸಿ ವಿಳಾಸದ ಮಾಹಿತಿ ಆಗ್ರಹಿಸಿದರು. ವಿಳಾಸದಲ್ಲಿ ಕಂಡು ಬಂದಂತೆ ಬಾಗಿಯವರ ಮನೆಗೆ ಹೋಗಿ ವಿವರವನ್ನು ಸಂಬಂಧಿಕರಿಗೆ ತಿಳಿಸುವುದರೊಂದಿಗೆ ಅನಾಥಾಶ್ರಮಕ್ಕೆ ತೆರಳಿ ನಾಪತ್ತೆಯಾಗಿದ್ದ ತಮ್ಮ ಕುಟುಂಬದ ಸದಸ್ಯೆಯನ್ನು ಕಂಡರು.
ಬಾಗಿಯನ್ನು ಜೊತೆಯಲ್ಲಿ ಕರೆಡೊಯ್ಯುವಾಗ ಫಾದರ್ ಪೀಟರ್, ಅಕ್ಷಯ ಸಿಬ್ಬಂದಿಗಳಿಗೆ ಕೃತಜ್ಞತಾ ಭಾವದೊಂದಿಗೆ ನಮಿಸಿ, ಆಧಾರ್ ಕಾಡರ್್ ಗೆ ಮೌನ ಪ್ರಣಾಮ ನೀಡುವುದರೊಂದಿಗೆ ಬಾಗಿಯವರನ್ನು ತಮ್ಮ ಜೊತೆಯಲ್ಲಿ ಮನೆಗೆ ಕರೆದೊಯ್ದರು.
ಪತ್ತೆ ಅಸಾಧ್ಯವೆಂದು ಕೈ ಬಿಟ್ಟು ಹೋಗಿದ್ದ ನಾಪತ್ತೆ ಪ್ರಕರಣವೊಂದು ಬೆರಳ ತುದಿ ಒತ್ತುವುದರೊಂದಿಗೆ ಸುಖಾಂತ್ಯ ಕಂಡಿರುವುದು ಆಧಾರ್ ನ ಮೌಲ್ಯವನ್ನು ಉನ್ನತಮಟ್ಟಕ್ಕೇರಿಸಿರುವುದರ ಜೊತೆಗೆ ಮಹತ್ವದ ಬಗ್ಗೆ ಬೆಳಕುಚೆಲ್ಲಿದೆ.




